‘ಬಿಎಸ್‌ವೈ-ಈಶ್ವರಪ್ಪ ನಡುವಿನ ಭಿನ್ನಮತ 4 ಗೋಡೆಗಳ ಮಧ್ಯೆ ಚರ್ಚೆ ಆಗುವಂಥದ್ದು’; ಶ್ರೀರಾಮುಲು

ರಾಯಚೂರು: ಸಿಎಂ ಮತ್ತು ಸಚಿವ ಈಶ್ವರಪ್ಪ ಅವರ ನಡುವಿನ ಭಿನ್ನಮತ ನಾಲ್ಕು ಗೋಡೆಗಳ ಮಧ್ಯೆ ಚರ್ಚೆಯಾಗುವಂಥದ್ದು. ಬಹಿರಂಗಗೊಂಡಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಈ ವಿಚಾರಕ್ಕೆ ಸಂಬಂಧಿಸಿ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಲಾಗುತ್ತದೆ ಎಂದು ಸಚಿವ ಹೇಳಿದ್ದಾರೆ. ಮಸ್ಕಿ ಕ್ಷೇತ್ರದ ಬಸಾಪುರದಲ್ಲಿ ಮಾತನಾಡಿದ ಸಚಿವ ಶ್ರೀರಾಮುಲು, ರಾಜ್ಯಪಾಲರಿಗೆ ಸಚಿವ ಈಶ್ವರಪ್ಪ ಪತ್ರ ಬರೆದಿರುವುದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಸರಕಾರ ವಜಾಗೊಳಿಸಲು ಆಗ್ರಹಿಸುತ್ತಿರುವುದು ಹಾಸ್ಯಾಸ್ಪದವಾಗಿದೆ. ಪತ್ರ ಬರೆದ ಮಾತ್ರಕ್ಕೆ ಸರಕಾರ ವಜಾಗೊಳಿಸಬೇಕೆಂದು ಕಾನೂನಿನಲ್ಲಿ ಹೇಳಲಾಗಿದೆಯೇ? ಈ ಹಿಂದೆ ಎಸ್‌ಎಂ ಕೃಷ್ಣ ಸರಕಾರದ ಅವಧಿಯಲ್ಲಿ ಆಗ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಸಹ ಸಿಎಂ ಬಗ್ಗೆ ಬಹಿರಂಗವಾಗೇ ಅಸಮಾಧಾನ ತೋಡಿಕೊಂಡಿದ್ದರು. ಆಗ ಸರಕಾರ ವಜಾ ಮಾಡಲಾಗಿತ್ತೇ ಎಂದು ಪ್ರಶ್ನಿಸಿದರು. ಮಸ್ಕಿ ಕ್ಷೇತ್ರದ ಅಭಿವೃದ್ಧಿ ಉದ್ದೇಶದಿಂದ ಪ್ರತಾಪಗೌಡ ಪಾಟೀಲ್ ಬಿಜೆಪಿ ಸೇರಿದ್ದಾರೆ ಎಂದ ರಾಮುಲು, ಬಿಜೆಪಿ ಪಕ್ಷಕ್ಕೆ ಕಾಂಗ್ರೆಸ್‌ನವರು ಆರೋಪಿಸಿದಂತೆ ಮಾರಾಟವಾಗಿಲ್ಲ. ರಾಜ್ಯದ ಬಿಜೆಪಿ ಸರಕಾರದ ಪರ ಅಲೆಯಿದ್ದು, ಮಸ್ಕಿ ಸೇರಿ ಉಪಚುನಾವಣೆಯಲ್ಲಿ ಗೆಲುವು ದೊರೆಯಲಿದೆ ಎಂದರು. ಅಲ್ಲದೇ ಮಸ್ಕಿ ಕ್ಷೇತ್ರದಲ್ಲಿ ನಡೆಯುತ್ತಿರುವ ನೀರಾವರಿ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬಿಜೆಪಿ ಸರಕಾರದ ಅವಧಿಯಲ್ಲಿಯೇ ಹೆಚ್ಚು ಅನುದಾನ ನೀಡಲಾಗಿದೆ ಎಂದರು. ಇನ್ನು ಎಸ್ಟಿ ಮೀಸಲಾತಿ ಬಗ್ಗೆ ಪ್ರಚಾರದ ವೇಳೆ ತಾವು ಹೇಳಿಕೆ ನೀಡಿದ್ದನ್ನು ನೀತಿ ಸಂಹಿತೆಯ ಉಲ್ಲಂಘನೆ ಎಂದು ವಿರೋಧಿಗಳು ಬಿಂಬಿಸುವ ಕಾರ್ಯ ಮಾಡುತ್ತಿದ್ದಾರೆ. ಆದರೆ ತಾವು ಸಮಾಜ ಕಲ್ಯಾಣ ಇಲಾಖೆಯ ಸಚಿವರಾಗಿ ಈ ಹಿಂದೆಯೇ ಎಸ್ಟಿ ಮೀಸಲು ಕುರಿತು ಪ್ರಚಾರದ ವೇಳೆ ನೀಡಿದ ಹೇಳಿಕೆ ನೀಡಿದ್ದು ಮತ ಗಳಿಸುವ ಉದ್ದೇಶದಿಂದ ಪ್ರಚಾರದಲ್ಲಿ ಮೀಸಲು ವಿಚಾರ ಪ್ರಸ್ತಾಪಿಸಿಲ್ಲ. ಮೀಸಲು ವಿಚಾರದಲ್ಲಿ ತಾವು ತಮ್ಮ ನಿಲುವಿಗೆ ಸದಾ ಬದ್ಧ ಎಂದರು.


from India & World News in Kannada | VK Polls https://ift.tt/2Pm4Z1U

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...