ಅಸಹಿಷ್ಣುತೆ ಲಾಬಿ ವಿರುದ್ಧ 62 ಸೆಲೆಬ್ರಿಟಿಗಳಿಂದ ಬಹಿರಂಗ ಪತ್ರ

ಹೊಸದಿಲ್ಲಿ: ನಟಿ ಕಂಗನಾ ರಣಾವತ್‌, ಸಿಬಿಎಫ್‌ಸಿ ಅಧ್ಯಕ್ಷ ಪ್ರಸೂನ್ ಜೋಷಿ ಮತ್ತು ಶಾಸ್ತ್ರೀಯ ನೃತ್ಯಗಾರ್ತಿ ಸೊನಾಲ್ ಮಾನ್‌ಸಿಂಗ್ ಸೇರಿದಂತೆ 62 ಮಂದಿ ಗಣ್ಯರು ಕೆಲವು ಸೆಲೆಬ್ರಿಟಿಗಳ 'ಸುಳ್ಳು ಪ್ರತಿಪಾದನೆ ಮತ್ತು ಆಯ್ದ ಆಕ್ರೋಶದ' ವಿರುದ್ಧ ಬರೆದು ಖಂಡಿಸಿದ್ದಾರೆ. ದೇಶದಲ್ಲಿ ಕೆಲವೆಡೆ ನಡೆದ ಸಾಮೂಹಿಕ ಹಲ್ಲೆ ಪ್ರಕರಣಗಳ ಹಿನ್ನೆಲೆಯಲ್ಲಿ ಕೆಲವು ಸೆಲೆಬ್ರಿಟಿಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು 'ಹಿಂದುತ್ವ ಕುರಿತು ತಪ್ಪು ಕಲ್ಪನೆ' ಮೂಡುವಂತೆ ಮಾಡಿದ ಘಟನೆ ನಡೆದಿತ್ತು. ಈ ರೀತಿ 'ಆಯ್ದ ಆಕ್ರೋಶ ಮತ್ತು ಕಪೋಲಕಲ್ಪಿತ ಕಥನಗಳ ವಿರುದ್ಧ' ಎಂಬ ಶೀರ್ಷಿಕೆಯ ಪತ್ರದಲ್ಲಿ ಗುಂಪು ಹತ್ಯೆಗಳ ಕುರಿತು 'ಸ್ವಯಂ ಘೋಷಿತ ಪೋಷಕರು ಮತ್ತು ಆತ್ಮಸಾಕ್ಷಿಯ ಪಾಲಕರು' ತಮ್ಮ ರಾಜಕೀಯ ಪೂರ್ವಗ್ರಹಗಳ ಹಿನ್ನೆಲೆಯಲ್ಲಿ ಪತ್ರ ಬರೆದಿದ್ದರು ಎಂದು ಇಂದು ಬಹಿರಂಗ ಪತ್ರ ಬರೆದ ಗಣ್ಯರು ಆಪಾದಿಸಿದ್ದಾರೆ. 'ಪ್ರಧಾನಿ ಮೋದಿ ಅವರನ್ನು ಉದ್ದೇಶಿಸಿ ಜುಲೈ 23ರಂದು ಪ್ರಕಟಿತವಾದ ಪತ್ರ ನಮ್ಮನ್ನು ಬೆರಗುಗೊಳಿಸಿದೆ. 49 ಮಂದಿ ಸ್ವಯಂಘೋಷಿತ 'ಪೋಷಕರು ಮತ್ತು ಆತ್ಮಸಾಕ್ಷಿ ಪಾಲಕರು' ಮತ್ತೊಮ್ಮೆ ಆಯ್ದ ವಿಷಯದಲ್ಲಿ ಮಾತ್ರ ಕಳವಳ ವ್ಯಕ್ತಪಡಿಸಿದ್ದು ತಮ್ಮದು ರಾಜಕೀಯ ಪ್ರೇರಿತ ದೃಷ್ಟಿಕೋನ ಮತ್ತು ಉದ್ದೇಶ' ಎಂಬುದನ್ನು ಸ್ಪಷ್ಟವಾಗಿಯೇ ಘೋಷಿಸಿಕೊಂಡಿದ್ದಾರೆ' ಎಂದು 62 ಗಣ್ಯರ ಪತ್ರದಲ್ಲಿ ಹೇಳಲಾಗಿದೆ. 'ದೇಶದ ಸಂಸ್ಕೃತಿ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಹಾಳುಗೆಡವಲು ಕೆಲವೇ ಕೆಲವು ಆಯ್ದ ಘಟನೆಗಳ ಸಂಗತಿಯನ್ನು ಮಾತ್ರ ಎತ್ತಿಕೊಂಡು ತಪ್ಪಾಗಿ ಬಿಂಬಿಸುವ ದುರುದ್ದೇಶವನ್ನು ವಿಫಲಗೊಳಿಸುವುದೇ ನಮ್ಮ ಉದ್ದೇಶ' ಎಂದು ಇಂದು ಬಹಿರಂಗ ಪತ್ರ ಬರೆದ 62 ಗಣ್ಯರು ಆರೋಪಿಸಿದ್ದಾರೆ. 