ಐಪಿಎಲ್ 2021: ಆರ್‌ಸಿಬಿ ತಂಡಕ್ಕೆ ಪರ್ಫೆಕ್ಟ್‌ ಪ್ಲೇಯಿಂಗ್ XI ಸೂಚಿಸಿದ ಆಕಾಶ್ ಚೋಪ್ರಾ!

ಬೆಂಗಳೂರು: ಚೊಚ್ಚಲ ಪ್ರಶಸ್ತಿ ಗೆಲುವನ್ನು ಎದುರು ನೋಡುತ್ತಿರುವ ತಂಡಕ್ಕೆ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಸಲುವಾಗಿ ಭಾರತ ಟೆಸ್ಟ್‌ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಆಕಾಶ್‌ ಚೋಪ್ರಾ, ತಮ್ಮ ಆಯ್ಕೆಯ ಅತ್ಯುತ್ತಮ ಪ್ಲೇಯಿಂಗ್‌ ಇಲೆವೆನ್‌ ರಚಿಸಿಕೊಟ್ಟಿದ್ದಾರೆ. ಟೂರ್ನಿಗೆ ಬಲಿಷ್ಠ ತಂಡ ಕಟ್ಟುವ ಸಲುವಾಗಿ ಈ ಬಾರಿಯ ಹರಾಜಿಗೂ ಮೊದಲು 12 ಆಟಗಾರರನ್ನು ಬಿಡುಗಡೆ ಮಾಡಿತ್ತು. 2016ರ ಬಳಿಕ ಐಪಿಎಲ್‌ 2020 ಟೂರ್ನಿಯಲ್ಲಿ ಆರ್‌ಸಿಬಿ ಮೊದಲ ಬಾರಿ ಪ್ಲೇ ಆಫ್ಸ್‌ ತಲುಪಿದ ಸಾಧನೆ ಮಾಡಿತ್ತು. ಆದರೂ ಕೂಡ ತಂಡದಲ್ಲಿ ಭಾರಿ ಸರ್ಜರಿ ಮಾಡಿ ಐಪಿಎಲ್ 2021 ಟೂರ್ನಿಗೆ ಬಲಿಷ್ಠ ತಂಡ ರಚಿಸಲು ಮುಂದಾಯಿತು. ಅಂತೆಯೇ ಫೆಬ್ರವರಿ 18ರಂದು ಚೆನ್ನೈನಲ್ಲಿ ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ಆರ್‌ಸಿಬಿ, ಆಸೀಸ್‌ನ ಆಲ್‌ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌, ನ್ಯೂಜಿಲೆಂಡ್‌ನ ವೇಗಿ ಕೈಲ್‌ ಜೇಮಿಸ್ಸನ್, ಆಸೀಸ್‌ ಆಲ್‌ರೌಂಡರ್‌ ಡ್ಯಾನ್‌ ಕ್ರಿಸ್ಟಿಯನ್‌ ಅವರನ್ನು ಖರೀದಿ ಮಾಡಿತು. ಜೊತೆಗೆ ಮೊಹ್ಮಮದ್‌ ಅಝರುದ್ದೀನ್ ಮತ್ತು ರಜತ್ ಪತ್ತಿದಾರ್‌ ಅವರಂತಹ ಯುವ ಪ್ರತಿಭೆಗಳನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡಿತು. ಹರಾಜಿನಲ್ಲಿ ಆರ್‌ಸಿಬಿ ತನ್ನ ಬಲ ಹೆಚ್ಚಿಸಿಕೊಳ್ಳುವ ಎಲ್ಲ ಆಟಗಾರರನ್ನು ಖರೀದಿ ಮಾಡಿತು. ಆದರೆ, ಮಧ್ಯಮ ಕ್ರಮಾಂಕ ಕೊಂಚ ದುರ್ಬಲವಾಗಿದೆ ಎಂದು ಆಕಾಶ್‌ ಚೋಪ್ರಾ ಅಭಿಪ್ರಾಯ ಪಟ್ಟಿದ್ದಾರೆ. ಇದೇ ಕಾರಣಕ್ಕೆ ಕೊಹ್ಲಿ ಆರಂಭಿಕರಾಗಿ ಆಡುವಾಗ ಮಧ್ಯಮ ಕ್ರಮಾಂಕದಲ್ಲಿ ಗ್ಲೆನ್‌ ಮ್ಯಾಕ್ಸ್‌ವೆಲ್ ಮತ್ತು ಡ್ಯಾನ್‌ ಕ್ರಿಸ್ಟಿಯನ್‌ ಆಡಲೇ ಬೇಕು ಎಂದಿದ್ದಾರೆ. "ವಿರಾಟ್‌ ಕೊಹ್ಲಿ ಮತ್ತು ದೇವದತ್‌ ಪಡಿಕ್ಕಲ್‌ (ಕೊರೊನಾ ಪಾಸಿಟೀವ್ ಕಾರಣ ಆರಂಭಿಕ ಪಂದ್ಯಗಳಿಗೆ ಅಲಭ್ಯ) ಆರಂಭಿಕರಾಗಿ ಆಡಿದರೆ, ರಜಸ್‌ ಪತ್ತಿದಾರ್‌ ಅವರಿಗೆ 3ನೇ ಕ್ರಮಾಂಕ ನೀಡಬೇಕು. ನಂತರ ಎಬಿ ಡಿ'ವಿಲಿಯರ್ಸ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌ ಹಾಗೂ 6ನೇ ಕ್ರಮಾಂಕದಲ್ಲಿ ಡ್ಯಾನ್‌ ಕ್ರಿಸ್ಟಿಯನ್ ಆಡಬೇಕು," ಎಂದು ಆಕಾಶ್‌ ಹೇಳಿದ್ದಾರೆ. "ಪತ್ತಿದಾರ್‌ ಉತ್ತಮ ಬ್ಯಾಟ್ಸ್‌ಮನ್‌. ಮ್ಯಾಕ್ಸ್‌ವೆಲ್‌ 5ನೇ ಕ್ರಮಾಂಕಕ್ಕೆ ಸೂಕ್ತ. ಆದರೆ ಅವರಿಗೆ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬಡ್ತಿ ನೀಡುವುದಾದರೆ ಪತ್ತಿದಾರ್‌ ಅವರನ್ನು ಕೆಳಗೆ ಆಡಿಸುವಂತ್ತಾಗುತ್ತದೆ. ಇನ್ನು ಅಝರುದ್ದೀನ್ ಅವರನ್ನು ಓಪನರ್‌ ಆಗಿಯೇ ಆಡಿಸಬೇಕು. ಈ ಇಬ್ಬರು ಯುವ ಆಟಗಾರರು ಅಗ್ರ ಕ್ರಮಾಂಕದಲ್ಲಿ ಆಡಿದ್ದೇ ಆದರೆ ಮಧ್ಯಮ ಕ್ರಮಾಂಕದಲ್ಲಿ ಡ್ಯಾನ್‌ ಕ್ರಿಸ್ಟಿಯನ್‌ ಸೇವೆ ಅನಿವಾರ್ಯವಾಗಲಿದೆ," ಎಂದಿದ್ದಾರೆ. ಬೌಲಿಂಗ್‌ ವಿಭಾಗ ಈ ಬಾರಿ ಬಲಿಷ್ಠವಾಗಿ ಕಾಣಿಸುತ್ತಿದೆ. ಬಹುತೇಕ ಭಾರತೀಯ ಆಟಗಾರರೇ ಆರ್‌ಸಿಬಿ ತಂಡ ಬೌಲಿಂಗ್‌ ಬಲವಾಗಿರುವುದು ವಿಶೇಷ. "ಏಳನೇ ಕ್ರಮಾಂಕದಲ್ಲಿ ಆಲ್‌ರೌಂಡರ್‌ ವಾಷಿಂಗ್ಟನ್‌ ಸುಂದರ್‌ ಆಡಲಿದ್ದು, 8ನೇ ಕ್ರಮಾಂಕವನ್ನು ಕಿವೀಸ್‌ ತಾರೆ ಕೈಲ್‌ ಜೇಮಿಸನ್‌ಗೆ ನೀಡಬಹುದಾಗಿದೆ. ನವದೀಪ್‌ ಸೈನಿ, ಮೊಹಮ್ಮದ್‌ ಸಿರಾಜ್‌ ಮತ್ತು ಯುಜ್ವೇಂದ್ರ ಚಹಲ್‌ ತಂಡದ ಪ್ರಮುಖ ಬೌಲರ್‌ಗಳು. ಜೇಮಿಸನ್, ಕ್ರಿಸ್ಟಿಯನ್, ಮ್ಯಾಕ್ಸ್‌ವೆಲ್‌ ಮತ್ತು ಎಬಿ ಡಿ'ವಿಲಿಯರ್ಸ್‌ ತಂಡದಲ್ಲಿ ಆಡಬೇಕಾದ ನಾಲ್ಕು ವಿದೇಶಿ ಆಟಗಾರರಾಗಿದ್ದಾರೆ," ಎಂದು ಚೋಪ್ರಾ ತಮ್ಮ ಪ್ಲೇಯಿಂಗ್‌ ಇಲೆವೆನ್‌ ರಚನೆಯನ್ನು ವಿವರಿಸಿದ್ದಾರೆ. ಆಕಾಶ್‌ ಆಯ್ಕೆಯ ಆರ್‌ಸಿಬಿ ತಂಡದ ಅತ್ಯುತ್ತಮ ಇಲೆವೆನ್ 1. ವಿರಾಟ್‌ ಕೊಹ್ಲಿ (ಓಪನರ್‌/ನಾಯಕ) 2. ದೇವದತ್‌ ಪಡಿಕ್ಕಲ್/ಮೊಹಮ್ಮದ್‌ ಅಝರುದ್ದೀನ್ (ಓಪನರ್‌) 3. ರಜತ್‌ ಪತ್ತಿದಾರ್‌ (ಮೂರನೇ ಕ್ರಮಾಂಕದ ಬ್ಯಾಟ್ಸ್‌ಮನ್‌) 4. ಎಬಿ ಡಿ'ವಿಲಿಯರ್ಸ್‌ (ನಾಲ್ಕನೇ ಕ್ರಮಾಂಕದ ಬ್ಯಾಟ್ಸ್‌ಮನ್‌/ವಿಕೆಟ್‌ಕೀಪರ್‌) 5. ಗ್ಲೆನ್ ಮ್ಯಾಕ್ಸ್‌ವೆಲ್‌ (ಆಲ್‌ರೌಂಡರ್‌) 6. ಡ್ಯಾನ್‌ ಕ್ರಿಸ್ಟಿಯನ್‌ (ಆಲ್‌ರೌಂಡರ್‌) 7. ವಾಷಿಂಗ್ಟನ್ ಸುಂದರ್‌ (ಆಲ್‌ರೌಂಡರ್‌) 8. ಕೈಲ್‌ ಜೇಮಿಸನ್ (ಆಲ್‌ರೌಂಡರ್‌) 9. ಮೊಹಮ್ಮದ್‌ ಸಿರಾಜ್ (ಬಲಗೈ ವೇಗಿ) 10. ನವದೀಪ್‌ ಸೈನಿ (ಬಲಗೈ ವೇಗಿ) 11. ಯುಜ್ವೇಂದ್ರ ಚಹಲ್ (ಲೆಗ್‌ ಸ್ಪಿನ್ನರ್‌) ಆರ್‌ಸಿಬಿ ಪಂದ್ಯಗಳ ವೇಳಾಪಟ್ಟಿ
  • 01. 09 ಏಪ್ರಿಲ್, ರಾತ್ರಿ 7.30: ಮುಂಬೈ ಇಂಡಿಯನ್ಸ್ vs ಆರ್‌ಸಿಬಿ (ಸ್ಥಳ: ಚೆನ್ನೈ)
  • 02. 14 ಏಪ್ರಿಲ್, ರಾತ್ರಿ 7.30: ಸನ್‌ರೈಸರ್ಸ್‌ ಹೈದರಾಬಾದ್‌ vs ಆರ್‌ಸಿಬಿ (ಸ್ಥಳ: ಚೆನ್ನೈ)
  • 03. 18 ಏಪ್ರಿಲ್, ಮಧ್ಯಾಹ್ನ 3.30: ಕೋಲ್ಕತಾ ನೈಟ್‌ ರೈಡರ್ಸ್‌ vs ಆರ್‌ಸಿಬಿ (ಸ್ಥಳ: ಚೆನ್ನೈ)
  • 04. 22 ಏಪ್ರಿಲ್, ರಾತ್ರಿ 7.30: ರಾಜಸ್ಥಾನ್‌ ರಾಯಲ್ಸ್‌ vs ಆರ್‌ಸಿಬಿ (ಸ್ಥಳ: ಮುಂಬೈ)
  • 05. 25 ಏಪ್ರಿಲ್, ಮಧ್ಯಾಹ್ನ 3.30: ಚೆನ್ನೈ ಸೂಪರ್‌ ಕಿಂಗ್ಸ್‌ vs ಆರ್‌ಸಿಬಿ (ಸ್ಥಳ: ಮುಂಬೈ)
  • 06. 27 ಏಪ್ರಿಲ್, ರಾತ್ರಿ 7.30: ಡೆಲ್ಲಿ ಕ್ಯಾಪಿಟಲ್ಸ್‌ vs ಆರ್‌ಸಿಬಿ (ಸ್ಥಳ: ಅಹ್ಮದಾಬಾದ್)
