ಗೂಗಲ್‌ ಮ್ಯಾಪ್‌ನಲ್ಲಿ ಪಂಪ್‌ವೆಲ್ ಸೇತುವೆ ಈಗ ‘ನಳಿನ್‌ ಕುಮಾರ್ ಸೀಸನಲ್ ಲೇಕ್..!’

ಮಂಗಳೂರು: ಪಂಪ್‌ವೆಲ್‌ ಫ್ಲೈಓವರ್ ವಿಚಾರವಾಗಿ ಕಳೆದ ಕೆಲ ವರ್ಷಗಳಿಂದ ಸಿಕ್ಕಾಪಟ್ಟೆ ಟ್ರೋಲ್‌ಗೆ ಒಳಗಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಸಂಸದ ಇದೀಗ ಮತ್ತೊಮ್ಮೆ ಇದೇ ವಿಚಾರವಾಗಿ ಸದ್ದು ಮಾಡ್ತಿದ್ದಾರೆ. 2020ರಲ್ಲಿ ರಾಜ್ಯದಲ್ಲಿ ಅತೀ ಹೆಚ್ಚು ಟ್ರೋಲ್‌ಗೆ ಒಳಗಾಗಿದ್ದ ರಾಜಕಾರಣಿಯಾಗಿ ಸುದ್ದಿಯಾಗಿದ್ದ ನಳಿನ್ ಕುಮಾರ್ ಕಟೀಲ್, ಟ್ರೋಲ್‌ಗಳ ಹಾವಳಿಗೆ ಬೇಸತ್ತು ಕೊನೆಗೂ ಕಾಮಗಾರಿಗೆ ವೇಗ ಕೊಟ್ಟು ಲೋಕಾರ್ಪಣೆಗೊಳಿಸಿದ್ದರು. ಪಂಪ್‌ವೆಲ್‌ ಬ್ರಿಡ್ಜ್‌ ಉದ್ಘಾಟನೆಯ ಬಳಿಕವೂ ಕಟೀಲ್ ಅವರ ಕಾಲೆಳೆಯುವುದನ್ನು ಮಾತ್ರ ನೆಟ್ಟಿಗರು ಇನ್ನೂ ನಿಲ್ಲಿಸಿಲ್ಲ. ಇದೀಗ ಪಂಪ್‌ವೆಲ್‌ ಫ್ಲೈಓವರ್‌ ಹೆಸರನ್ನೇ ಗೂಗಲ್‌ ಮ್ಯಾಪ್‌ನಲ್ಲಿ ಟ್ರೋಲಿಗರು ಬದಲಾಯಿಸಿದ್ದಾರೆ. ಈ ಹಿಂದಿನಿಂದಲೂ ಪಂಪ್‌ವೆಲ್‌ ಸರ್ಕಲ್‌ ಅನ್ನು ಮಹಾವೀರ ಸರ್ಕಲ್‌ ಅಂತಾ ಕರೆಯಲಾಗ್ತಿದೆ. ದಾಖಲೆಗಳಲ್ಲಿ ಮಹಾವೀರ ಸರ್ಕಲ್ ಅಂತಿದ್ದರೂ ಸ್ಥಳೀಯ ಜನರ ಬಾಯಲ್ಲಿ ಮಾತ್ರ ಪಂಪ್‌ವೆಲ್ ಸರ್ಕಲ್ ಅಂತಾನೇ ಜನಜನಿತವಾಗಿದೆ. ಗೂಗಲ್‌ ಮ್ಯಾಪ್‌ನಲ್ಲಿ ಇಂಗ್ಲಿಷ್‌ನಲ್ಲಿ ಪಂಪ್‌ವೆಲ್ ಸರ್ಕಲ್ ಅಂತಾ ತೋರಿಸಿದರೆ ಕನ್ನಡದಲ್ಲಿ ಮಹಾವೀರ ವೃತ್ತ ಅಂತಾ ತೋರಿಸ್ತಿದೆ. ಇದೀಗ ಯಾರೋ ಟ್ರೋಲ್‌ ಮಾಡೋರು ಪಂಪ್‌ವೆಲ್ ಫ್ಲೈಓವರ್‌ಗೆ ‘ಪಂಪ್‌ವೆಲ್ - ದಿ ಗ್ರೇಟ್‌ ವಾಲ್‌ ಆಫ್ ಪಂಪ್‌ವೆಲ್’ ಅಂತಾ ನಾಮಕರಣ ಮಾಡಿದ್ದಾರೆ. ಪಂಪ್‌ವೆಲ್‌ ಪಕ್ಕದಲ್ಲೇ ಇದೆ ‘ನಳಿನ್ ಕಟೀಲ್‌ ಸೀಸನಲ್ ಲೇಕ್..!’ ಪಂಪ್‌ವೆಲ್ ಮೇಲ್ಸೇತುವೆಗೆ ‘ದಿ ಗ್ರೇಟ್‌ ವಾಲ್‌ ಆಫ್ ಪಂಪ್‌ವೆಲ್’ ಅಂತಾ ಗೂಗಲ್‌ ಮ್ಯಾಪ್‌ನಲ್ಲಿ ನಾಮಕರಣ ಮಾಡಿದ್ದು ಮಾತ್ರವಲ್ಲದೇ ಅದರ ಪಕ್ಕದಲ್ಲೇ ಇರುವ ಸರ್ವೀಸ್ ರಸ್ತೆಗೆ ‘ನಳಿನ್ ಕಟೀಲ್‌ ಸೀಸನಲ್ ಲೇಕ್’ ಅಂತಾ ನಾಮಕರಣ ಮಾಡಿದ್ದಾರೆ. ಇತ್ತೀಚೆಗೆ ಮಂಗಳೂರಿನಲ್ಲಿ ಸುರಿದ ಈ ವರ್ಷದ ಮೊದಲ ಮಳೆಗೆ ಪಂಪ್‌ವೆಲ್ ಸರ್ಕಲ್ ಬಳಿಯ ಸರ್ವೀಸ್ ರಸ್ತೆಗಳು ಜಲಾವೃತಗೊಂಡಿತ್ತು. ಪಂಪ್‌ವೆಲ್ ಸರ್ಕಲ್ ಸೇತುವೆಯ ಮೇಲಿನಿಂದ ಅಕ್ಷರಶಃ ಕೆರೆಯಂತೆ ಕಾಣುತ್ತಿತ್ತು. ಈ ಸಮಯದಲ್ಲೂ ನಳಿನ್ ಕುಮಾರ್ ಕಟೀಲ್ ಅವರನ್ನು ಜಲಾವೃತಗೊಂಡಿದ್ದ ವಿಡಿಯೋ ಹಾಕಿ ಟ್ರೋಲ್‌ ಮಾಡಲಾಗಿತ್ತು. ಇದೀಗ ಆ ಸರ್ವೀಸ್ ರಸ್ತೆಯನ್ನೇ ‘ನಳಿನ್ ಕಟೀಲ್‌ ಸೀಸನಲ್ ಲೇಕ್’ ಅಂತಾ ಗೂಗಲ್‌ ಮ್ಯಾಪ್‌ನಲ್ಲಿ ಹೆಸರಿಸಲಾಗಿದೆ. ಪಂಪ್‌ವೆಲ್ ಮೇಲ್ಸೇತುವೆ ಉದ್ಘಾಟನೆಗೂ ಮುನ್ನ ಭಾರೀ ಟ್ರೋಲ್‌ಗೆ ಒಳಗಾಗಿದ್ದ ನಳಿನ್ ಕುಮಾರ್ ಕಟೀಲ್, ಮೇಲ್ಸೇತುವೆ ಉದ್ಘಾಟನೆ ಟ್ರೋಲ್‌ ಮಾಡಿದವರಿಗೆ ಟಾಂಗ್ ನೀಡಿದ್ದರು.


from India & World News in Kannada | VK Polls https://ift.tt/3dGFiSi

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...