ಹೊಸದಿಲ್ಲಿ: ಟೀಮ್ ಇಂಡಿಯಾ ನಾಯಕ ಹಾಗೂ ಉಪನಾಯಕ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಮತ್ತಷ್ಟು ಬಲಗೊಂಡಿದೆ. ತಾಜಾ ಬೆಳವಣಿಗೆಯಲ್ಲಿ ಸಾಮಾಜಿಕ ಫ್ಲ್ಯಾಟ್‌ಫಾರ್ಮ್ ಆಗಿರುವ ಇನ್‌ಸ್ಟಾಗ್ರಾಂನಲ್ಲಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾರನ್ನು ರೋಹಿತ್ ಶರ್ಮಾ ಅನ್‌ಫಾಲೋ ಮಾಡಿದ್ದಾರೆ. ಇದಾದ ಬೆನ್ನಲ್ಲೇ ಅನುಷ್ಕಾ ಮರ್ಮಭರಿತ ಸ್ಟೇಟಸ್ ಹಾಕಿ ರೋಹಿತ್‌ಗೆ ತಿರುಗೇಟು ನೀಡಿದ್ದಾರೆ. ಏಕದಿನ ವಿಶ್ವಕಪ್ ಸೋಲಿನ ಬೆನ್ನಲ್ಲೇ ವಿರಾಟ್ ಹಾಗೂ ರೋಹಿತ್ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದವು. ತಂಡದಲ್ಲಿ ಎರಡು ಬಣ ರೂಪುಗೊಂಡಿರುವುದರ ಬಗ್ಗೆಯೂ ವದಂತಿಗಳು ಬಂದಿದ್ದವು. ರೋಹಿತ್ ಹಾಗೂ ಕೊಹ್ಲಿ ಅಭಿಮಾನಿಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ಶೀತಲ ಸಮರದಲ್ಲಿ ತೊಡಗಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಭಾರತೀಯ ಕ್ರಿಕೆಟ್ ಪಾಲಿಗಿದು ಕೆಟ್ಟ ಬೆಳವಣಿಗೆಯಂದೇ ಭಾವಿಸಲಾಗಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/32U0DAM