ಡೈವೋರ್ಸ್ ಪಡೆದವರು ಮತ್ತೆ ಕೂಡಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ : ಶ್ರೀರಾಮುಲು ವ್ಯಂಗ್ಯ

ಚಿಕ್ಕಬಳ್ಳಾಪುರ: ಡೈವೋರ್ಸ್ ಪಡೆದ ಕಾಂಗ್ರೆಸ್ - ಜೆಡಿಎಸ್ ಮತ್ತೆ ಮರು ಮದುವೆ ಮಾಡಿಕೊಳ್ಳಲು ಸಿದ್ದತೆ ಮಾಡಿಕೊಳ್ಳುತ್ತಿದೆ ಎಂದು ಸಚಿವ ಹೇಳಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಸೋಮವಾರ ರೋಡ್‌ಶೋ ನಡೆಸಿದ ಸಂದರ್ಭ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರಕಾರ ಸ್ಥಿರವಾಗಿ ಉಳಿಯಬೇಕೆದೆ. ಇದಕ್ಕಾಗಿ ಉಪಚುನಾವಣೆಯಲ್ಲಿ 15 ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲ್ಲಬೇಕಿದೆ ಎಂದು ಹೇಳಿದರು. ಉಪಕಾರದ ಋಣ ತೀರಿಸಬೇಕು: ಸುಧಾಕರ್ ಅವರ ರಾಜೀನಾಮೆಯಿಂದಲೇ ನಾವೆಲ್ಲ ಮಂತ್ರಿಗಳಾಗಿದ್ದೇವೆ. ಅವರ ಋಣ ತೀರಿಸುವ ಕರ್ತವ್ಯ ನಮ್ಮೆಲ್ಲರ ಮೇಲಿದೆ. ಚಿಕ್ಕಬಳ್ಳಾಪುರದಲ್ಲಿ ಕೇವಲ ಶಾಸಕರನ್ನಷ್ಟೇ ಆಯ್ಕೆ ಮಾಡಿಕೊಳ್ಳುತ್ತಿಲ್ಲ. ಇಲ್ಲಿಂದ ಒಬ್ಬ ಮಂತ್ರಿಯನ್ನು ಅಯ್ಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು. ಕಾಂಗ್ರೆಸ್‌- ಜೆಡಿಎಸ್ ಒಳಒಪ್ಪಂದ: ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ - ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿದೆ. ಕಾಂಗ್ರೆಸ್ ಬಲಿಷ್ಟವಾಗಿರುವ ಕಡೆ ಜೆಡಿಎಸ್ ಬೆಂಬಲ, ಜೆಡಿಎಸ್ ಗಟ್ಟಿ ಇರುವ ಕಡೆ ಕಾಂಗ್ರೆಸ್ ಬೆಂಬಲ ಕೊಡುವಂತೆ ಒಪ್ಪಂದ ಮಾಡಿಕೊಂಡಿವೆ. ಒಂದೇ ಒಂದು ಕಾರಣದಿಂದ ಸುಧಾಕರ್‌ ಅವರನ್ನು ತುಳಿಯುವ ಕೆಲಸ ಮಾಡಲಾಗುತ್ತಿದೆ. ಸುಧಾಕರ್ ಏನು ತಪ್ಪು ಮಾಡಿದ್ದಾರೆ ಎಂದು ಅವರನ್ನು ಎಲ್ಲರೂ ತುಳಿಯುವ ಕೆಲಸ ಮಾಡುತ್ತಿದ್ದಾರೆ? ಚಿಕ್ಕಬಳ್ಳಾಪುರದಲ್ಲಿ ಅಭಿವೃದ್ಧಿ ಆಗಬಾರದಾ? ಇಲ್ಲಿ ಸುಧಾಕರ್ ನಾಯಕನಾಗಿ ಬೆಳೆಯಬಾರದಾ? ಎಂದು ರೋಡ್ ಶೋನಲ್ಲಿ ಮತದಾರರನ್ನು ಕುರಿತು ಶ್ರೀರಾಮುಲು ಪ್ರಶ್ನಿಸಿದರು. ಡೈವೋರ್ಸ್ ಪಡೆದವರು ಮತ್ತೆ ಕೂಡಿಕೊಳ್ಳಲು ಸಿದ್ಧತೆ: ಡೈವೋರ್ಸ್ ಪಡೆದ ಕಾಂಗ್ರೆಸ್ ಜೆಡಿಎಸ್ ಮತ್ತೆ ಮರು ಮದುವೆ ಮಾಡಿಕೊಳ್ಳಲು ಸಿದ್ದತೆ ಮಾಡಿಕೊಳ್ಳುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಹೊರಗಿಟ್ಟು ಮತ್ತೆ. ಮೈತ್ರಿ ಮಾಡಿಕೊಳ್ಳುವ ಜಪ ಮಾಡುತ್ತಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಅನ್ನು ರಾಜ್ಯದ ಜನತೆ ಎಲ್ಲಾ ರೀತಿಯಲ್ಲೂ ತಿರಸ್ಕರಿಸಿದ್ದಾರೆ. ಮತ್ತೆ ಮಧ್ಯಂತರ ಚುನಾವಣೆ ಬರುತ್ತೆ ಅಂತ ಹೇಳ್ತಾರೆ. ಇದೇನಾದರೂ ಆದರೆ ಅದೇ ಪರಿಸ್ಥಿತಿ, ಅದೇ ರೀತಿ ಆಗುತ್ತೆ ಇದಕ್ಕೆ ಜನತೆ ಅವಕಾಶ ಮಾಡಿಕೊಡಬಾರದು. ಜನಪರ ನಾಯಕ ಯಡಿಯೂರಪ್ಪ ಸರಕಾರ ಸ್ಥಿರವಾಗಿರುವಂತೆ ಆಶೀರ್ವಾದ ಮಾಡಬೇಕು ಎಂದು ಶ್ರೀರಾಮುಲು ಮನವಿ ಮಾಡಿದರು.


from India & World News in Kannada | VK Polls https://ift.tt/2DAvLtL

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...