ಬಂದೂಕಿನೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ವೇಳೆ ಸಿಡಿದ ಗುಂಡು: ನವವಿವಾಹಿತೆ ಸಾವು

ಲಕ್ನೋ: ಬಂದೂಕಿನ ಜತೆ ತೆಗೆದುಕೊಳ್ಳುವ ಹುಚ್ಚು ಸಾಹಸದಲ್ಲಿ ಗುಂಡು ಹಾರಿ 26 ವರ್ಷದ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಹರ್ದೋಯಿಯಲ್ಲಿ ನಡೆದಿದೆ. ತನ್ನ ಮಾವನ ಸಿಂಗಲ್ ಬ್ಯಾರೆಲ್ ಬಂದೂಕಿನೊಂದಿಗೆ ಮಹಿಳೆ ಗುರುವಾರ ಸಂಜೆ ಸೆಲ್ಫಿ ಕ್ಲಿಕ್ಕಿಸುವಾಗ ಈ ದುರಂತ ನಡೆದಿದೆ. ಸೆಲ್ಫಿಗೆ ಪೋಸ್ ನೀಡುವಾಗ ಬಂದೂಕಿನಲ್ಲಿ ಗುಂಡುಗಳು ತುಂಬಿರುವುದು ರಾಧಿಕಾ ಗುಪ್ತಾ ಅವರಿಗೆ ಗೊತ್ತಿರಲಿಲ್ಲ. ಹೀಗಾಗಿ ಅವರು ನಳಿಕೆಯನ್ನು ಎಳೆದಿದ್ದರು. ಗುಂಡು ಅವರ ಕುತ್ತಿಗೆಯನ್ನು ಹೊಕ್ಕಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಆಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. 2021ರ ಮೇ ತಿಂಗಳಲ್ಲಿ, ಅಂದರೆ ಕೇವಲ ಎರಡು ತಿಂಗಳ ಹಿಂದಷ್ಟೇ ರಾಧಿಕಾ, ತಮ್ಮ ಮಗ ಆಕಾಶ್ ಗುಪ್ತಾ ಜತೆ ಮದುವೆಯಾಗಿದ್ದರು ಎಂದು ಮಹಿಳೆಯ ಮಾವ ರಾಜೇಶ್ ಗುಪ್ತಾ ಪೊಲೀಸರಿಗೆ ತಿಳಿಸಿದ್ದಾರೆ. ಆದರೆ ಇದರಲ್ಲಿ ಏನೋ ಸಂಚು ನಡೆದಿದೆ ಎಂದು ಆರೋಪಿಸಿರುವ ಮಹಿಳೆಯ ತಂದೆ, ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. 'ಪಟ್ಟಣದಲ್ಲಿ ನಮ್ಮ ಸಣ್ಣ ಆಭರಣ ವ್ಯವಹಾರವಿದೆ. ಪಂಚಾಯತ್ ಚುನಾವಣೆ ಸಂದರ್ಭದಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಒಪ್ಪಿಸಿದ್ದ ನಮ್ಮ 12 ಬೋರ್ ಸಿಂಗಲ್ ಬ್ಯಾರೆಲ್ ಬಂದೂಕನ್ನು ಗುರುವಾರ ಮಧ್ಯಾಹ್ನ 3 ಗಂಟೆಗೆ ಮಗ ಆಕಾಶ್ ವಾಪಸ್ ತಂದಿದ್ದ. ಈ ಬಂದೂಕನ್ನು ಎರಡನೆಯ ಮಹಡಿಯಲ್ಲಿರುವ ಕೊಠಡಿಯಲ್ಲಿ ಇರಿಸಲಾಗಿತ್ತು. ಅಲ್ಲಿ ರಾಧಿಕಾ ಅದನ್ನು ಹಿಡಿದುಕೊಂಡು ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿದ್ದಳು' ಎಂದು ರಾಜೇಶ್ ಗುಪ್ತಾ ತಿಳಿಸಿದ್ದಾರೆ. 'ಸಂಜೆ ನಮಗೆ ಗುಂಡಿನ ಸದ್ದು ಕೇಳಿಸಿತು. ಕೂಡಲೇ ಮಹಡಿ ಮೇಲೆ ಓಡಿದೆವು. ಗುಂಡೇಟಿನಿಂದ ರಾಧಿಕಾ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಅವರ ಫೋನ್ ಕ್ಯಾಮೆರಾ ಸೆಲ್ಫಿ ಮೋಡ್‌ನಲ್ಲಿ ಆನ್‌ನಲ್ಲಿತ್ತು' ಎಂದು ಅವರು ಹೇಳಿದ್ದಾರೆ. ಮತ್ತು ಮೊಬೈಲ್ ಫೋನ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಆ ಫೋನ್‌ನಲ್ಲಿ ಗುಂಡು ಹಾರುವ ಕೆಲವೇ ಸೆಕೆಂಡುಗಳ ಮೊದಲು ತೆಗೆದುಕೊಂಡಿದ್ದ ಸೆಲ್ಫಿ ದೊರಕಿದೆ. ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಅದರಲ್ಲಿ ಗುಂಡೇಟಿನ ಹೊರತಾಗಿ ಬೇರೆ ಯಾವುದೇ ಹಿಂಸೆಯ ಗುರುತು ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.


from India & World News in Kannada | VK Polls https://ift.tt/3y1TtK9

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...