ಹೊಸದಿಲ್ಲಿ: ಕ್ರಿಕೆಟ್‌ಗೆ ಬಿಡುವು ನೀಡಿರುವ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ , ಸದ್ಯ ಭಾರತೀಯ ಸೇನೆಯ ಕರ್ತವ್ಯದಲ್ಲಿದ್ದಾರೆ. ಪ್ರಾದೇಶಿಕ ಸೇನೆಯ ಪ್ಯಾರಾಚೂಟ್ ರೆಜಿಮೆಂಟ್‌ನಲ್ಲಿ ಗೌರವಾನ್ವಿತ ಲೆಫ್ಟಿನಂಟ್ ಕರ್ನಲ್ ಹುದ್ದೆಯನ್ನು ಹೊಂದಿರುವ ಮಹೇಂದ್ರ ಸಿಂಗ್ ಧೋನಿ, ಕಾಶ್ಮೀರ ಕಣಿವೆಯಲ್ಲೂ ದೇಶದ ಸೇವೆ ಸಲ್ಲಿಸಲಿದ್ದಾರೆ. ಈ ಸಂದರ್ಭದಲ್ಲಿ ಕಾರ್ಗಿಲ್ ವಿಜಯ ದಿನದಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್‌ಗೆ ಧೋನಿ ಬಗ್ಗೆ ವಿಶೇಷವಾದ ಪ್ರಶ್ನೆ ಎದುರಾಗಿತ್ತು. ಇದಕ್ಕೆ ಉತ್ತರವಾಗಿ ಧೋನಿ ನಾಗರಿಕರನ್ನು ಕಾಪಾಡಲಿದ್ದಾರೆ ಎಂದಿದ್ದಾರೆ. ಭಾರತೀಯ ಪ್ರಜೆಯೊಬ್ಬರು ಮಿಲಿಟರಿ ಸಮವಸ್ತ್ರವನ್ನು ಧರಿಸಲು ಬಯಸಿದಾಗ ಆ ಸಮವಸ್ತ್ರದ ಕರ್ತವ್ಯವನ್ನು ಪೂರೈಸಲು ಸಿದ್ಧವಾಗಿರಬೇಕು. ಮಹೇಂದ್ರ ಸಿಂಗ್ ಧೋನಿ ಮೂಲಭೂತ ತರಬೇತಿಯನ್ನು ಕೈಗೊಂಡಿದ್ದು, ತಮ್ಮ ಜವಾಬ್ದಾರಿಯನ್ನು ನಿರ್ವಹಿಸಲು ಸಮರ್ಥರಾಗಿದ್ದಾರೆ ಎಂದಿದ್ದಾರೆ. ವಾಸ್ತವವಾಗಿ, 106 ಟೆರಿಟೋರಿಯಲ್ ಆರ್ಮಿ ಬೆಟಲಿಯನ್‌ನಲ್ಲಿ (ಪ್ಯಾರಾ) ಕರ್ತವ್ಯ ನಿಭಾಯಿಸಲಿರುವ ಧೋನಿ, ಅನೇಕ ಜನರಿಗೆ ರಕ್ಷಣೆ ಒದಗಿಸಲಿದ್ದಾರೆ ಎಂದು ವಿವರಿಸಿದರು. ನಾವು ಧೋನಿಗೆ ರಕ್ಷಣೆ ಒದಗಿಸಬೇಕು ಎಂದನಿಸುತ್ತಿಲ್ಲ. ಇದರ ಬದಲು ತಮಗೆ ವಹಿಸಿಕೊಟ್ಟ ಜವಾಬ್ದಾರಿಯನ್ನು ನಿಭಾಯಿಸುವ ಧೋನಿ, ದೇಶದ ನಾಗರಿಕರಿಗೆ ರಕ್ಷಣೆ ಒದಗಿಸಲಿದ್ದಾರೆ ಎಂದು ನುಡಿದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2MiJjzt