ಛತ್ತೀಸ್‌ಗಡದಲ್ಲಿ ಕೆಂಪು ಉಗ್ರರಿಂದ ಮರಣ ಮೃದಂಗ: ನಕ್ಸಲ್ ದಾಳಿಗೆ 22 ಯೋಧರು ಹುತಾತ್ಮ

ಸುಕ್ಮಾ (): ಛತ್ತೀಸ್‌ಗಡದಲ್ಲಿ ಆರ್ಭಟಿಸಿದ್ಧಾರೆ. ಭಾನುವಾರ ನಕ್ಸಲೀಯರು ಪೈಶಾಶಿಕ ಕೃತ್ಯ ಎಸಗಿದ್ದು, ಕೆಂಪು ಉಗ್ರರ ದಾಳಿಗೆ 22 ಭದ್ರತಾ ಸಿಬ್ಬಂದಿ ವೀರ ಮರಣವನ್ನಪ್ಪಿದ್ದಾರೆ. ಇಲ್ಲಿನ ಸುಕ್ಮಾ-ಬಿಜಾಪುರ ಗಡಿ ಬಳಿ ನಕ್ಸಲೀಯರೊಂದಿಗಿನ ಎನ್‌ಕೌಂಟರ್‌ನಲ್ಲಿ 22 ಯೋಧರು ಹುತಾತ್ಮರಾಗಿದ್ದಾರೆ. ಏಕಾಏಕಿ ನಡೆದ ಈ ದಾಳಿಯಲ್ಲಿ ಎರಡೂ ಕಡೆಯವರು ತಮ್ಮ ಪ್ರಾಣ ಕಳೆದುಕೊಂಡಿದ್ದು, ನಕ್ಸಲೀಯರ ಈ ಪೈಶಾಚಿಕ ಕೃತ್ಯಕ್ಕೆ ತೀವ್ರ ಖಂಡನೆ ವ್ಯಕ್ತವಾಗಿದೆ. ದಾಳಿ ಬಳಿಕ ಹಲವು ನಕ್ಸಲೀಯರು ಸ್ಥಳದಿಂದ ಪರಾರಿಯಾಗಿದ್ದಾರೆ. ದಾಳಿಯ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೇ ನಕ್ಸಲೀಯರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಯೋಧರ ಬಲಿದಾನವನ್ನು ವ್ಯರ್ಥವಾಗಲು ಬಿಡುವುದಿಲ್ಲ ಎಂದು ಹೇಳಿರುವ ಅಮಿತ್ ಶಾ, ಹಾವಳಿ ತಡೆಗಟ್ಟಲು ಕೇಂದ್ರ ಗೃಹ ಇಲಾಖೆ ಕಠಿಣ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ. ಸದ್ಯ ಎನ್‌ಕೌಂಟರ್ ಸ್ಥಳದಿಂದ ಪರಾರಿಯಾಗಿರುವ ನಕ್ಸಲೀಯರಿಗಾಗಿ ಶೋಧ ಕಾರ್ಯ ಮುಂದುವರೆದಿದ್ದು, ಭದ್ರತಾ ಪಡೆಗಳು ಇಡೀ ಪ್ರದೇಶವನ್ನು ಸುತ್ತುವರೆದಿವೆ. ಹುತಾತ್ಮರಾದ ಯೋಧರ ಶವಗಳನ್ನು ಸಾಗಿಸಲು ಹಾಗೂ ಗಾಯಗೊಂಡಿರುವ ಯೋಧರನ್ನು ತುರ್ತಾಗಿ ಆಸ್ಪತ್ರೆಗೆ ರವಾನಿಸಲು ಭದ್ರತಾ ಸಿಬ್ಬಂದಿ ಹರಸಾಹಸ ನಡೆಸುತ್ತಿದ್ದಾರೆ. ದಟ್ಟ ಕಾಡಿನ ಮಧ್ಯೆ ಈ ಘಟನೆ ನಡೆದಿದ್ದು, ಹಠಾತ್ ದಾಳಿ ನಡೆಸಿ ಪರಾರಿಯಾಗಿರುವ ನಕ್ಸಲೀಯರ ಸೆರೆಗೆ ಭದ್ರತಾ ಪಡೆಗಳು ತುರ್ತು ಕಾರ್ಯಾಚರಣೆ ನಡೆಸುತ್ತಿವೆ.


from India & World News in Kannada | VK Polls https://ift.tt/3cKujaC

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...