ಏಕದಿನ ವಿಶ್ವಕಪ್: ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ

ರಿವರ್‌ಸೈಡ್ ಗ್ರೌಂಡ್: ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಬುಧವಾರ ನಡೆಯುತ್ತಿರುವ ಮಹತ್ವದ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗುತ್ತಿದೆ. ರಿವರ್‌ಸೈಡ್ ಗ್ರೌಂಡ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದಿರುವ ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಇಲ್ಲಿನ ರಿವರ್‌ಸೈಡ್‌ ಮೈದಾನದಲ್ಲಿ ನಡೆಯಲಿರುವ ಈ ಹಣಾಹಣಿ ನ್ಯೂಜಿಲೆಂಡ್‌, ಇಂಗ್ಲೆಂಡ್‌, ಪಾಕಿಸ್ತಾನ ಮೂರೂ ತಂಡಗಳ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಈ ಪಂದ್ಯದಲ್ಲಿ ಇಂಗ್ಲೆಂಡ್‌ ಸೋತರೆ ನ್ಯೂಜಿಲೆಂಡ್‌ ತಂಡ 13 ಅಂಕಗಳೊಂದಿಗೆ ಸೆಮಿಫೈನಲ್ಸ್‌ ಪ್ರವೇಶಿಸುವುದರ ಜತೆಗೆ ಪಾಕಿಸ್ತಾನ ತಂಡಕ್ಕೂ ಸೆಮಿಫೈನಲ್ಸ್‌ ಪ್ರವೇಶಿಸುವ ಅವಕಾಶ ತೆರೆದುಕೊಳ್ಳಲಿದೆ. ಜುಲೈ 5ರಂದು ಲಾರ್ಡ್ಸ್ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಬಾಂಗ್ಲಾ ತಂಡವನ್ನು ಸೋಲಿಸಿದಲ್ಲಿ ಪಾಕ್‌ ತಂಡ 11 ಅಂಕಗಳೊಂದಿಗೆ ಸೆಮಿಫೈನಲ್ಸ್‌ ಪ್ರವೇಶಿಸಲಿದೆ. ಇಂಗ್ಲೆಂಡ್‌ ಸೆಮಿಫೈನಲ್ಸ್‌ ಸ್ಪರ್ಧೆಯಿಂದ ಹೊರಬೀಳಲಿದೆ. ಅಕಸ್ಮಾತ್‌ ಇಂಗ್ಲೆಂಡ್‌ ಗೆದ್ದರೆ ಸೆಮಿಫೈನಲ್ಸ್‌ ಪ್ರವೇಶದ ಹಾದಿಯಲ್ಲಿ ನ್ಯೂಜಿಲೆಂಡ್‌ ಮತ್ತು ಪಾಕಿಸ್ತಾನ ತಂಡಗಳ ನಡುವೆ (ಬಾಂಗ್ಲಾ ವಿರುದ್ಧ ಪಾಕ್‌ ಗೆದ್ದಲ್ಲಿ) ನೆಟ್‌ರನ್‌ರೇಟ್‌ ಲೆಕ್ಕಾಚಾರಕ್ಕೆ ಚಾಲನೆ ದೊರೆಯುತ್ತದೆ. ಶ್ರೀಲಂಕಾ ಮತ್ತು ಆಸ್ಪ್ರೇಲಿಯಾ ವಿರುದ್ಧ ಬೆನ್ನುಬೆನ್ನಿಗೆ ಸೋತ ಬಳಿಕ ದಶದಿಕ್ಕುಗಳಿಂದ ಟೀಕಾಸ್ತ್ರಗಳಿಗೆ ಗುರಿಯಾಗಿದ್ದ ಆತಿಥೇಯ ಇಂಗ್ಲೆಂಡ್‌, ಆ ಬಳಿಕ ಅಜೇಯ (ಆ ಪಂದ್ಯಕ್ಕೂ ಮೊದಲು) ಭಾರತ ತಂಡವನ್ನು 