ಧೋನಿ ಬರ್ತ್ ಡೇ ಬ್ಲಾಸ್ಟ್; ಮಗಳು ಝಿವಾ, ಪಾಂಡ್ಯ, ಪಂತ್ ಜತೆಗಿನ ಡ್ಯಾನ್ಸ್ ವೈರಲ್

ಲೀಡ್ಸ್: ಪ್ರಸಕ್ತ ಇಂಗ್ಲೆಂಡ್ ಹಾಗೂ ವೇಲ್ಸ್‌ನಲ್ಲಿ ಸಾಗುತ್ತಿರುವ ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಭಾಗವಹಿಸುತ್ತಿರುವ ಟೀಮ್ ಇಂಡಿಯಾದ ಅನುಭವಿ ಬ್ಯಾಟ್ಸ್‌ಮನ್ 38ನೇ ವರ್ಷಕ್ಕೆ ಕಾಲಿರಿಸಿದ್ದಾರೆ. ಪತ್ನಿ ಸಾಕ್ಷಿ ಸಿಂಗ್ ಧೋನಿ, ಮಗಳು ಝಿವಾ ಹಾಗೂ ಕುಟುಂಬದ ಆಪ್ತರೊಂದಿಗೆ ಧೋನಿ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಈ ಸಂದರ್ಭದಲ್ಲಿ ಸಹ ಆಟಗಾರರಾದ ಹಾರ್ದಿಕ್ ಪಾಂಡ್ಯ, ರಿಷಬ್ ಪತ್ ಹಾಗೂ ಕೇದಾರ್ ಜಾಧವ್ ಜತೆಗಿದ್ದರು. ಇವರ ಜತೆಗೂ ಹಾಡಿಗೆ ಸ್ಟೆಪ್ ಹಾಕಿದ್ದಾರೆ. ಪ್ರಸ್ತುತ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಡಿದೆ. ಕೇಕ್ ಕಟ್ಟಿಂಗ್ ಬಳಿಕ ಮಗಳೊಂದಿಗೆ ನೃತ್ಯ ಮಾಡುವ ಮೂಲಕ ಧೋನಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ ಎಲ್ಲ ಐಸಿಸಿ ಟೂರ್ನಿಗಳನ್ನು ಜಯಿಸಿತ್ತು. 2007ರಲ್ಲಿ ಟ್ವೆಂಟಿ-20, 2011ರಲ್ಲಿ ಏಕದಿನ ಹಾಗೂ 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆಲುವುಗಳನ್ನು ದಾಖಲಿಸಿತ್ತು. ಅಂದ ಹಾಗೆ ಇಡೀ ಕ್ರಿಕೆಟ್ ಲೋಕವೇ ಧೋನಿಗೆ ಶುಭಾಶಯಗಳ ಮಹಾಪೂರವನ್ನೇ ಹಂಚಿಕೊಂಡಿದೆ. ಅಭಿಮಾನಿಗಳ ಜತೆಗೆ ಕ್ರಿಕೆಟ್, ಸಿನೆಮಾ ಸೇರಿದಂತೆ ಎಲ್ಲ ಕ್ಷೇತ್ರದ ಪ್ರಮುಖರು ಧೋನಿಗಾಗಿ ಶುಭಾಶಯ ಕೋರಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2XsNOK1

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...