ಎಂಟರ ಘಟ್ಟದಲ್ಲಿ ಎಡವಿದ ಸಿಂಧೂ; ಸೆಮೀಸ್‌ಗೆ ಪ್ರಣೀತ್

ಟೊಕಿಯೋ: ಭಾರತದ ಅಗ್ರಮಾನ್ಯ ಆಟಗಾರ್ತಿ , ಪ್ರತಿಷ್ಠಿತ ಜಪಾನ್ ಓಪನ್ ಬ್ಯಾಡ್ಮಿಂಟನ್ 2019 ಟೂರ್ನಿಯಿಂದ ಹೊರಬಿದ್ದಿದ್ದಾರೆ. ಶುಕ್ರವಾರ ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಮುಖಾಮುಖಿಯಲ್ಲಿ ಸಿಂಧೂ ಅವರು ಜಪಾನ್‌ನವರೇ ಆದ ಸ್ಥಳೀಯ ಫೇವರಿಟ್ ಅಕೇನ್ ಯಮಗುಚಿ ವಿರುದ್ಧ 18-21, 15-21ರ ಅಂತರದಲ್ಲಿ ಮುಗ್ಗರಿಸಿದರು. ಇದರೊಂದಿಗೆ ಸತತ ಎರಡನೇ ಬಾರಿಗೆ ಅಕೇನ್ ವಿರುದ್ಧ ಸೋಲಿಗೆ ಶರಣಾಗಿದ್ದಾರೆ. ಕಳೆದ ವಾರವಷ್ಟೇ ಅಂತ್ಯಗೊಂಡ ಇಂಡೋನೇಷ್ಯಾ ಓಪನ್‌ನಲ್ಲೂ ಅಕೇನ್ ವಿರುದ್ಧವೇ ಫೈನಲ್‌ನಲ್ಲಿ ಮಣಿದಿರುವ ಸಿಂಧೂ ಗೆ ಕಿರೀಟ ನಷ್ಟವಾಗಿತ್ತು. ಇದೀಗ ಮಗದೊಂದು ಪ್ರತಿಷ್ಠಿತ ಟೂರ್ನಿಯನ್ನು ಕಳೆದುಕೊಳ್ಳುವಂತಾಗಿದೆ. ಪಂದ್ಯದ ಆರಂಭದಿಂದಲೇ ಸಿಂಧೂ ವಿರುದ್ಧ ಮೇಲುಗೈ ಸಾಧಿಸಿದ ಅಕೇನ್ ತದಾ ಬಳಿಕ ಸವಾರಿ ಮಾಡಿದರು. ಅಲ್ಲದೆ ಪಂದ್ಯದ ಮೇಲೆ ಸಂಪೂರ್ಣ ಹಿಡಿತವನ್ನು ಸಾಧಿಸಿ 50 ನಿಮಿಷಗಳಲ್ಲೇ ಗೆಲುವು ಬಾರಿಸಿದರು. ಇನ್ನೊಂದೆಡೆ ಪುರುಷ ಸಿಂಗಲ್ಸ್ ವಿಭಾಗದಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡುತ್ತಿರುವ ಸೆಮಿಫೈನಲ್‌ಗೆ ಮುನ್ನಡೆದಿದ್ದಾರೆ. ಇಂಡೋನೇಷ್ಯಾದ ಟಾಮಿ ಸುಗಿಯಾರ್ಟೊ ವಿರುದ್ಧ 21-12, 21-15ರ ಅಂತರದಲ್ಲಿ ಗೆದ್ದು ಬೀಗಿದರು. ಅಲ್ಲದೆ ಪಂದ್ಯವನ್ನು 36 ನಿಮಿಷಗಳಲ್ಲೇ ವಶಪಡಿಸಿಕೊಂಡರು. ಏತನ್ಮಧ್ಯೆ ಪುರುಷ ಡಬಲ್ಸ್ ವಿಭಾಗದಲ್ಲಿ ಸೋಲನ್ನು ಕಂಡಿರುವ ಸಾತ್ವಿಕ್ ರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಜೋಡಿಯು ಸಹ ಕೂಟದಿಂದಲೇ ನಿರ್ಗಮಿಸಿದೆ. ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್‌ನ ತಕೆಶಿ ಕಮುರ ಹಾಗೂ ಕೀಗೊ ಸೊನೊಡಾ ವಿರುದ್ಧ 21-19, 21-18ರ ಅಂತರದಲ್ಲಿ ಮುಗ್ಗರಿಸಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/32WrDQq

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...