ಹೊಸದಿಲ್ಲಿ: ಭಾರತದಲ್ಲಿ ಮುಂಗಾರು ಪ್ರವೇಶಿಸಿದ ಕೆಲವೇ ದಿನಗಳಲ್ಲಿ ಸಹಿಸಲಾಧ್ಯವಾದ ಜನರ ಬದುಕನ್ನು ಸುಡುತ್ತಿದೆ. ಕೆನಡಾದಲ್ಲಿ ಉಷ್ಣ ಗಾಳಿ ಮುನ್ನೂರಕ್ಕೂ ಅಧಿಕ ಜನರನ್ನು ಬಲಿತೆಗೆದುಕೊಂಡ ಬೆನ್ನಲ್ಲೇ ಭಾರತದ ಅನೇಕ ರಾಜ್ಯಗಳು ಸುಡುವ ಬಿಸಿ ಗಾಳಿಗೆ ಸಿಲುಕುವ ಅಪಾಯದ ಎಚ್ಚರಿಕೆ ನೀಡಲಾಗಿದೆ. ಪಾಕಿಸ್ತಾನದಿಂದ ಭಾರತದ ವಾಯವ್ಯ ಭಾಗದೆಡೆಗೆ ಒಣ ವಾಯು ಕೆಳಮಟ್ಟದಲ್ಲಿ ಬೀಸುತ್ತಿದೆ. ಇದರಿಂದ ಪಂಜಾಬ್, ಹರ್ಯಾಣ, ಚಂಡೀಗಡ, , ಉತ್ತರ ರಾಜಸ್ಥಾನ, ಉತ್ತರ ಪ್ರದೇಶ ಮತ್ತು ವಾಯವ್ಯ ಮಧ್ಯಪ್ರದೇಶಗಳಲ್ಲಿ ಮುಂದಿನ ನಾಲ್ಕೈದು ದಿನಗಳ ಕಾಲ ಬಿಸಿ ಗಾಳಿಯ ಸ್ಥಿತಿ ಅನುಭವ ಉಂಟಾಗಲಿದೆ ಎಂದು ತಿಳಿಸಿದೆ. ಸಹಜಕ್ಕಿಂತ ಕನಿಷ್ಠ 4.5 ಡಿಗ್ರಿ ಮತ್ತು 40 ಡಿಗ್ರಿ ಸೆಲ್ಸಿಯಸ್‌ಗಿಂತ ಅಧಿಕವಿರುವ ಗರಿಷ್ಠ ತಾಪಮಾನದ ಸ್ಥಿತಿಯಿದ್ದ ಸಮಯದಲ್ಲಿ ಬಿಸಿ ಗಾಳಿಯ ಸನ್ನಿವೇಶವನ್ನು ಘೋಷಿಸಲಾಗಿತ್ತದೆ. ಸಹಜ ಉಷ್ಣಾಂಶಕ್ಕಿಂತ 6.5 ಡಿಗ್ರಿ ಸೆಲ್ಸಿಯಸ್‌ಗೂ ಹೆಚ್ಚಿನ ಬಿಸಿ ವಾತಾವರಣ ಸೃಷ್ಟಯಾದರೆ ಅದನ್ನು ತೀವ್ರ ಬಿಸಿ ಗಾಳಿ ಎಂದು ಘೋಷಿಸಲಾಗುತ್ತದೆ. ಸಾಮಾನ್ಯವಾಗಿ ದಿಲ್ಲಿಯಲ್ಲಿ ಜೂನ್ 20ರವರೆಗೂ ಬಿಸಿ ಗಾಳಿ ಇರುತ್ತದೆ. ಈ ಬಾರಿ ಗರಿಷ್ಠ ತಾಪಮಾನದಲ್ಲಿ ಉಂಟಾಗಿರುವ ಏರಿಕೆಯು ಮುಂಗಾರಿನ ಪ್ರವೇಶವನ್ನು ತಡ ಮಾಡಲು ಕಾರಣವಾಗಿದೆ ಎಂದು ಐಎಂಡಿ ಪ್ರಾದೇಶಿಕ ಕೇಂದ್ರದ ಮುಖ್ಯಸ್ಥ ಕುಲದೀಪ್ ಶ್ರೀವಾಸ್ತವ ಹೇಳಿದ್ದಾರೆ. ದಿಲ್ಲಿಯ ಸಫ್ದರ್‌ಜಂಗ್ ನಿಗಾ ಕೇಂದ್ರದಲ್ಲಿ ಈ ವರ್ಷದ ಗರಿಷ್ಠ ತೀವ್ರ ಬಿಸಿಗಾಳಿಯೊಂದಿಗೆ ದಾಖಲಾಗಿದೆ. ನಗರದಲ್ಲಿ 43 ಡಿಗ್ರಿ ಸೆಲ್ಸಿಯಸ್ ತಾಪಮಾನ ಮಂಗಳವಾರ ವರದಿಯಾಗಿತ್ತು.
from India & World News in Kannada | VK Polls https://ift.tt/3qB5Oly