ಕೊಹ್ಲಿ ಡ್ಯಾನ್ಸ್ ನೋಡಿ ದಂಗಾದ ಎಬಿ ಡಿ

ಹೊಸದಿಲ್ಲಿ: ಇತ್ತೀಚೆಗಷ್ಟೇ ಸಾಗಿದ ಏಕದಿನ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಸೆಮಿಫೈನಲ್ ಹಂತದಿಂದ ಹೊರನಡೆದಿತ್ತು. ಇದು ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಕ್ರಿಕೆಟ್ ಅಭಿಮಾನಿಗಳಲ್ಲಿ ಬೇಸರ ತರಿಸಿತ್ತು. ವಿಶ್ವಕಪ್‌ನಲ್ಲಿ ಟೂರ್ನಿಯುದ್ಧಕ್ಕೂ ಶ್ರೇಷ್ಠ ಪ್ರದರ್ಶನ ನೀಡಿದರೂ ಏಕೈಕ ಕೆಟ್ಟ ಪ್ರದರ್ಶನದಿಂದಾಗಿ ಭಾರತದ ಪ್ರಶಸ್ತಿ ಕನಸು ಭಗ್ನಗೊಂಡಿದೆ. ಪ್ರಸ್ತುತ ಟೀಮ್ ಇಂಡಿಯಾ ಮುಂಬರುವ ವೆಸ್ಟ್‌ಇಂಡೀಸ್ ಸರಣಿಗೆ ಸಜ್ಜಾಗುತ್ತಿದೆ. ಈ ನಡುವೆ ನಾಯಕ ವಿರಾಟ್ ಕೊಹ್ಲಿ ಧನಾತ್ಮಕತೆಯನ್ನು ಕಾಯ್ದುಕೊಳ್ಳಲು ಟ್ವೀಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಧನಾತ್ಮಕತೆಯು ಮಾತ್ರ ಧನಾತ್ಮಕತೆಯನ್ನು ಆಕರ್ಷಿಸಲಿದೆ ಎಂದಿರುವ ವಿರಾಟ್, ನಿಮ್ಮ ಆಯ್ಕೆಯು ಫಲಿತಾಂಶವನ್ನು ನಿರ್ಧರಿಸಲಿದೆ ಎಂದಿದ್ದಾರೆ. ಕ್ರೀಡಾ ಬ್ರ್ಯಾಂಡ್ ಪುಮಾ ಪ್ರಚಾರ ವೀಡಿಯೋದಲ್ಲಿ ಕೊಹ್ಲಿ ಡ್ಯಾನ್ಸ್‌ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಇದಕ್ಕೆ ವಿರಾಟ್ ಆಪ್ತ ಗೆಳೆಯ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಕಾಮೆಂಟ್ ಮಾಡಿದ್ದಾರೆ. ನಾನು ಅದನ್ನು ಮಾಡಬೇಕಿದ್ದರೆ ಊಹಿಸಿ! ಎಂದು ಕೊಹ್ಲಿ ಚಲನೆಯನ್ನು ಉಲ್ಲೇಖಿಸಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2MjTmV5

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...