ನಾನು ಸಿಡಿ ಲೇಡಿಗೆ ಹಣ ವರ್ಗಾಯಿಸಿಲ್ಲ: ಮಾಜಿ ಸಚಿವ ಡಿ.ಸುಧಾಕರ್ ಸ್ಪಷ್ಟನೆ

ಚಿತ್ರದುರ್ಗ: ನಾನು ಸಿಡಿಲೇಡಿಗೆ ಯಾವುದೇ ಹಣ ವರ್ಗಾವಣೆ ಮಾಡಿಲ್ಲ ಎಂದು ಮಾಜಿ ಸಚಿವ ಡಿ.ಸುಧಾಕರ್ ಹೇಳಿದ್ದಾರೆ. ಚಳ್ಳಕೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 'ಸಿಡಿಲೇಡಿ ಜತೆ ನನಗೆ ಯಾವುದೇ ಸಂಪರ್ಕ ಇಲ್ಲ'ಎಂದು ಸ್ಪಷ್ಟಪಡಿಸಿದರು. ಸಿಡಿ ಕೇಸಲ್ಲಿ ಮಾಜಿ ಸಚಿವರೊಬ್ಬರಿದ್ದಾರೆ ಎಂದು ಸುದ್ದಿ ಹರಿದಾಡುತ್ತಿತ್ತು. ನನಗೆ ಭಯ ಇದ್ದರೆ ಮೊದಲೇ ಇಂಜಕ್ಷನ್ ಆರ್ಡರ್ ತೆಗೆದುಕೊಳ್ಳುತ್ತಿದ್ದೆ ಎಂದರು. ನನ್ನ ಹೆಸರು ತಳಕು ಹಾಕಿಕೊಂಡಿದ್ದು ಕೇಳಿ ಆಶ್ಚರ್ಯವಾಗಿದೆ. ನನಗೆ ಪ್ರತಿದಿನ ಅನೇಕ ಜನ ಕರೆ ಮಾಡುತ್ತಿರುತ್ತಾರೆ. ನಾನು ಡಿಕೆ ಶಿವಕುಮಾರ್ ಜೊತೆಯೂ ಇರುತ್ತೇನೆ. ಸಿದ್ದರಾಮಯ್ಯ ಜೊತೆಯೂ ಇರುತ್ತೇನೆ. ಅದಕ್ಕಾಗಿ ಈ ಕೇಸ್‌ನಲ್ಲಿ ತಳುಕು ಹಾಕುವುದು ತಪ್ಪುಎಂದರು. ಎಸ್ ಐಟಿ ತನಿಖೆಗೆ ಕರೆದರೆ ನಾನು ಉತ್ತರಿಸುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ. ಸುಧಾಕರ್‌ಗೆ ಅನೇಕ ಬಾರಿ ಕರೆ!ಸಿ.ಡಿ ಪ್ರಕರಣವು ನಿತ್ಯ ರೋಚಕ ತಿರುವುಗಳನ್ನು ಪಡೆಯುತ್ತಿದ್ದು, ಈಗ ಮಾಜಿ ಸಚಿವ, ಚಿತ್ರದುರ್ಗದ ಕಾಂಗ್ರೆಸ್‌ ಮುಖಂಡ ಡಿ.ಸುಧಾಕರ್‌ ಅವರನ್ನು ಸುತ್ತಿಕೊಂಡಿದೆ. ಸಿ.ಡಿ ಪ್ರಕರಣದ ಯುವತಿ ಜತೆಗೆ ಡಿ. ಸುಧಾಕರ್‌ ಅವರು ಕಳೆದ ಕೆಲವು ತಿಂಗಳಿಂದ ಬರೋಬ್ಬರಿ 35 ಬಾರಿ ಫೋನ್‌ ಸಂಪರ್ಕ ಹೊಂದಿದ್ದಾರೆ ಎಂಬ ಸ್ಫೋಟಕ ಮಾಹಿತಿ ಹೊರ ಬಿದ್ದಿದೆ. ಅಷ್ಟೇ ಅಲ್ಲದೆ, ಹಂತ- ಹಂತವಾಗಿ ಹಲವು ಬಾರಿ ಯುವತಿಗೆ ಹಣ ಕೊಟ್ಟಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ಆಕೆ ನನ್ನೊಂದಿಗೆ ಮಾತನಾಡಿರಬಹುದು ಎಂದು ಮಾಧ್ಯಮಗಳ ಜತೆ ಮಾತನಾಡುವ ವೇಳೆ ಡಿ. ಸುಧಾಕರ್‌ ಒಪ್ಪಿಕೊಂಡಿದ್ದಾರೆ. 2020ರ ಆಗಸ್ಟ್‌ ತಿಂಗಳಿಂದ ಹಿಡಿದು ರಮೇಶ್‌ ಜಾರಕಿಹೊಳಿ ಸಿ.ಡಿ ಬಿಡುಗಡೆಗೆ (ಮಾ.2) ಎರಡ್ಮೂರು ದಿನಗಳ ಹಿಂದೆಯೂ ಫೋನ್‌ನಲ್ಲಿ ಮಾತನಾಡಿದ್ದರು. ಯುವತಿಗೆ ಅಥವಾ ಯುವತಿಯ ಕಡೆಯವರಿಗೆ ಡಿ. ಸುಧಾಕರ್‌ ಹಣ ತಲುಪಿಸಿದ್ದರು ಎಂದು ಹೇಳಲಾಗಿದೆ. ಈ ಪ್ರಕರಣದಲ್ಲಿ ಹಲವು ರಾಜಕಾರಣಿಗಳು, ಉದ್ಯಮಿಗಳು, ಗಣ್ಯರು, ಪ್ರಭಾವಿಗಳು ಸಿಲುಕಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಈಗ ದಿನದಿಂದ ದಿನಕ್ಕೆ ಆ ಮಾತುಗಳು ನಿಜವಾಗುತ್ತಿವೆ.


from India & World News in Kannada | VK Polls https://ift.tt/3cP1Mkd

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...