
ಹೊಸ ದಿಲ್ಲಿ: ಬಾಂಗ್ಲಾದ ಅಕ್ರಮ ನುಸುಳುಕೋರರ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತಿರುವ ಬೆನ್ನಲ್ಲೇ, ಕೇಂದ್ರ ಬಿಜೆಪಿ ಸರ್ಕಾರದ ಇಬ್ಬರು ಅತ್ಯುನ್ನತ ನಾಯಕರನ್ನೇ ಕಾಂಗ್ರೆಸ್ ಪಕ್ಷ ಎನ್ನುತ್ತಿದೆ. ಸೋನಿಯಾ ಗಾಂಧಿ ಅವರನ್ನು ಅಕ್ರಮ ವಲಸಿಗರು ಎನ್ನುತ್ತೀರಿ. ಆದ್ರೆ, ನಿಮ್ಮ ಪಕ್ಷದ ನಾಯಕರೇ ಅಕ್ರಮ ವಲಸಿಗರು ಹಾಗೂ ನುಸುಳುಕೋರರು ಎಂದು ಕಾಂಗ್ರೆಸ್ ನಾಯಕ, ಸಂಸದ ಅಧೀರ್ ರಂಜನ್ ಚೌಧರಿ ಆರೋಪಿಸಿದ್ದಾರೆ. ಹೊಸ ದಿಲ್ಲಿಗೆ ಪ್ರಧಾನಿ ನರೇಂದ್ರ ಹಾಗೂ ಗೃಹ ಸಚಿವ ಗುಜರಾತ್‌ನಿಂದ ನವದೆಹಲಿಗೆ ವಲಸೆ ಬಂದಿದ್ದಾರೆ ಅನ್ನೋದು ಕಾಂಗ್ರೆಸ್ ಪಕ್ಷದ ನಾಯಕರ ವ್ಯಾಖ್ಯಾನ. ಕಾಂಗ್ರೆಸ್ ನಾಯಕರ ಈ ಹೇಳಿಕೆಗೆ ಬಿಜೆಪಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ಲೋಕಸಭೆಯಲ್ಲಿ ಅಧೀರ್ ರಂಜನ್ ಹೇಳಿಕೆ ಹೊರಬಿದ್ದ ಕೂಡಲೇ ಸಿಡಿದೆದ್ದು ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಅಧೀರ್ ರಂಜನ್ ಅವರ ಹೇಳಿಕೆಯನ್ನು ಖಂಡಿಸುತ್ತೇವೆ ಎಂದರು. ಕಾಂಗ್ರೆಸ್ ಪಕ್ಷದ ಅಧ್ಯಕ್ಷೆಯೇ ನುಸುಳುಕೋರರು ಎಂದ ಪ್ರಹ್ಲಾದ್ ಜೋಷಿ, ಕಾಂಗ್ರೆಸ್ ಪಕ್ಷಕ್ಕೆ ಪ್ರಜ್ಞೆ ಇದ್ದರೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಕಾಂಗ್ರೆಸ್ ಪಕ್ಷ ಕ್ಷಮೆ ಯಾಚನೆ ಮಾಡದಿದ್ದರೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರೇ ಕ್ಷಮೆ ಕೇಳಬೇಕು ಎಂದು ಪ್ರಹ್ಲಾದ್ ಜೋಷಿ ಪಟ್ಟು ಹಿಡಿದಿದ್ದಾರೆ. ಒಟ್ಟಿನಲ್ಲಿ, ದಿಲ್ಲಿಯಲ್ಲಿ, ಲೋಕಸಭೆಯಲ್ಲಿ ದಶಕಗಳಿಂದ ರಾಜ್ಯಭಾರ ಮಾಡುತ್ತಿರುವವರೇ ಮೂಲ ನಿವಾಸಿಗಳು, ಬೇರೆ ರಾಜ್ಯಗಳಿಂದ ಬಂದಿರುವ ಎಲ್ಲರೂ ವಲಸಿಗರು, ನುಸುಳುಕೋರರು ಎಂಬ ಧಾಟಿಯಲ್ಲಿ ಹೇಳಿಕೆ ಹೊರಬಿದ್ದಿದ್ದು, ಇದಕ್ಕೆ ಬಿಜೆಪಿ ಕೂಡಾ ತಕ್ಕ ಉತ್ತರ ನೀಡುತ್ತಿದೆ.
from India & World News in Kannada | VK Polls https://ift.tt/35UZgmi