ಕ್ವಿಟ್ ಇಂಡಿಯಾ ಚಳುವಳಿ ವಾರ್ಷಿಕೋತ್ಸವ: ಯೋಗಿ ಆಸೆಯಂತೆ 22 ಕೋಟಿ ಸಸಿ ನೆಡಲು ನಿರ್ಧಾರ

ಲಖನೌ: ಕ್ವಿಟ್ ಇಂಡಿಯಾ ಚಳುವಳಿಯ ವಾರ್ಷಿಕೋತ್ಸವದ ಅಂಗವಾಗಿ ಆಗಷ್ಟ್ 9ರಂದು ವಾರಾಣಸಿ ವಿಭಾಗದಲ್ಲಿ 1.5 ಕೋಟಿ ಸೇರಿದಂತೆ ರಾಜ್ಯಾದ್ಯಂತ 22 ಕೋಟಿಗೂ ಅಧಿಕ ಸಸಿಗಳನ್ನು ನೆಡಲು ಸಿದ್ಧತೆ ನಡೆಯುತ್ತದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಅವರ ಆಸೆಯದಂತೆ ಕ್ವಿಟ್ ಇಂಡಿಯಾ ಚಳುವಳಿಯ 77ನೇ ವಾರ್ಷಿಕೋತ್ಸವದ ವೇಳೆ ರಾಜ್ಯಾದ್ಯಂತ ಒಂದೇ ದಿನ 22 ಕೋಟಿ ಸಸಿಗಳನ್ನು ನೆಡಲು ಉದ್ದೇಶಿಸಲಾಗಿದೆ ಎಂದು ಪೊಲೀಸ್ ಆಯುಕ್ತ ದೀಪಕ್ ಅಗರ್‌ವಾಲ್ ತಿಳಿಸಿದ್ದಾರೆ. ಈ ಪೈಕಿ ವಾರಾಣಸಿ ವಿಭಾಗದಲ್ಲಿ 1. 53 ಕೋಟಿ, ವಾರಾಣಸಿ ಜಿಲ್ಲೆಯಲ್ಲಿ 24 .64 ಲಕ್ಷ, ಗಾಜಿಪುರದಲ್ಲಿ 39.29 ಲಕ್ಷ, ಜೌನ್‌ಪುರದಲ್ಲಿ 58.21 ಲಕ್ಷ ಮತ್ತು ಚಂದೌಲಿಯಲ್ಲಿ 31.83 ಲಕ್ಷ ಸೇರಿದಂತೆ ರಾಜ್ಯಾದ್ಯಂತ 22 ಕೋಟಿ ನೆಡುವ ನೆಡಲಾಗುತ್ತಿದೆ. ಮಹಾತ್ಮ ಗಾಂಧಿ ಅವರ 150ನೇ ಜನ್ಮದಿನದ ಸ್ಮರಣೀಯವಾಗಿ ಪ್ರತಿ ಜಿಲ್ಲೆಯಲ್ಲಿ 'ಗಾಂಧಿ ಉಪವನ' ಸ್ಥಾಪಿಸಲು ನಿರ್ಧರಿಸಲಾಗಿದ್ದು, ಇದರಲ್ಲಿ ಮಹಾತ್ಮನಿಗೆ ಇಷ್ಟಲಾದ 150 ಬಗೆಯ ಮರಗಳನ್ನು ನೆಡಲು ಉದ್ದೇಶಿಸಲಾಗಿದೆ.


from India & World News in Kannada | VK Polls https://ift.tt/2On2Rp6

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...