ಕ್ಯಾನ್ಸರ್‌ನಿಂದ ತಾಯಿ ಸಾವು: ಅಗಲಿರಲಾರದೆ ನೇಣಿಗೆ ಶರಣಾದ ಅಣ್ಣ ತಮ್ಮ

ಹೊಸದಿಲ್ಲಿ: ತಾಯಿಯ ಸಾವಿನಿಂದ ನೊಂದ ಅಣ್ಣ ತಮ್ಮ ನೇಣು ಬಿಗಿದುಕೊಂಡು ಸಾವಿಗೆ ಶರಣಾದ ಹೃದಯವಿದ್ರಾವಕ ಘಟನೆ ಉತ್ತರ ಪ್ರದೇಶದ ಜನಕಪುರಿಯಲ್ಲಿ ಸೋಮವಾರ ನಡೆದಿದೆ. ಕುನಾಲ್ ಅಗರ್‌ವಾಲ್ (27) ಮತ್ತು ಗೌರವ್ ಅಗರ್‌ವಾಲ್ (24) ಮೃತ ಸಹೋದರರಾಗಿದ್ದಾರೆ. ಸೋಮವಾರ ಮಧ್ಯಾಹ್ನ 12.30ರ ಸುಮಾರಿಗೆ ಪೊಲೀಸರಿಗೆ ಈ ಆತ್ಮಹತ್ಯೆಯ ಮಾಹಿತಿ ದೊರಕಿತು. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಸಹೋದರರಿಬ್ಬರು ತಾಯಿಯ ಸಾವಿನಿಂದ ಖಿನ್ನರಾಗಿದ್ದರು. ಅವರ ತಂದೆ ಸುಶೀಲ್ ಕುಮಾರ್ ಕೂಡ ಕಳೆದ 20 ವರ್ಷಗಳಿಂದ ಪಾರ್ಶ್ವವಾಯು ಪೀಡಿತರಾಗಿದ್ದಾರೆ. ತಾಯಿ ಇದೇ ವರ್ಷ ಮಾರ್ಚ್ 23ರಂದು ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದಳು. ಇಬ್ಬರು ಸಹೋದರರು ಕೂಡ ಎಂಜಿನಿಯರಿಂಗ್ ಓದಿದ್ದು ರೈಲು ಗುತ್ತಿಗೆದಾರನಾಗಿದ್ದ ತಂದೆಗೆ ಕೆಲಸದಲ್ಲಿ ಸಹಾಯ ಮಾಡುತ್ತಿದ್ದರು. ಆದರೆ ತಾಯಿಯ ಸಾವಿನ ಬಳಿಕ ಖಿನ್ನತೆಗೆ ಜಾರಿದ್ದ ಅವರು ತಂದೆಯ ಕೆಲಸಕ್ಕೆ ಸಹಾಯ ಮಾಡುವುದನ್ನೇ ನಿಲ್ಲಿಸಿದ್ದರು. ಕಳೆದ ಒಂದುವರೆ ತಿಂಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ಅವರು ಭಾನುವಾರ ರಾತ್ರಿ ಮನೆಗೆ ಮರಳಿದ್ದರು. ಬಳಿಕ ತಮ್ಮ ಸಾವಿಗೆ ತಾವೇ ಕಾರಣ ಎಂದು ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ.


from India & World News in Kannada | VK Polls https://ift.tt/2YwZ9dq

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...