ಲಂಡನ್: ಆಕೆ ಇನ್ನು ಶಾಲೆಗೆ ಹೋಗುತ್ತಿರುವ ಪುಟ್ಟ ಹುಡುಗಿ. ಹೆಸರು . ವೀನಸ್ ವೀಲಿಯಮ್ಸ್ ನಾಲ್ಕು ಗ್ರ್ಯಾನ್ ಸ್ಲ್ಯಾಮ್ ಪ್ರಶಸ್ತಿ ಗೆದ್ದಾಗ ಆಕೆ ಹುಟ್ಟಿಯೂ ಇರಲಿಲ್ಲ. ಮತ್ತೀಗ ಒಂದು ಕಾಲಕ್ಕೆ ವಿಶ್ವದ ನಂಬರ್ 1 ಸ್ಥಾನದಲ್ಲಿ ಮೆರೆದಿದ್ದ ವೀನಸ್‌ನನ್ನು 15 ವರ್ಷದ ಹುಡುಗಿ ಸೋಲಿಸಿದ್ದಾಳೆ. ಅದು ಕೂಡ ತನ್ನ ಪಾದಾರ್ಪಣೆ ಪಂದ್ಯದಲ್ಲಿ. ಕಳೆದ ನಾಲ್ಕು ದಿನದ ಹಿಂದೆ ಈ ಅಮೆರಿಕಾದ ಪುಟ್ಟ ಬಾಲೆ ಆಡಲು ಅವಕಾಶ ಪಡೆದ ಇಡೀ ಕ್ರೀಡಾ ಜಗತ್ತು ಆಕೆಯ ಕಡೆಗೆ ತಿರುಗಿ ನೋಡಿತ್ತು. ಕಾರಣ ಪ್ರತಿಷ್ಠಿತ ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯಲ್ಲಿ ಆಡಲು ಅವಕಾಶ ಪಡೆದ ಅತಿ ಕಿರಿಯ ಹೆಗ್ಗಳಿಕೆ ಈಕೆಯದು. ವೈಲ್ಡ್ ಕಾರ್ಡ್ ಮೂಲಕ ಅವಕಾಶ ಪಡೆದ ಬಾಲಕಿ ಮನಸ್ಸು ಮಾಡಿದರೆ ಏನನ್ನೂ ಬೇಕಾದರೂ ಸಾಧಿಸಬಲ್ಲೆ ಎಂಬ ಆತ್ಮವಿಶ್ವಾಸದ ಮಾತುಗಳನ್ನಾಡಿದ್ದಳು. ಮತ್ತೀಗ ಪಂದ್ಯಾವಳಿಯ ಮೊದಲ ಸುತ್ತಿನಲ್ಲೇ ಜಯಗಳಿಸಿ ವಿಶ್ವವೇ ಅವಳೆಡೆಗೆ ನೋಡುವಂತೆ ಮಾಡಿ ತೋರಿಸಿದ್ದಾಳೆ. ಸೋಮವಾರ ಐದು ಬಾರಿ ವಿಂಬಲ್ಡನ್ ಮುಡಿಗೇರಿಸಿಕೊಂಡಿರುವ 39 ವರ್ಷದ ವಿರುದ್ಧ ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ಮೊದಲ ಪಂದ್ಯ ಆಡಿದ ಆಕೆ 6-4 6-4 ಅಂತರದಲ್ಲಿ ವಿಶ್ವ ಮಟ್ಟದ ಕ್ರೀಡಾ ಜರ್ನಿಯನ್ನು ಭರ್ಜರಿಯಾಗಿ ಆರಂಭಿಸಿದ್ದಾಳೆ. 1991ರ ಬಳಿಕ ಇದೇ ಮೊದಲ ಬಾರಿಗೆ ಟೆನಿಸ್ ಮಹಿಳೆಯರ ಸಿಂಗಲ್ಸ್‌ನಲ್ಲಿ ಮೊದಲ ಸುತ್ತಿನಲ್ಲೇ ಗೆಲುವು ದಾಖಲಿಸಿದ ಅತಿ ಚಿಕ್ಕ ಆಟಗಾರ್ತಿ ಎಂಬ ಕೀರ್ತಿ ಈಕೆಯ ಪಾಲಾಗಿದೆ. ಕೊಕೊ ಎಂಬ ನಿಕ್ ನೇಮ್ ಹೊಂದಿರುವ ಬಾಲಕಿಯ ಆರಾಧ್ಯ ಆಟಗಾರರಲ್ಲಿ ವೀನಸ್ ಕೂಡ ಒಬ್ಬರು ಎಂಬುದು ವಿಶೇಷ. ''ಏನು ಹೇಳಬೇಕೆಂದು ತಿಳಿಯುತ್ತಿಲ್ಲ, ನಾನು ಪಂದ್ಯದ ಬಳಿಕ ಅತ್ತಿದ್ದು ಇದೇ ಮೊದಲ ಬಾರಿ. ಗೆಲುವು ದಾಖಲಿಸುತ್ತೇನೆಂದು ನಿಜಕ್ಕೂ ಅಂದುಕೊಂಡಿರಲಿಲ್ಲ, '' ಎಂದು ಬಾಲೆ ಗೆಲುವಿನ ಬಳಿಕ ಪ್ರತಿಕ್ರಿಯಿಸಿದ್ದಾಳೆ. ''ನನ್ನ ತಂದೆ ತಾಯಿಗಳ ಖುಷಿಗೆ ಪಾರವೇ ಇಲ್ಲ, ನಾನು ಒಂದೊಂದು ಪಾಯಿಂಟ್ ಗೆದ್ದಾಗಲೂ ಅಪ್ಪ ಕುಣಿದು ಕುಪ್ಪಳಿಸುತ್ತಿದ್ದರು. ನನ್ನ ತಂದೆ ತಾಯಿ ತಮ್ಮೆಲ್ಲ ಸಮಯವನ್ನು ನನಗೆ ಮತ್ತು ನನ್ನ ಸಹೋದರರಿಗೆ ಮೀಸಲಿಟ್ಟಿದ್ದಾರೆ. ಅದಕ್ಕೆ ಪ್ರತಿಫಲವಾಗಿ ನಾವು ಸಾಧಿಸಿ ತೋರಿಸುತ್ತೇವೆ'', ಎಂದಾಕೆ ಹೇಳುತ್ತಾಳೆ. ''ಅಭಿನಂದನೆಗಳು, ಹೀಗೆ ಮುಂದುವರಿ, ಗುಡ್ ಲಕ್'', ಎಂದು ವಿಲಿಯಮ್ಸ್ ಶುಭ ಹಾರೈಸಿದ್ದಕ್ಕೆ ಆಕೆ ಬಹಳ ಸಂತೋಷ ವ್ಯಕ್ತ ಪಡಿಸಿದ್ದಾಳೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2NpXFAs