  • 07. 30 ಏಪ್ರಿಲ್, ರಾತ್ರಿ 7.30: ಪಂಜಾಬ್‌ ಕಿಂಗ್ಸ್‌ vs ಆರ್‌ಸಿಬಿ (ಸ್ಥಳ: ಅಹ್ಮದಾಬಾದ್)
  • 08. 03 ಮೇ, ರಾತ್ರಿ 7.30: ಕೋಲ್ಕತಾ ನೈಟ್‌ ರೈಡರ್ಸ್‌ vs ಆರ್‌ಸಿಬಿ (ಸ್ಥಳ: ಅಹ್ಮದಾಬಾದ್)
  • 09. 06 ಮೇ, ರಾತ್ರಿ 7.30: ಪಂಜಾಬ್‌ ಕಿಂಗ್ಸ್‌ vs ಆರ್‌ಸಿಬಿ (ಸ್ಥಳ: ಅಹ್ಮದಾಬಾದ್)
  • 10. 09 ಮೇ, ರಾತ್ರಿ 7.30: ಸನ್‌ರೈಸರ್ಸ್‌ ಹೈದರಾಬಾದ್ vs ಆರ್‌ಸಿಬಿ (ಸ್ಥಳ: ಕೋಲ್ಕತಾ)
  • 11. 14 ಮೇ, ರಾತ್ರಿ 7.30: ಡೆಲ್ಲಿ ಕ್ಯಾಪಿಟಲ್ಸ್‌ vs ಆರ್‌ಸಿಬಿ (ಸ್ಥಳ: ಕೋಲ್ಕತಾ)
  • 12. 16 ಮೇ, ಮಧ್ಯಾಹ್ನ 3.30: ರಾಜಸ್ಥಾನ್ ರಾಯಲ್ಸ್‌ vs ಆರ್‌ಸಿಬಿ (ಸ್ಥಳ: ಕೋಲ್ಕತಾ)
  • 13. 20 ಮೇ, ರಾತ್ರಿ 7.30: ಮುಂಬೈ ಇಂಡಿಯನ್ಸ್‌ vs ಆರ್‌ಸಿಬಿ (ಸ್ಥಳ: ಕೋಲ್ಕತಾ)
  • 14. 23 ಮೇ, ರಾತ್ರಿ 7.30: ಚೆನ್ನೈ ಸೂಪರ್‌ ಕಿಂಗ್ಸ್‌ vs ಆರ್‌ಸಿಬಿ (ಸ್ಥಳ: ಕೋಲ್ಕತಾ)
ಐಪಿಎಲ್ 2021 ಟೂರ್ನಿಗೆ ಆರ್‌ಸಿಬಿ ತಂಡ ಹೀಗಿದೆವಿರಾಟ್‌ ಕೊಹ್ಲಿ (ನಾಯಕ), ಎಬಿ ಡಿ'ವಿಲಿಯರ್ಸ್‌, ಯುಜ್ವೇಂದ್ರ ಚಹಲ್, ದೇವದತ್ ಪಡಿಕ್ಕಲ್, ನವದೀಪ್ ಸೈನಿ, ವಾಷಿಂಗ್ಟನ್ ಸುಂದರ್‌, ಮೊಹಮ್ಮದ್ ಸಿರಾಜ್, ಕೇನ್ ರಿಚರ್ಡ್ಸನ್, ಆಡಮ್‌ ಝಾಂಪ, ಫಿನ್ ಆಲೆನ್, ಶಹಬಾಝ್ ಅಹ್ಮದ್, ಪವನ್ ದೇಶಪಾಂಡೆ, ಕೈಲ್‌ ಜೇಮಿಸನ್, ಗ್ಲೆನ್‌ ಮ್ಯಾಕ್ಸ್‌ವೆಲ್, ಡ್ಯಾನ್‌ ಕ್ರಿಸ್ಟಿಯನ್, ಸಚಿನ್ ಬೇಬಿ, ರಜತ್ ಪತ್ತಿದಾರ್, ಮೊಹಮ್ಮದ್‌ ಅಝರುದ್ದೀನ್, ಸುಯಶ್ ಪ್ರಭುದೇಸಾಯಿ, ಕೆಎಸ್‌ ಭರತ್, ಡೇನಿಯಲ್‌ ಸ್ಯಾಮ್ಸ್‌, ಹರ್ಷಲ್‌ ಪಟೇಲ್.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3wqufog

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...