ಚಿಂಚೋಳಿಯಲ್ಲಿ ಬೆಳ್ಳಂಬೆಳಗ್ಗೆ ಲಘು ಭೂಕಂಪ: ಗ್ರಾಮಸ್ಥರಿಗೆ 7 ಬಾರಿ ಕೇಳಿಸಿತು ವಿಚಿತ್ರ ಶಬ್ಧ!

ಕಲಬುರಗಿ: ತಾಲೂಕಿನ ಗಡಿಕೇಶ್ವಾರ ಗ್ರಾಮದಲ್ಲಿ ಶುಕ್ರವಾರ ನಸುಕಿನ ಜಾವದಲ್ಲಿ ಭೂಮಿ ಕಂಪಿಸಿದ ಅನುಭವ ಉಂಟಾಗಿದೆ. ಅದಲ್ಲದೆ ಅದರೊಂದಿಗೆ ಹಲವಾರು ಬಾರಿ ಭೂಮಿಯಿಂದ ಸದ್ದು ಹೊರಬರುತ್ತಿರುವ ಘಟನೆ ನಡೆದಿದೆ. ನಸುಕಿನ ಜಾವ 3-40 ನಿಮಿಷಕ್ಕೆ ಭೂಮಿ ಕಂಪಿಸಿದೆ. ಇದು ಖಂಡಿತವಾಗಿ ಭೂಕಂಪ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಇದಾದ ಕೆಲವೇ ಸಮಯದ ಬಳಿಕ ಭೂಮಿಯಿಂದ 7ಬಾರಿ ವಿಚಿತ್ರ ರೀತಿಯ ಸದ್ದು ಕೇಳಿ ಬಂದಿದೆ. ಇದರಿಂದಾಗಿ ಇಡೀ ಗ್ರಾಮದಲ್ಲಿ ಭಯದ ವಾತಾವರಣ ಉಂಟಾಗಿದೆ. ಜನರು ನಸುಕಿನ ವೇಳೆಯಲ್ಲಿ ಮನೆಗಳಿಂದ ಹೊರಬಂದು ದೇವಸ್ಥಾನದಲ್ಲಿ ಹಾಗೂ ಇತರೆ ಸಾರ್ವಜನಿಕ ಸ್ಥಳದಲ್ಲಿ ಸಮಯ ಕಳೆಯುವಂತಾಗಿದೆ ಎಂದು ಗ್ರಾ.ಪಂ ಮಾಜಿ ಸದಸ್ಯ ವೀರೇಶ ಬೆಳಕೇರಿ, ಸಿದ್ದು ಹಲಚೇರಾ ಮತ್ತು ಮಂಗಳಮೂರ್ತಿ ತಿಳಿಸಿದರು.


from India & World News in Kannada | VK Polls https://ift.tt/2OdrNQE

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...