31 ರನ್‌ಗಳಿಂದ ಸೋಲಿಸಿ ಸೆಮಿಫೈನಲ್ಸ್‌ ಆಸೆಯನ್ನು ಜೀವಂತವಾಗಿರಿಸಿಕೊಂಡಿತ್ತು. ಇದೀಗ ನ್ಯೂಜಿಲೆಂಡ್‌ ವಿರುದ್ಧದ ಹಣಾಹಣಿಯಲ್ಲಿ ಮೇಲ್ನೋಟಕ್ಕೆ ಇಂಗ್ಲೆಂಡ್‌ ತಂಡವೇ ಹೆಚ್ಚು ಬಲಿಷ್ಠವಾಗಿದೆ. ಎಲ್ಲ ವಿಭಾಗಗಳಲ್ಲೂ ಎದುರಾಳಿ ಮೇಲೆ ಸವಾರಿ ಮಾಡುವ ತಾಕತ್ತು ಆಂಗ್ಲರಿಗಿದೆ. ಜೇಸನ್‌ ರಾಯ್‌ ಹಾಗೂ ಜಾನಿ ಬೈರ್‌ಸ್ಟೋವ್‌ ಉತ್ತಮ ಆರಂಭ ನೀಡುತ್ತಿದ್ದಾರೆ. ಬೆನ್‌ ಸ್ಟೋಕ್ಸ್‌, ಬಟ್ಲರ್‌ ಹಾಗೂ ಜೋ ರೂಟ್‌ ತಂಡ ದೊಡ್ಡ ಮೊತ್ತ ಪೇರಿಸುವಲ್ಲಿ ನೆರವಾಗುತ್ತಿದ್ದಾರೆ. ಬೌಲಿಂಗ್‌ನಲ್ಲಿ ಕ್ರಿಸ್‌ ವೋಕ್ಸ್‌ ಹಾಗೂ ಲಿಯಾಮ್‌ ಪ್ಲಂಕೆಟ್‌ ನಾಯಕನ ವಿಶ್ವಾಸ ಗಳಿಸಿಕೊಂಡಿದ್ದು, ತಂಡವನ್ನು ಅಪಾಯದಿಂದ ಕಾಪಾಡಬಲ್ಲರು. ವಿಶ್ವಕಪ್‌ನ ಆರಂಭದ ಪಂದ್ಯಗಳಲ್ಲಿ ವಿಕ್ರಮ ಸಾಧಿಸಿದ್ದ ನ್ಯೂಜಿಲೆಂಡ್‌ ತಂಡ ಆ ಬಳಿಕ ಪಾಕಿಸ್ತಾನ ಹಾಗೂ ಆಸ್ಪ್ರೇಲಿಯಾದ ವಿರುದ್ಧ ಕಳಾಹೀನ ಆಟವಾಡಿತ್ತು. ಅದರಲ್ಲೂ ಬ್ಯಾಟಿಂಗ್‌ ವಿಭಾಗ ಸಂಪೂರ್ಣ ವೈಫಲ್ಯ ಕಂಡಿದೆ. ತಂಡ ಸೆಮಿಫೈನಲ್ಸ್‌ ಸ್ಪರ್ಧೆಯಲ್ಲಿ ಉಳಿದುಕೊಂಡಿರುವುದಕ್ಕೆ ನಾಯಕ ಕೇನ್‌ ವಿಲಿಯಮ್ಸನ್‌ ಅವರ ಸಂದರ್ಭೋಚಿತ ಬ್ಯಾಟಿಂಗ್‌ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ಹಾಗಂತ ಟ್ರೆಂಟ್‌ ಬೌಲ್ಟ್‌ ಮುಂದಾಳತ್ವದ ಬೌಲಿಂಗ್‌ ಪಡೆಯ ಸಾಧನೆಯನ್ನೂ ಮರೆಯುವಂತಿಲ್ಲ ಆಸ್ಪ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಬೌಲ್ಟ್‌ ಹ್ಯಾಟ್ರಿಕ್‌ ಸಾಧನೆ ಮಾಡಿದ್ದರು. ಬೌಲ್ಟ್‌ಗೆ ಲೂಕಿ ಫಗ್ರ್ಯುಸನ್‌ ಉತ್ತಮ ಸಾಥ್‌ ನೀಡುತ್ತಿದ್ದು, ಈ ಪಂದ್ಯದಲ್ಲಿ ಆತಿಥೇಯ ಬ್ಯಾಟ್ಸ್‌ಮನ್‌ಗಳಿಗೆ ತಲೆನೋವಾಗಿ ಪರಿಣಮಿಸುವ ಎಲ್ಲ ಸಾಧ್ಯತೆಗಳೂ ಇವೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2XJUp6X

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...