ಔಟ್ ಆಗದಿದ್ದರೂ ಹೊರ ನಡೆದ ಯುವರಾಜ್ ಸಿಂಗ್

ಟೊರಂಟೊ: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಳಿಕ ಇದೇ ಮೊದಲ ಬಾರಿಗೆ ಟ್ವೆಂಟಿ-20 ಟೂರ್ನಮೆಂಟ್‌ನಲ್ಲಿ ಬ್ಯಾಟ್ ಹಿಡಿದಿರುವ ಔಟ್ ಆಗದಿದ್ದರೂ ಕ್ರೀಸ್ ಬಿಟ್ಟು ತೆರಳಿರುವುದು ಹೆಚ್ಚಿನ ಕುತೂಹಲವನ್ನುಂಟು ಮಾಡಿದೆ. ಎರಡನೇ ಆವೃತ್ತಿಯ ಗ್ಲೋಬಲ್ ಟಿ20 ಕೆನಡಾ ಟೂರ್ನಮೆಂಟ್‌ನಲ್ಲಿ ಟೊರಂಟೊ ನ್ಯಾಷನಲ್ಸ್ ತಂಡವನ್ನು ಮುನ್ನಡೆಸುತ್ತಿರುವ ಯುವಿ ಅವರ ಬ್ಯಾಟ್ ಹೆಚ್ಚೇನು ಸದ್ದು ಮಾಡಲಿಲ್ಲ. ವ್ಯಾಂಕೋವರ್ ನೈಟ್ಸ್ ವಿರುದ್ಧದ ಪಂದ್ಯದಲ್ಲಿ 27 ಎಸೆತಗಳಲ್ಲಿ 14 ರನ್ ಗಳಿಸಿದ್ದರು. ರಿಜ್ವಾನ್ ಚೀಮಾ ಅವರು ಎಸೆದ ಇನ್ನಿಂಗ್ಸ್‌ನ 17ನೇ ಓವರ್‌ನ ಎಸೆತವನ್ನು ಯುವರಾಜ್ ಸಂಪೂರ್ಣವಾಗಿ ಮಿಸ್ ಮಾಡಿಕೊಂಡರು. ಈ ಸಂದರ್ಭದಲ್ಲಿ ವಿಕೆಟ್ ಕೀಪರ್ ಗ್ಲೌಸ್‌ಗೆ ತಾಗಿದ ಚೆಂಡು ವಿಕೆಟ್ ಮೇಲೆ ಬಿತ್ತು. ಇದನ್ನು ಗಮನಿಸಿದ ಯುವಿ ತಾವು ಔಟ್ ಎಂದು ಭಾವಿಸಿ ಆನ್ ಫೀಲ್ಡ್ ನಿರ್ಣಯವನ್ನು ಕಾಯದೇ ಮೈದಾನ ತೊರೆದರು. ಅತ್ತ ವ್ಯಾಂಕೋವರ್ ತಂಡದ ನಾಯಕ ಸಹ ಬ್ಯಾಟಿಂಗ್ ವೈಫಲ್ಯವನ್ನು ಅನುಭವಿಸಿದ್ದರು. ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಸಲ್ಲಿಸಿರುವ ಯುವಿ, ಆಯ್ದ ಟ್ವೆಂಟಿ-20 ಟೂರ್ನಿಗಳಲ್ಲಿ ಮಾತ್ರ ಭಾಗವಹಿಸುತ್ತಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2K9s9lv

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...