ಕಾರ್ಗಿಲ್‌ ಯುದ್ಧದ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಸಂಕ್ಷಿಪ್ತ ಮಾಹಿತಿ

ಯಾವಾಗ ಆರಂಭ?: 1999ರ ಮೇ ತಿಂಗಳಲ್ಲಿ ಆರಂಭ ವಾಯಿತು. ಪಾಕಿಸ್ತಾನದ ಸೈನಿಕರು ಮತ್ತು ಉಗ್ರರು ಕಾರ್ಗಿಲ್‌ ಜಿಲ್ಲೆಯಲ್ಲಿ ಲೈನ್‌ ಆಫ್‌ ಕಂಟ್ರೋಲ್‌(ಎಲ್‌ಒಸಿ) ಮೂಲಕ ಒಳ ನುಸುಳಿದ್ದು ಗೊತ್ತಾದ ತಕ್ಷ ಣ ಭಾರತೀಯ ಸೇನೆ ತನ್ನ ದಾಳಿಯನ್ನು ತೀವ್ರ ಗೊಳಿಸಿತು. ಪಾಕಿಸ್ತಾನದ ಈ ನಡೆ ಭಾರತಕ್ಕೆ ಸಂಪೂರ್ಣವಾಗಿ ಆಶ್ಚರ್ಯವನ್ನುಂಟು ಮಾಡಿತ್ತು. ಆದರೆ, ಸೇನೆಯು ಆತಂಕಕ್ಕೆ ಒಳ ಗಾಗದೇ ‘ಆಪರೇಷನ್‌ ವಿಜಯ್‌’ ಆರಂಭಿಸಿ, ಯಶಸ್ವಿಯಾಗಿ ಮುಗಿಸಿತು. ಮುಷರ್ರಫ್‌ ಮಾಸ್ಟರ್‌ ಮೈಂಡ್‌: ಅಂದಿನ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್‌ ಪರ್ವೇಜ್‌ ಮುಷರ್ರಫ್‌ ಕಾರ್ಗಿಲ್‌ ಯುದ್ಧ ‘ಮಾಸ್ಟರ್‌ ಮೈಂಡ್‌’ ಎಂದು ನಂತರ ಗೊತ್ತಾಯಿತು. ಕಾಶ್ಮೀರದಲ್ಲಿ ಒಳನುಗ್ಗುವ ಯೋಜನೆಯನ್ನು ತುಂಬ ನಾಜೂಕಾಗಿ ಮುಷರ್ರಫ್‌ ಯೋಜಿಸಿದ್ದರು. ವಿಶೇಷ ಎಂದರೆ ಅಂದಿನ ಪಾಕ್‌ ಪ್ರಧಾನಿ ನವಾಜ್‌ ಷರೀಫ್‌ ಅವರಿಗೂ ಈ ಬಗ್ಗೆ ಮಾಹಿತಿ ಇರಲಿಲ್ಲ. ಈ ಕಾರ್ಯದಲ್ಲಿ ಮುಷರ್ರಫ್‌ಗೆ ನೆರವಾಗಿದ್ದು ಲೆಫ್ಟಿನೆಂಟ್‌ ಜನರಲ್‌ ಮೊಹಮ್ಮದ್‌ ಆಜಿಜ್‌ ಮಾತ್ರ. ಎಲ್‌ಒಸಿ ದಾಟದ ವಿಮಾನಗಳು: ಕಾರ್ಗಿಲ್‌ ಯುದ್ಧಕ್ಕೆ ವಾಯುಪಡೆಯನ್ನು ಬಳಸಿಕೊಳ್ಳಬೇಕೆಂದು 1999 ಮೇ 24ರಂದು ನಿರ್ಧರಿಸಲಾಯಿತು. ಆದರೆ, ಯಾವುದೇ ಕಾರಣಕ್ಕೂ ಗಡಿ ನಿಯಂತ್ರಣ ರೇಖೆ ದಾಟದಿರಲು ತೀರ್ಮಾನಿಸಲಾಯಿತು. ತನ್ನ ಗಡಿಯೊಳಗೇ ಅವಿತಿದ್ದ ಶತ್ರು ಸೈನಿಕರ ಮೇಲೆ ವಾಯುಪಡೆಯು ಬಾಂಬ್‌ ದಾಳಿ ನಡೆಸಲಾರಂಭಿಸಿತು. ಯುದ್ಧ ವೇಳೆ ಡ್ರಾಸ್‌-ಕಾರ್ಗಿಲ್‌ ಪ್ರದೇಶದ ಟೈಗರ್‌ ಹಿಲ್‌ ಯುದ್ಧ ಭೂಮಿಯ ಪ್ರಮುಖ ಸ್ಥಳವಾಗಿತ್ತು. 60 ದಿನಗಳ ಸತತ ಯುದ್ಧ ಹಾಗೂ ಅಂತಾರಾಷ್ಟ್ರೀಯ ಸಮುದಾಯದ ಬೆಂಬಲದಿಂದಾಗಿ ಭಾರತೀಯ ಸೇನೆ ಅಂತಿಮವಾಗಿ ಟೈಗರ್‌ ಹಿಲ್‌ ಅನ್ನು ಮರು ಸ್ವಾಧಿಧೀನಕ್ಕೆ ಪಡೆದು, ಪಾಕಿಸ್ತಾನಿ ಸೈನಿಕರನ್ನು ಹಿಮ್ಮೆಟ್ಟಿಸಲು ಯಶಸ್ವಿಯಾಯಿತು. ವಾರ್‌ ಹೀರೋಗಳಿಗೆ ಪುರಸ್ಕಾರ: ಭಾರತದ ಪರವಾಗಿ ಕೆಚ್ಚೆದೆಯ ಹೋರಾಟ ಪ್ರದರ್ಶಿಸಿದ ಸಂಜಯ್‌ ಕುಮಾರ್‌, ನಯಿಬ್‌ ಸುಬೇದಾರ್‌ ಯೋಗೇಂದ್ರ ಸಿಂಗ್‌ ಯಾದವ್‌, ಕ್ಯಾಪ್ಟನ್‌ ಮನೋಜ್‌ಕುಮಾರ್‌ ಪಾಂಡೆ ಮತ್ತು ಕ್ಯಾಪ್ಟನ್‌ ವಿಕ್ರಮ್‌ ಭಾತ್ರಾ ಅವರಿಗೆ ಭಾರತ ಸರಕಾರ ಪರಮವೀರ ಚಕ್ರ ಪುರಸ್ಕಾರ ನೀಡಿತು.


from India & World News in Kannada | VK Polls https://ift.tt/2JSmjWq

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...