ಅಜಾಂ ಖಾನ್‌ ಹೇಳಿಕೆಗೆ ಮಾಯಾವತಿ, ಸುಮಿತ್ರಾ ಮಹಾಜನ್‌ ಖಂಡನೆ

ಲಖನೌ: ಲೋಕಸಭೆಯಲ್ಲಿ ಸ್ಪೀಕರ್‌ ಸ್ಥಾನದಲ್ಲಿದ್ದ ಸಂಸದೆ ರಮಾ ದೇವಿ ಮೇಲೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಎಸ್‌ಪಿ ಸಂಸದ ವಿರುದ್ಧ ಬಿಎಸ್‌ಪಿ ಮುಖ್ಯಸ್ಥೆ ಗುಡುಗಿದ್ದಾರೆ. ಅಜಾಂ ಖಾನ್‌ ಕೇವಲ ರಮಾದೇವಿಯ ಕ್ಷಮೆಯಾಚಿಸದೇ, ಇಡೀ ಮಹಿಳೆಯರ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. ಸ್ಪೀಕರ್‌ ಓಂ ಬಿರ್ಲಾ ಅವರ ಅನುಪಸ್ಥಿತಿಯಲ್ಲಿ ಕಲಾಪ ನಡೆಸುತ್ತಿದ್ದ ರಮಾ ದೇವಿ ಅವರನ್ನು ಉದ್ದೇಶಿಸಿದ ಅಜಾಂ ಖಾನ್‌ ಮಾಡಿರುವ ಕಾಮೆಂಟ್‌ ಮಹಿಳೆಯರಿಗೆ ಮಾಡಿದ ಅವಮಾನ. ಕೇವಲ ಲೋಕಸಭೆಯಲ್ಲಿ ಕ್ಷಮೆಯಾಚಿಸಿದರೆ ಸಾಲದು. ಬದಲಾಗಿ ಎಲ್ಲ ಮಹಿಳೆಯರಿಗೆ ಅವರು ಮಾಡಿರುವ ಅವಮಾನ ಇದಾಗಿದ್ದು, ಸೂಕ್ತ ರೀತಿಯಲ್ಲಿ ಕ್ಷಮೆಯಾಚಿಸಬೇಕು ಎಂದು ಮಯಾವತಿ ಟ್ವಿಟರ್‌ ಮೂಲಕ ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲದೆ, ಮಾಜಿ ಸ್ಪೀಕರ್‌ , ಸದನದಲ್ಲಿ ಹೇಗೆ ಮಾತನಾಡಬೇಕು, ಹೇಗೆ ನಡೆದುಕೊಳ್ಳಬೇಕೆಂಬುದು ಎಲ್ಲ ಸಂಸದರಿಗೆ ಅರಿವಿರುವುದು ಮುಖ್ಯ. ಒಂದು ವೇಳೆ ಇದಕ್ಕೆ ತಪ್ಪಿದ್ದೇ ಆದಲ್ಲಿ, ಸಂಸದರಾಗಿ ಉಳಿಯಲು ಅಥವಾ ಲೋಕಸಭೆಗೆ ಆಗಮಿಸಲು ತಾನು ಸರಿಯಾದ ವ್ಯಕ್ತಿಯೇ ಎಂದು ಅವರೇ ನಿರ್ಧರಿಸಬೇಕು. ನಾನು ತಪ್ಪು ಒಪ್ಪುಗಳ ಬಗ್ಗೆ ಮಾತನಾಡುತ್ತಿಲ್ಲ. ಲೋಕಸಭೆಗೆ ಅದರದ್ದೇ ಆದ ಗೌರವ, ಪ್ರತಿಷ್ಠೆಯಿದ್ದು, ಇದಕ್ಕೆ ಧಕ್ಕೆ ತರುವಂತೆ ನಡೆದುಕೊಳ್ಳುವುದು ಎಷ್ಟು ಸರಿ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಹೇಳಿದ್ದಾರೆ. ತಾನು ಯಾವುದೇ ರೀತಿಯ ಅಸಂವಿಧಾನಿಕ ಪದಗಳನ್ನು ಬಳಸಿಲ್ಲ. ಈ ವಿಚಾರದಲ್ಲಿ ಬಿಜೆಪಿ ಸುಖಾ ಸುಮ್ಮನೆ ಗದ್ದಲ ಎಬ್ಬಿಸುತ್ತಿದೆ. ಅತಿ ಹೆಚ್ಚು ಮಂದಿ ಸಂಸದರು ಇದ್ದಾರೆಂದು, ಉಳಿದವರನ್ನು ಮಾತನಾಡಲು ಬಿಡದ ರೀತಿಯಲ್ಲಿ ನಡೆದುಕೊಳ್ಳುತ್ತಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಆದರೆ ಎನ್‌ಸಿಪಿ ಸಂಸದರೋರ್ವರು ಅಜಾಂ ಖಾನ್‌ ಅವರನ್ನು ಸಮರ್ಥಿಸಿಕೊಂಡಿದ್ದಾರೆ.


from India & World News in Kannada | VK Polls https://ift.tt/2OlU0El

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...