ಖರ್ಗೆ ಹೇಳಿದ 'ವಿಷ'ದ ವಿಷಯ: ದಕ್ಷಿಣದ ರಾಜಕಾರಣದ ಪರಿಚಯ ಮಾಡಿಸಿದ ಕೇಸರಿ ಪಾಳೆಯ!

ಬೆಂಗಳೂರು: ಆರ್‌ಎಸ್‌ಎಸ್‌ ಮತ್ತು ಎಂಬ ವಿಷ ಕುಡಿದವರಿಗೆ ಸಾವು ಖಚಿತ ಎಂಬ ರಾಜ್ಯಸಭೆ ವಿಪಕ್ಷ ನಾಯಕ ಹೇಳಿಕೆಗೆ ರಾಜ್ಯ ಬಿಜೆಪಿ ಘಟಕ ಸೂಕ್ತ ತಿರುಗೇಟು ನಿಡಿದೆ. ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, ಮಲ್ಲಿಕಾರ್ಜುನ್ ಖರ್ಗೆ ಮೊದಲು ಕಾಂಗ್ರೆಸ್ ಪಕ್ಷವನ್ನು ಉಳಿಸಿಕೊಳ್ಳುವತ್ತ ಗಮನಹರಿಸುವುದು ಒಳಿತು ಎಂದು ವ್ಯಂಗ್ಯವಾಡಿದೆ. ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಕಲ್ಯಾಣ ಕರ್ನಾಟಕದ ವಿರೋಧಿ ಎಂದು ಕರೆದಿರುವ ಬಿಜೆಪಿ, ಕಾಂಗ್ರೆಸ್ ಹಿರಿಯ ನಾಯಕನಿಗೆ ದಕ್ಷಿಣದ ರಾಜಕಾರಣದ ಸ್ಥೂಲ ಪರಿಚಯ ಮಾಡಿಕೊಟ್ಟಿದೆ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ತಮಿಳುನಾಡಿನಲ್ಲಿ ಬಿಜೆಪಿ ಬೆಂಬಲಿತ ಸರ್ಕಾರವಿದೆ. ಪುದುಚೇರಿಯಲ್ಲಿ ಈ ಬಾರಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಆದರೂ ಖರ್ಗೆ ಅವರು ಬಿಜೆಪಿಗೆ ದಕ್ಷಿಣದಲ್ಲಿ ಸ್ಥಾನವಿಲ್ಲ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ ಎಂದು ಬಿಜೆಪಿ ವ್ಯಂಗ್ಯವಾಡಿದೆ. ಪುದುಚೇರಿಯಲ್ಲಿ ಕಾಂಗ್ರೆಸ್ ಶಾಶ್ವತವಾಗಿ ಬಾಗಿಲು ಮುಚ್ಚಲಿದ್ದು, ದಕ್ಷಿಣದ ಇತರ ರಾಜ್ಯಗಳಿಂದಲೂ ಶೀಘ್ರದಲ್ಲೇ ಗಂಟು ಮೂಟೆ ಕಟ್ಟಲಿದೆ. ಹೀಗಾಗಿ ಖರ್ಗೆ ಕಾಂಗ್ರೆಸ್ ಪಕ್ಷದ ಉಳಿವಿಗಾಗಿ ಶ್ರಮಿಸುವುದು ಒಳಿತು ಎಂದು ರಾಜ್ಯ ಬಿಜೆಪಿ ಘಟಕ ಸಲಹೆ ನೀಡಿದೆ. ಮಾನವರು ಚಿರಂಜೀವಿಗಳಲ್ಲ ಎಂದಿರುವ ಬಿಜೆಪಿ, ಅಧಿಕಾರ ಶಾಶ್ವತ ಎಂಬ ಕಾಂಗ್ರೆಸ್‌ನ ಸೊಕ್ಕಿನ ರಾಜಕಾರಣದ ಕಾಲ ಮುಗಿದಿದೆ ಎಂಬುದನ್ನು ಖರ್ಗೆ ನೆನಪಿಟ್ಟಿಕೊಳ್ಳಬೇಕು ಎಂದು ಕಾಲೆಳೆದಿದೆ. ಆರ್‌ಎಸ್‌ಎಸ್‌ ಮತ್ತು ಬಿಜೆಪಿ ವಿಷವಿದ್ದಂತೆ, ಅದನ್ನು ಕುಡಿದವರಿಗೆ ಸಾವು ಖಚಿತ ಎಂದಿದ್ದ ಮಲ್ಲಿಕಾರ್ಜುನ್ ಖರ್ಗೆ, ತಮಿಳುನಾಡು, ಪುದುಚೇರಿ ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿ ಬಿಜೆಪಿ ಬಲಗೊಳ್ಳಲು ಬಿಡುವುದಿಲ್ಲ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.


from India & World News in Kannada | VK Polls https://ift.tt/2R0UGAL

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...