Budget 2019: ಪಿಂಚಣಿ ಯೋಜನೆ 3 ಕೋಟಿ ವ್ಯಾಪಾರಿಗಳಿಗೆ ವಿಸ್ತರಣೆ

ಹೊಸದಿಲ್ಲಿ: ವಾರ್ಷಿಕವಾಗಿ 1.5 ಕೋಟಿ ರೂ.ಗಿಂತ ಕಡಿಮೆ ವಹಿವಾಟು ನಡೆಸುವ ಸುಮಾರು ಮೂರು ಕೋಟಿ ಚಿಲ್ಲರೆ ವ್ಯಾಪಾರಿಗಳಿಗೆ ಪಿಂಚಣಿಯ ಲಾಭವನ್ನು ಒದಗಿಸಲಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ಹೇಳಿದ್ದಾರೆ. ನರೇಂದ್ರ ಮೋದಿ ಸರಕಾರದ ಎರಡನೇ ಅವಧಿಯ 2019-20 ಸಾಲಿನ ಮೊದಲ ಆಯವ್ಯಯ ಪತ್ರವನ್ನು ಸಂಸತ್ತಿನಲ್ಲಿ ಶುಕ್ರವಾರ ಮಂಡಿಸಿದ ನಿರ್ಮಲಾ, ಈ ವಿಷಯವನ್ನು ಘೋಷಿಸಿದರು. (ಪಿಎಂಕೆವೈಎಂ) ಅಡಿಯಲ್ಲಿ, ಪಿಂಚಣಿಯ ವ್ಯವಸ್ಥೆಯನ್ನು ವಿಸ್ತರಿಸಲಾಗುತ್ತದೆ ಎಂದು ಅವರು ಹೇಳಿದರು. ಜಿಎಸ್‌ಟಿ ನೋಂದಾಯಿಸಿದ ಎಂಎಸ್ಎಂಇಗಳಿಗೆ ಹೊಸ ಅಥವಾ ವರ್ಧಿತ ಸಾಲಗಳಿಗೆ ಶೇ.2ರ ಬಡ್ಡಿಯ ಅನುದಾನಕ್ಕಾಗಿ 350 ಕೋಟಿ ರೂ.ಗಳನ್ನು ಕಾಯ್ದಿರಿಸಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ತಿಳಿಸಿದರು. ಶುಕ್ರವಾರ ಬೆಳಗ್ಗೆ ಕೇಂದ್ರ ಸಂಪುಟವು ಸಭೆ ಸೇರಿ, ನಿರ್ಮಲಾ ಸೀತಾರಾಮನ್ ಅವರು ಮಂಡಿಸುತ್ತಿರುವ ಚೊಚ್ಚಲ ಬಜೆಟ್‌ಗೆ ಅನುಮೋದನೆ ನೀಡಿತ್ತು.


from India & World News in Kannada | VK Polls https://ift.tt/2NvGttl

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...