ಬೆಂಗಳೂರು: ಕೋವಿಡ್ ಎರಡನೇ ಅಲೆ ನಿಯಂತ್ರಿಸಲು ರಾಜ್ಯದಲ್ಲಿ ಕಠಿಣ ನಿಯಮ ಜಾರಿಗೊಳಿಸಲಾಗಿದೆ. ಸರಕಾರಕ್ಕೆ ಆರೂವರೆ ಕೋಟಿ ಜನರ ಆರೋಗ್ಯ ರಕ್ಷಣೆ ಮುಖ್ಯವಾಗಿದ್ದು, ಯಾರನ್ನೋ ಮೆಚ್ಚಿಸಲು ಈ ತೀರ್ಮಾನ ಬದಲಿಸಲಾಗದು. ಈ ಸಂಬಂಧದ ಟೀಕೆಗೆ ತಲೆಕೆಡಿಸಿಕೊಳ್ಳುವುದಿಲ್ಲಎಂದು ಆರೋಗ್ಯ ಮತ್ತು ವೈದ್ಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿ, ಕೆಲವರ ದೃಷ್ಟಿಯಲ್ಲಿ ನಾನು ಖಳನಾಯಕನಾಗಿ ಕಾಣಿಸುತ್ತಿರಬಹುದು. ಆದರೆ, ಜನರ ಆರೋಗ್ಯ ಕಾಪಾಡುವುದೇ ನನಗೆ ಆದ್ಯತೆಯಾಗಿದೆ. ಆರೋಗ್ಯ ಸಚಿವನಾಗಿ ಅಂತಃಕರಣದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. ಯಾರನ್ನಾದರೂ ಮೆಚ್ಚಿಸಬೇಕೆಂದು ನಿಯಮ ಸಡಿಲಿಸುವ ಪ್ರಶ್ನೆಯಿಲ್ಲ ಎಂದರು. ಚಿತ್ರರಂಗದವರ ಮನವಿಗೆ ಸ್ಪಂದಿಸಿರುವ ಸಿಎಂ ಅವರು ಕ್ರಮ ಕೈಗೊಂಡಿದ್ದಾರೆ. ಅದನ್ನು ತಪ್ಪು ಎಂದು ಹೇಳುವುದಿಲ್ಲ. ಅವರಿಗೂ ಒತ್ತಡ ಬಂದಿದ್ದರಿಂದ ಸ್ಪಂದಿಸಿದ್ದಾರೆ. ಹಾಗಂತ ಎಲ್ಲರಿಗೂ ರಿಯಾಯಿತಿ ನೀಡಲು ಸಾಧ್ಯವಿಲ್ಲ. ನಿಯಮ ಪಾಲನೆ ಹಾಗೂ ಜನರ ಜೀವನೋಪಾಯವೂ ಮುಖ್ಯ. ಅದಕ್ಕಾಗಿ ಕಠಿಣ ಕ್ರಮ ಕೈಗೊಳ್ಳದಿದ್ದರೆ ಮುಂಬರುವ ದಿನಗಳಲ್ಲಿ ದೊಡ್ಡ ಸಮಸ್ಯೆ ಎದುರಿಸಬೇಕಾಗಿ ಬರುತ್ತದೆ ಎಂದು ತಿಳಿಸಿದರು.
from India & World News in Kannada | VK Polls https://ift.tt/3miaTwS