
ಚಿಕ್ಕಬಳ್ಳಾಪುರ: ಬಿಜೆಪಿಗೆ ಅಧಿಕಾರ ಹಿಡಿಯುವ ತಂತ್ರ ಮಾತ್ರವೇ ಗೊತ್ತು. ಆದರೆ, ದೇಶ ಮುನ್ನಡೆಸುವುದು ಹೇಗೆ ಎಂದು ತಿಳಿದಿಲ್ಲ ಎಂದು ಮಾಜಿ ಕೇಂದ್ರ ಸಚಿವ ಸೋಮವಾರ ಹೇಳಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು. ದೇಶದ ಪ್ರಸ್ತುತ ಜಿಡಿಪಿ ಬೆಳವಣಿಗೆ ದರ ಶೇ. 4.5ಕ್ಕೆ ಕುಸಿದಿದೆ. ಇದು ಕಳೆದ ಏಳು ವರ್ಷದಲ್ಲೇ ಕನಿಷ್ಠ ಮಟ್ಟದ ಜಿಡಿಪಿ ವೃದ್ಧಿ ದರವಾಗಿದೆ ಎಂದು ಹೇಳಿದರು. ಯುಪಿಎ ಸರಕಾರದ ಅವಧಿಯಲ್ಲಿ ಕೃಷಿ ಉತ್ಪಾದನೆಯಲ್ಲಿ ಶೇ.4.5 ಇದ್ದದ್ದು, ಈಗ ಶೇ.2.5ಕ್ಕೆ ಕುಸಿದೆ. ಜತೆಗೆ ನಿರುದ್ಯೋಗ ಸಮಸ್ಯೆ, ಬಂಡವಾಳ ಹೂಡಿಕೆ ಕುಸಿತ ಸೇರಿದಂತೆ ಎಲ್ಲ ಪ್ರಮುಖ ಕ್ಷೇತ್ರಗಳಲ್ಲೂ ಬೆಳವಣಿಗೆ ದರ ತೀವ್ರ ಕುಸಿತ ಕಂಡಿದೆ. ಇದಷ್ಟೆ ಅಲ್ಲದೆ, ಸರಕಾರ ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಅಂಥವರು ನಮಗೆ ಪಾಠಸ ಮಾಡಲು ಬರುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇವರಿಗೆ (ಬಿಜೆಪಿ) ದೇಶ ಮುನ್ನಡೆಸುವುದು ಹೇಗೆ ಎಂಬುದೇ ಗೊತ್ತಿಲ್ಲ. ಆದರೆ, ಮತ ಸಂಪಾದನೆ, ಅಧಿಕಾರಕ್ಕೆ ಬರುವ ತಂತ್ರ ಚೆನ್ನಾಗಿ ಗೊತ್ತಿದೆ. ಹೀಗಾಗಿ ದೇಶದ ಪರಿಸ್ಥಿತಿ ದಿನೇದಿನೆ ಹದಗೆಡುತ್ತಿದೆ ಎಂದು ಹೇಳಿದ್ದಾರೆ.
from India & World News in Kannada | VK Polls https://ift.tt/37Xq4UD