
ಲಖನೌ: ಕೇಳಿದರೆ ಈಗ ಕಣ್ಣೀರು ಬರುವುದು ಗ್ಯಾರಂಟಿ. ಕೇಂದ್ರ ಸರಕಾರ ಏನೇ ಕ್ರಮ ಕೈಗೊಳ್ಳಲು ಮುಂದಾಗಿದರೂ ಈರುಳ್ಳಿ ಬೆಲೆ ಮಾತ್ರ ರಾಕೆಟ್ ವೇಗದಲ್ಲಿ ಮೇಲ್ಮುಖಕ್ಕೆ ಹಾರಿದೆ. ಈಗ ಈರುಳ್ಳಿಯನ್ನು ಕೊಳ್ಳುವುದು ದುಸ್ತರವೇ ಸರಿ. ಪರಿಸ್ಥಿತಿ ಹೀಗಿರುವಾಗ ಉತ್ತರ ಪ್ರದೇಶದ ವಾರಾಣಸಿ, ಲಖನೌನಲ್ಲಿ ಈರುಳ್ಳಿ ಖರೀದಿಸಲು ಸಾಲ ಕೊಡುವ ವ್ಯವಸ್ಥೆ ಬಂದಿದೆ. ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಲು ಸಮಾಜವಾದಿ ಪಕ್ಷದ ಕಾರ್ಯಕರ್ತರು ಈ ರೀತಿಯ ಕ್ರಮ ಕೈಗೊಂಡಿದ್ದಾರೆ. ಈ ಕುರಿತು ಸಮಾಜವಾದಿ ಪಕ್ಷದ ಕಾರ್ಯಕರ್ತರೊಬ್ಬರು ಖಾಸಗಿ ಸುದ್ದಿವಾಹಿನಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವು ಅಥವಾ ಬೆಳ್ಳಿ ಆಭರಣಗಳನ್ನು ಗಿರವಿ ಇಟ್ಟುಕೊಂಡು ಈರುಳ್ಳಿ ನೀಡುತ್ತಿದ್ದೇವೆ. ಈರುಳ್ಳಿ ಬೆಲೆ ಹೆಚ್ಚಳ ಮಾಡಿರುವುದನ್ನು ಪ್ರತಿಭಟಿಸಲು ಈ ರೀತಿಯ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ. ಉತ್ತರ ಪ್ರದೇಶದ ವಿಧಾನಸಭೆ ಹೊರ ಭಾಗದಲ್ಲಿ ಸಮಾಜವಾದಿ ಪಕ್ಷದ ಕಾರ್ಯಕರ್ತರು 40 ರೂ.ಗಳಿಗೆ ಈರುಳ್ಳಿಯನ್ನು ಮಾರಾಟ ಮಾಡಿದ್ದಾರೆ. ಈರುಳ್ಳಿ ಬೆಲೆ ದಿನದಿಂದ ದಿನಕ್ಕೆ ಆಕಾಶದ ಕಡೆ ಮುಖ ಮಾಡಿದೆ. ಇದು ಸಾಮಾನ್ಯ ನಾಗರಿಕನ ಮೇಲೆ ತೀವ್ರ ಪರಿಣಾಮ ಬೀರಿದೆ. ಈರುಳ್ಳಿ ದೈನಂದಿನ ಅಡುಗೆಗೆ ಬೇಕಾಗಿರುವ ಅತಿ ಮುಖ್ಯ ತರಕಾರಿಯಾಗಿದೆ. ಈಗ ಈರುಳ್ಳಿ ಖರೀದಿಸಬೇಕಾದರೆ ಆರ್ಥಿಕವಾಗಿ ಸದೃಢವಾಗಿರಬೇಕಾಗುತ್ತದೆ. ಪರಿಸ್ಥಿತಿ ಹೀಗಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಗೊಂಡಿದ್ದೇವೆ ಎಂದು ಕಾಂಗ್ರೆಸ್ ನಾಯಕ ಶೈಲೇಂದ್ರ ತಿವಾರಿ ತಿಳಿಸಿದ್ದಾರೆ. ಈರುಳ್ಳಿ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಬೇಡಿಕೆ ಪೂರೈಸಲು ಕೇಂದ್ರ ಸರಕಾರ ನವೆಂಬರ್ ತಿಂಗಳಿನಲ್ಲಿ 1.2 ಲಕ್ಷ ಮೆಟ್ರಿಕ್ ಟನ್ ಈರುಳ್ಳಿ ಆಮದು ಮಾಡಿಕೊಳ್ಳಲು ನಿರ್ಧರಿಸಿದೆ.
from India & World News in Kannada | VK Polls https://ift.tt/2Y4I8rw