ಬೆಂಗಳೂರು: ಜುಲೈ 25 ಕ್ಕೆ ಹೈಕಮಾಂಡ್‌ನಿಂದ ಸಂದೇಶ ಬರುತ್ತದೆ. ಆ ಸಂದೇಶದಂತೆ ನಾನು ನಡೆದುಕೊಳ್ಳುತ್ತೇನೆ. ಹೌದು, ಇದು ಸಿಎಂ ಅವರು ಹೇಳಿದ್ದ ಮಾತು. ಬಗ್ಗೆ ಹೈಕಮಾಂಡ್ ಜುಲೈ 25 ಕ್ಕೆ ಮುಖ್ಯಮಂತ್ರಿಗಳಿಗೆ ಒಂದು ಸಂದೇಶ ನೀಡುತ್ತಾರೆ ಎಂದು ಹೇಳಲಾಗಿತ್ತು. ಭಾನುವಾರ ಯಾವುದೇ ಸಂದೇಶ ಮುಖ್ಯಮಂತ್ರಿಗಳಿಗೆ ಬಂದಿಲ್ಲ. ಇನ್ನು ಸೋಮವಾರವಾದರೂ ಬರುತ್ತಾ ಎಂಬ ಕುತೂಹಲ ಕೆರಳಿದೆ. ಹಲವು ದಿನಗಳಿಂದ ಚಾಲ್ತಿಯಲ್ಲಿರುವ ನಾಯಕತ್ವ ಬದಲಾವಣೆ ಗೊಂದಲ ಇನ್ನೂ ಮುಂದುವರಿದಿದೆ. ಇದೀಗ ಕ್ಲೈಮಾಕ್ಸ್ ಹಂತಕ್ಕೆ ಬಂದು ತಲುಪಿದೆ ಎನ್ನಲಾಗಿದ್ದರೂ ಕೊನೆಯಗಳಿಗೆಯಲ್ಲೂ ನಿಗೂಢ ರೀತಿಯಲ್ಲಿಯೇ ಉಳಿದುಕೊಂಡಿದೆ. ಜುಲೈ 25 ಕ್ಕೆ ಸಂದೇಶ ಬರಲಿದ್ದು ಮರುದಿನ ಅಂದರೆ ಜುಲೈ 26 ಕ್ಕೆ ಮುಖ್ಯಮಂತ್ರಿಗಳು ಸಾಧನಾ ಸಮಾವೇಶದಲ್ಲಿ ಭಾಗಿಯಾಗಿ ಬಳಿಕ ರಾಜಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸುತ್ತಾರೆ ಎನ್ನಲಾಗಿತ್ತು. ಆದರೆ ಭಾನುವಾರ ಯಾವುದೇ ಸಂದೇಶ ಬಂದಿಲ್ಲ ಎಂದು ಸ್ವತಃ ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ. ಮತ್ತೊಂದು ಕಡೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅವರು ಯಡಿಯೂರಪ್ಪ ಅವರು ಆಡಳಿತ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಅಷ್ಟೇ ಅಲ್ಲದೆ ಸಚಿವ ಜಗದೀಶ್ ಶೆಟ್ಟರ್ ಅವರು ನಾಯಕತ್ವ ಬದಲಾವಣೆ ವಿಚಾರವಾಗಿ ವರಿಷ್ಠರ ನಿರ್ಧಾರದಲ್ಲಿ ಗೊಂದಲ ಇದೆ. 75 ವರ್ಷ ಮೇಲ್ಪಟ್ಟವರು ಅಧಿಕಾರದಲ್ಲಿ ಇರಬಾರದು ಎಂಬ ನಿಯಮ ಬಿಜೆಪಿಯಲ್ಲಿ ಇಲ್ಲ ಎಂದಿದ್ದಾರೆ. ಒಟ್ಟಿನಲ್ಲಿ ಸೋಮವಾರ ನಡೆಯಲಿರುವ ಸಾಧನಾ ಸಮಾವೇಶದ ಬಳಿಕ ಏನಾಗಲಿದೆ ಎಂಬುವುದು ಸಾಕಷ್ಟು ಕುತೂಹಲ ಕೆರಳಿಸಿದೆ. ಮಾಧ್ಯಾಹ್ಮದ ಬಳಿಕ ಕಾರವಾರಕ್ಕೆ ತೆರಳುವ ಯೋಚನೆಯನ್ನು ಮುಖ್ಯಮಂತ್ರಿಗಳು ಮಾಡಿದ್ದಾರೆ. ಆದರೆ ಅಧಿಕೃತವಾಗಿ ಕಾರ್ಯಕ್ರಮ ನಿಗದಿಯಾಗಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಎಲ್ಲರ ಚಿತ್ತ ಹೈಕಮಾಂಡ್‌ನತ್ತ ಇದೆ. ಹೈಕಮಾಂಡ್ ಸೂಚನೆಯಂತೆ ಬಿಎಸ್‌ವೈ ಮುಂದಿನ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.
from India & World News in Kannada | VK Polls https://ift.tt/3BFkvZV