ವಿಚಾರಣೆ ನಡೆಯುತ್ತಿರುವಾಗಲೇ ಬೆಂಗಳೂರು ಪೊಲೀಸ್‌ ಆಯುಕ್ತರಿಗೆ ಸಿ.ಡಿ ಲೇಡಿ ಪತ್ರ: ಆರೋಪಗಳ ಸುರಿಮಳೆ!

ಬೆಂಗಳೂರು : 'ಆರೋಪಿಯನ್ನು ರಕ್ಷಿಸಲಾಗುತ್ತಿದೆ, ಹೀಗಾಗಿ ಎಸ್‌ಐಟಿ ತನಿಖೆ ಮೇಲೆ ವಿಶ್ವಾಸವಿಲ್ಲ' ಎಂದು ಸರಕಾರ ಮತ್ತು ಎಸ್‌ಐಟಿ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಮಾಡಿರುವ ಸಿ.ಡಿ ಪ್ರಕರಣದ ಯುವತಿ, ಬೆಂಗಳೂರು ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಅವರಿಗೆ ಪತ್ರ ಬರೆದಿದ್ದಾರೆ. ಮೂರು ಪುಟಗಳ ಪತ್ರ ಬರೆದಿರುವ ಯುವತಿ, ಸರಕಾರ ಮತ್ತು ವಿಶೇಷ ತನಿಖಾ ತಂಡದ ವಿರುದ್ಧ ಸರಣಿ ಆರೋಪಗಳನ್ನು ಮಾಡಿದ್ದಾಳೆ. ''ಏ.1ರಂದು ಆರ್‌.ಟಿ ನಗರದಲ್ಲಿನ ನನ್ನ ಪಿ.ಜಿ ಹಾಗೂ ಕೃತ್ಯ ನಡೆದ ಜಾರಕಿಹೊಳಿ ಅವರ ಮಂತ್ರಿ ಗ್ರೀನ್ಸ್‌ ಅಪಾರ್ಟ್‌ಮೆಂಟ್‌ಗೆ ಕರೆದೊಯ್ದಿದ್ದರು. ಏ.2ರಂದು ಮತ್ತೆ ಹೇಳಿಕೆ ದಾಖಲಿಸಿಕೊಳ್ಳಲಾಯಿತು. ಈ ಪ್ರಕ್ರಿಯೆ ನೋಡುತ್ತಿದ್ದರೆ ನಾನು ಸಂತ್ರಸ್ತೆಯೋ, ಆರೋಪಿಯೋ ಎಂಬ ಅನುಮಾನ ಮೂಡಿದೆ. ಆರೋಪಿಗೆ ಕೇವಲ ಮೂರು ತಾಸು ವಿಚಾರಣೆ ನಡೆಸಲಾಗಿದೆ. ಮುಕ್ತವಾಗಿ ಓಡಾಡಿಕೊಂಡಿರುವ ಅವಕಾಶ ನೀಡಲಾಗಿದೆ. ಆದರೆ, ನನಗೆ ಒಂದು ದಿನವೂ ಬಿಡದೆ ನಿರಂತರ ವಿಚಾರಣೆ ನಡೆಸಲಾಗುತ್ತಿದೆ,'' ಎಂದು ಪತ್ರದಲ್ಲಿ ದೂರಿದ್ದಾರೆ. ನ್ಯಾಯಸಮ್ಮತ ವಿಚಾರಣೆಗೆ ಮನವಿ ''ಸರಕಾರಿ ಕೆಲಸ ಕೊಡಿಸುತ್ತೇನೆ ಎಂದು ನಂಬಿಸಿ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಲೈಂಗಿಕ ಸಂಪರ್ಕ ಮಾಡಿ, ಅತ್ಯಾಚಾರ ನಡೆಸಿ, ಜೀವ ಬೆದರಿಕೆ ಹಾಕಿದ ಬಗ್ಗೆ ದೂರು ನೀಡಿದ್ದು, ಕಬ್ಬನ್‌ಪಾರ್ಕ್ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ. ಭದ್ರತೆಗೆ ವ್ಯವಸ್ಥೆ ಮಾಡಿದ ಕಾರಣ ಮಾ.30ರಂದು ನ್ಯಾಯಾಲಯಕ್ಕೆ ಹಾಜರಾಗಿ ಸಿಆರ್‌ಪಿಸಿ 164ರಡಿ ಹೇಳಿಕೆ ದಾಖಲಿಸಿದ್ದೇನೆ. ಅಂದು ಎಸ್‌ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ಆಡುಗೋಡಿಯ ಟೆಕ್ನಿಕಲ್‌ ವಿಭಾಗಕ್ಕೆ ಕರೆದೊಯ್ದರು. ಎಸ್‌ಐಟಿ ಅಧಿಕಾರಿಗಳಾದ ಸಂದೀಪ್‌ ಪಾಟೀಲ್‌ ಮತ್ತು ಎಸಿಪಿ ಕವಿತಾ ಅವರು ಪ್ರಕರಣದ ಸಂಬಂಧ ಪ್ರಶ್ನೆ ಕೇಳಿದರು. ಎಲ್ಲ ವಿಚಾರಗಳನ್ನು ವಿವರಿಸಿದ್ದೇನೆ. ಮಾ.31ರಂದು ವೈದ್ಯಕೀಯ ಪರೀಕ್ಷೆ ನಂತರ ಸಿಆರ್‌ಪಿಸಿ ಕಲಂ 161ರ ಅಡಿ ಹೇಳಿಕೆ ದಾಖಲಿಸಿದರು,'' ಎಂದು ಪತ್ರದಲ್ಲಿ ವಿವರಿಸಿದ್ದಾರೆ. ಅಲ್ಲದೆ, ''ನನ್ನ ದೂರನ್ನು ಒಬ್ಬ ಸಂತ್ರಸ್ತ, ಅಸಹಾಯಕ ಯುವತಿಯಾಗಿ ನೋಡುವ ಮೂಲಕ ಸರಕಾರದ ಒತ್ತಡಗಳಿಗೆ ಮಣಿಯದೆ, ಆರೋಪಿಗೆ ಯಾವುದೇ ರಿಯಾಯಿತಿ ನೀಡದೆ ನ್ಯಾಯ ಸಮ್ಮತ ವಿಚಾರಣೆ ನಡೆಸಬೇಕು ಎಂದು ಕಳಕಳಿಯಿಂದ ಪ್ರಾರ್ಥಿಸುತ್ತೇನೆ,'' ಎಂದು ಆಯುಕ್ತರಿಗೆ ಯುವತಿ ಕೋರಿದ್ದಾರೆ.


from India & World News in Kannada | VK Polls https://ift.tt/3cNhhsY

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...