ಬೆಂಗಳೂರು: ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಇಳಿಸಬಾರದು ಎಂಬುವದು ಮಠಾಧಿಪತಿಗಳ ನಿಲುವು. ಯಡಿಯೂರಪ್ಪ ಅವರು ಪಕ್ಷ ಕಟ್ಟಿದವರು. ಅವರನ್ನು ಅಗೌರವ ರೀತಿಯಲ್ಲಿ ಇಳಿಸಬಾರದು ಎಂದು ಹೇಳಿಕೆ ನೀಡಿದ್ದಾರೆ. ಮಠಾಧಿಪತಿಗಳ ಸಮಾವೇಶದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ದಿಂಗಾಲೇಶ್ವರ ಸ್ವಾಮೀಜಿ ಪ್ರತಿಕ್ರಿಯೆ ನೀಡಿದರು. ಯಡಿಯೂರಪ್ಪ ಅವರು ತನಗೆ ಅಧಿಕಾರ ಸಾಕು ಅನ್ನಿಸಿದರೆ, ಅದು ಅವರಿಗೆ ಬಿಟ್ಟ ವಿಚಾರ. ಆದರೆ, ಬಲವಂತವಾಗಿ ಅಧಿಕಾರದಿಂದ ಇಳಿಸುವುದನ್ನು ಖಂಡಿಸುತ್ತೇವೆ. ಯಡಿಯೂರಪ್ಪ ಅವರನ್ನು ಕುರ್ಚಿಯಿಂದ ಇಳಿಸುವ ನಿರ್ಧಾರ ಹೈಕಮಾಂಡ್ ಕೈಗೊಳ್ಳಲ್ಲ ಎಂದು ನಮಗೆ ವಿಶ್ವಾಸವಿದೆ. ಯಾವ ಕಾರಣಕ್ಕೂ ಅಂತಹ ನಿರ್ಧಾರ ಮಾಡಬೇಡಿ ಎಂದು ಹೈಕಮಾಂಡ್ ಗೆ ಮನವಿ ಮಾಡಿದರು. ಸ್ವಾಮೀಜಿಗಳು ಕಾಣಿಕೆ ಪಡೆದ ವಿಚಾರ ಕುರಿತು ಮಾತನಾಡಿ, ಮಠಾಧಿಪತಿಗಳು ಕಾಣಿಕೆ ತಿರಸ್ಕಾರ ಮಾಡಬಾರದು. ನಾನು ಯಾವುದೇ ಮಾಧ್ಯಮಗಳ ಬಗ್ಗೆ ಮಾತನಾಡಿಲ್ಲ. ಯಾರು ಕಾಣಿಕೆ ಬಗ್ಗೆ ಆರೋಪ ಮಾಡಿದ್ದಾರೆ ಅವರ ಬಗ್ಗೆ ಮಾತನಾಡಿದ್ದೇನೆ ಅಷ್ಟೇ. ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿದ್ದೇನೆ. ನಮ್ಮ ನಿಲುವನ್ನು ರಾಜ್ಯದ ಮುಂದೆ ಇಟ್ಟಿದ್ದೇವೆ ಎಂದು ಹೇಳಿದರು.
from India & World News in Kannada | VK Polls https://ift.tt/3BD6SKL