ಟ್ಯಾಟೂ ಪ್ರಿಯ ಹಾರ್ದಿಕ್‌ರಿಂದ ಮಗದೊಂದು ಮೋಡಿ

ಮುಂಬಯಿ: ಕಳೆದ ಕೆಲವು ತಿಂಗಳುಗಳಲ್ಲಿ ಆಲ್‌ರೌಂಡರ್ ಅತಿ ಹೆಚ್ಚು ಯಶಸ್ಸನ್ನು ಸಾಧಿಸಿದ್ದಾರೆ. ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ವಿವಾದಕ್ಕೊಳಗಾಗಿರುವ ಪಾಂಡ್ಯ ತಾತ್ಕಾಲಿಕ ನಿಷೇಧಕ್ಕೊಳಗಾಗಿದ್ದರು. ತದಾ ಬಳಿಕ ಭರ್ಜರಿ ಕಮ್‌ಬ್ಯಾಕ್ ಮಾಡಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಪಾಂಡ್ಯ, ಬಳಿಕ ಏಕದಿನ ವಿಶ್ವಕಪ್‌ನಲ್ಲೂ ಭಾರತದ ಪರ ಗಮನಾರ್ಹ ಪ್ರದರ್ಶನ ನೀಡಿದ್ದರು. ಈ ನಡುವೆ ಬಿಡುವಿಲ್ಲದ ಕ್ರಿಕೆಟ್ ಹಿನ್ನಲೆಯಲ್ಲಿ ವೆಸ್ಟ್‌ಇಂಡೀಸ್ ಪ್ರವಾಸದಿಂದ ವಿಶ್ರಾಂತಿ ಸೂಚಿಸಲಾಗಿದೆ. ಪದೇ ಪದೇ ಗಾಯದ ಸಮಸ್ಯೆ ಕಾಣಿಸಿಕೊಳ್ಳುತ್ತಿರುವುದು ಸಹ ಹಾರ್ದಿಕ್‌ಗೆ ಅಗತ್ಯ ವಿಶ್ರಾಂತಿ ಸೂಚಿಸಲು ಕಾರಣವಾಗಿದೆ. ಇನ್ನೊಂದೆಡೆ ಮೈದಾನದ ಹೊರಗಡೆ ಸ್ಟೈಲಿಶ್ ಜೀವನ ಶೈಲಿಗೆ ಮೊರೆ ಹೋಗುತ್ತಿರುವ ಪಾಂಡ್ಯ, ಮೈಮೇಲೆ ಆಕರ್ಷಕ ಹಚ್ಚಿ ಗಮನ ಸೆಳೆದಿದ್ದಾರೆ. ಇದಕ್ಕೊಂದು ತಾಜಾ ಉದಾಹರಣೆಯೆಂಬಂತೆ ಕೈಯಲ್ಲಿ ಸಿಂಹದ ಟ್ಯಾಟೂ ಹಚ್ಚಿದ್ದಾರೆ. ಇದನ್ನು ಅಭಿಮಾನಿಗಳ ಜತೆಗೆ ಹಂಚಿಕೊಂಡಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2MgrAZG

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...