ವಾಯುಪಡೆ ಸೇನೆಗೆ ಬೆಂಬಲ ನೀಡುವ ಶಕ್ತಿಯಷ್ಟೇ ಎಂದ ಬಿಪಿನ್ ರಾವತ್: ಐಎಎಫ್ ಮುಖ್ಯಸ್ಥರ ಅಸಮಾಧಾನ

ಹೊಸದಿಲ್ಲಿ: ದೇಶವನ್ನು ವೈರಿಗಳಿಂದ ರಕ್ಷಿಸಲು , ವಾಯುಸೇನೆ ಮತ್ತು ನೌಕಾಪಡೆಗಳ ನಡುವೆ ಸಮನ್ವಯ ಬಹಳ ಮುಖ್ಯ. ಆದರೆ, ಈ ಮೂರೂ ಪಡೆಗಳ ನಡುವೆ ಸಾಮರಸ್ಯದ ಕೊರತೆ ಆಗಾಗ ಕಂಡುಬರುತ್ತಿರುತ್ತದೆ. ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅವರು ವಾಯಪಡೆಯನ್ನು 'ಬೆಂಬಲದ ಅಂಗ' ಎಂದು ವರ್ಣಿಸಿರುವುದಕ್ಕೆ ಏರ್ ಚೀಫ್ ಮಾರ್ಷಲ್ ಆರ್‌ಕೆಎಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಕ್ಷಣಾ ವ್ಯವಸ್ಥೆಯಲ್ಲಿ ಭಾರಿ ದೊಡ್ಡ ಪಾತ್ರ ನಿರ್ವಹಿಸುತ್ತದೆ ಎಂದು ಅವರು ಹೇಳಿದ್ದಾರೆ. ಜಾಗತಿಕ ಭಯೋತ್ಪಾದನಾ ನಿಗ್ರಹ ಮಂಡಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದ್ದ ಬಿಪಿನ್ ರಾವತ್, 'ಸೇನೆಯಲ್ಲಿ ಯುದ್ಧ ಶಕ್ತಿಗಳಿಗೆ ನೆರವಾಗುವ ಪೂರಕ ಬೆಂಬಲ ಹಾಗೂ ಎಂಜಿನಿಯರ್ ಬೆಂಬಲದಂತೆಯೇ ವಾಯು ಪಡೆಯು ಭೂಸೇನಾ ಪಡೆಗಳಿಗೆ ಸೂಕ್ತ ಬೆಂಬಲ ಒದಗಿಸುವ ಅಗತ್ಯವಿದೆ. ಸಶಸ್ತ್ರಪಡೆಗಳ ಬೆಂಬಲದ ತೋಳಿನಂತೆ ವಾಯು ಪಡೆ ಇರಲಿದೆ ಎಂಬುದನ್ನು ಮರೆಯಬಾರದು' ಎಂದಿದ್ದರು. 'ಅವುಗಳು ಬೆಂಬಲದ ಪಡೆಗಳಾಗಿರುತ್ತವೆ. ಆದರೆ ಅವುಗಳಿಗೆ ವಿಭಾಗಗಳಿರುತ್ತವೆ. ಅವರು ವಾಯು ರಕ್ಷಣಾ ವಿಭಾಗವನ್ನು ಹೊಂದಿದ್ದಾರೆ ಮತ್ತು ಕಾರ್ಯಾಚರಣೆಗಳ ಸಮಯಗಳಲ್ಲಿ ಭೂಸೇನಾ ಪಡೆಗಳಿಗೆ ನೆರವು ನೀಡುತ್ತವೆ. ಇದು ಅವರು ಅರ್ಥಮಾಡಿಕೊಳ್ಳಬೇಕಾದ ಮೂಲ ಸಂಗತಿ' ಎಂದು ಹೇಳಿದ್ದರು. ಕಾರ್ಯಕ್ರಮದ ಬಳಿಕ ಮಾತನಾಡಿದ ಏರ್ ಚೀಫ್ ಮಾರ್ಷಲ್ ಭಡೂರಿಯಾ, 'ಇದು ಬರಿಯ ಬೆಂಬಲದ ಪಾತ್ರ ಹೊಂದಿಲ್ಲ. ವಾಯುಶಕ್ತಿಯು ಭಾರಿ ದೊಡ್ಡ ಪ್ರಮಾಣದ ಪಾತ್ರ ನಿರ್ವಹಿಸುತ್ತದೆ. ಯಾವುದೇ ಸಮಗ್ರ ಯುದ್ಧ ಸನ್ನಿವೇಶಗಳಲ್ಲಿ ಬೆಂಬಲವೊಂದೇ ವಿಚಾರವಾಗಿರುವುದಿಲ್ಲ' ಎಂದು ರಾವತ್ ಅವರ ಹೇಳಿಕೆಯನ್ನು ಉಲ್ಲೇಖಿಸದೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.


from India & World News in Kannada | VK Polls https://ift.tt/3hebXAV

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...