'ಭಾರತೀಯತೆಯ ಮೂಲ ತಿರುಳಾದ ಧನಾತ್ಮಕ ರಾಷ್ಟ್ರೀಯತೆ ಮತ್ತು ಮಾನವೀಯತೆಯ ಮೌಲ್ಯಗಳನ್ನು ಸಮರ್ಥ ಆಡಳಿತದ ಮೂಲಕ ಪೋಷಿಸುವ ಪ್ರಧಾನಿ ಮೋದಿ ಅವರ ಪ್ರಯತ್ನಗಳನ್ನು ನಕಾರಾತ್ಮಕವಾಗಿ ಬಿಂಬಿಸಿ, ದೇಶದ ಘನತೆಯನ್ನು ಅಂತಾರಾಷ್ಟ್ರೀಯವಾಗಿ ಹಾಳುಗೆಡಹುವುದೇ 42 ಮಂದಿ ಸೆಲೆಬ್ರಿಟಿಗಳ ಉದ್ದೇಶ' ಎಂದು ಪತ್ರದಲ್ಲಿ ಹೇಳಲಾಗಿದೆ. ನಕ್ಸಲ್ ಭಯೋತ್ಪಾದನೆಯಿಂದ ಬುಡಕಟ್ಟು ಜನರು ಮತ್ತು ಬಡವರು ಹಾನಿಗೊಳಗಾಗಿರುವುದನ್ನು ಬಹಿರಂಗ ಪತ್ರದ ಸಹಿದಾರರು ನಿರ್ಲಕ್ಷಿಸಿದ್ದಾರೆ. ಕಾಶ್ಮೀರದಲ್ಲಿ ಶಾಲೆಗಳನ್ನು ಸುಟ್ಟುಹಾಕುವುದಾಗಿ ಪ್ರತ್ಯೇಕತಾವಾದಿಗಳು ಗುಟುರು ಹಾಕಿದಾಗ ಅವರು ಮೌನವಾಗಿದ್ದರು, ಟುಕ್ಡೆ ಟುಕ್ಡೇ ಗ್ಯಾಂಗ್‌ ಭಾರತವನ್ನು ಚೂರು ಚೂರು ಮಾಡುವುದಾಗಿ ಬೆದರಿಕೆ ಹಾಕಿದಾಗಲೂ ಅವರು ಮೌನವಾಗಿದ್ದರು, ಉಗ್ರರು ಮತ್ತು ಭಯೋತ್ಪಾದಕ ಸಂಘಟನೆಗಳ ಪರ ಕೆಲವು ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಘೊಷಣೆಗಳು ಮೊಳಗಿದಾಗ ಇವರೆಲ್ಲ ಮೌನವಾಗಿದ್ದರು' ಎಂದು ಇಂದು ಪತ್ರ ಬರೆದ ಗಣ್ಯರು ಆರೋಪಿಸಿದ್ದಾರೆ. ಗ್ರ್ಯಾಮಿ ಅವಾರ್ಡ್ ಪುರಸ್ಕೃತ ಸಂಗೀತ ವಿದ್ವಾಂಸ ಪಂಡಿತ್ ವಿಶ್ವ ಮೋಹನ್ ಭಟ್, ಚಿತ್ರ ನಿರ್ಮಾಪಕ ಮಧುರ್ ಭಂಡಾರ್ಕರ್, ವಿವೇಕ್ ಅಗ್ನಿಹೋತ್ರಿ ಮತ್ತು ಅಶೋಕ್ ಪಂಡಿತ್, ನಟಿ ಪಲ್ಲವಿ ಜೋಷಿ, ಜಾನಪದ ಕಲಾವಿದೆ ಮಾಲಿನಿ ಅವಸ್ಥಿ, ನಟ ಮನೋಜ್ ಜೋಷಿ ಮತ್ತು ಚಿತ್ರ ಕಲಾವಿದ ಬಿಸ್ವಜಿತ್ ಚಟರ್ಜಿ ಸೇರಿದಂತೆ ಹಲವು ಗಣ್ಯರು ಇಂದಿನ ಪತ್ರಕ್ಕೆ ಸಹಿ ಹಾಕಿದ್ದಾರೆ.


from India & World News in Kannada | VK Polls https://ift.tt/2KiNyc3

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...