ಬೆಂಗಳೂರು: ಚಾಮರಾಜನಗರ ಆಕ್ಸಿಜನ್ ದುರಂತ ವಿಚಾರವಾಗಿ ರಾಜ್ಯ ಸರ್ಕಾರದ ನಡೆಯ ಕುರಿತಾಗಿ ಗಂಭೀರ ಆರೋಪ ಮಾಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ಗೆ ಆರೋಗ್ಯ ಸಚಿವ ಡಾ. ತಿರುಗೇಟು ನೀಡಿದ್ದಾರೆ. ಗುರುವಾರ ಸುದ್ದಿಗೋಷ್ಠಿ ನಡೆಸಿದ್ದ ಡಿಕೆಶಿ ‘ರಾಜ್ಯ ಸರ್ಕಾರದ ಯಾವನೊಬ್ಬ ಸಚಿವ ಮೃತಪಟ್ಟವರ ಕುಟುಂಬಸ್ಥರನ್ನು ಭೇಟಿ ಮಾಡಿಲ್ಲ. ಇದು ಕೊಲೆ ಅಲ್ಲದೆ ಇನ್ನೇನು ಎಂದು ಪ್ರಶ್ನಿಸಿದ್ದರು. ಅಲ್ಲದೆ ದುರುಂತದ ಸಂದರ್ಭದಲ್ಲಿ ಆಕ್ಸಿಜನ್ ಪೂರೈಕೆ ಮಾಡಲು ಸಾಧ್ಯವಾಗಿಲ್ಲ, ರಾತ್ರಿ ಹೊತ್ತು ವೈದ್ಯರು, ನರ್ಸ್ ಕೂಡಾ ರಾತ್ರಿ ಇರಲಿಲ್ಲ ಎಂದು ಆರೋಪಿಸಿದ್ದರು. ಇದಕ್ಕೆ ಶುಕ್ರವಾರ ಬೆಂಗಳೂರಿನಲ್ಲಿ ತಿರುಗೇಟು ನೀಡಿರುವ ಸಚಿವ ಡಾ. ಕೆ ಸುಧಾಕರ್, ಚಾಮರಾಜನಗರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನೇ ಮೊದಲು ಸ್ಥಳಕ್ಕೆ ಭೇಟಿ ನೀಡಿದ್ದು. ಬೇರೆ ಯಾರೂ ಅಲ್ಲಿಗೆ ಹೋಗಿರಲಿಲ್ಲ. ನನ್ನ ಕೆಲಸ ಏನು ಅನ್ನೋದು ಗೊತ್ತಿದೆ. ಘಟನಾ ಸ್ಥಳಕ್ಕೆ ಸಿಎಂ ಅವರೇ ಹೋಗಬೇಕು ಅಂತೇನಿಲ್ಲ, ನಾವು ಹೋದರೆ ಸರ್ಕಾರ ಹೋದಂತೆ ಅಲ್ಲವೇ ಎಂದು ಸಮರ್ಥಿಸಿಕೊಂಡರು. ನಾವು ಕೂಡ ಸರ್ಕಾರದ ಒಂದು ಭಾಗ. ಅವರು ಬೇರೆ ರಾಜ್ಯದಲ್ಲಿನ ಬಗ್ಗೆ ಉಲ್ಲೇಖ ಮಾಡುವುದಿಲ್ಲ. ಚಾಮರಾಜನಗರ ದುರಂತವನ್ನು ಯಾರು ಪ್ರಸ್ತಾಪ ಮಾಡಿದ್ದಾರೆ ಅವರಿಗೆ ಬೇರೆ ರಾಜ್ಯದಲ್ಲಿ ಬೆಡ್ ಇಲ್ಲದೆ ಮಲಗಿಸಿದ್ದನ್ನ ನೋಡಲು ಹೇಳಿ ಎಂದು ಪರೋಕ್ಷವಾಗಿ ಡಿಕೆಶಿಗೆ ತಿರುಗೇಟು ನೀಡಿದರು. ಎಲ್ಲದರಲ್ಲೂ ರಾಜಕೀಯ ಬೇಡ, ನಮ್ಮ ರಾಜ್ಯ ಅನ್ನುವುದನ್ನು ಗಮನದಲ್ಲಿಟ್ಟು ಮಾತನಾಡಲಿ ಎಂದರು. 24ಲಕ್ಷ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಅವರಿಗೆ ಲಸಿಕೆ ನೀಡಿ ಕಾಲೇಜು ಆರಂಭಿಸುವ ಗುರಿ ಇದೆ. ಎಲ್ಲರಿಗೂ ಲಸಿಕೆ ನೀಡುವ ಗುರಿ ಇದೆ. ನಮ್ಮಲ್ಲಿ 135 ಕೋಟಿ ಜನ ಸಂಖ್ಯೆ ಇದೆ ಈಗಾಗಲೇ 39 ಕೋಟಿ ಲಸಿಕೆ ನೀಡಲಾಗಿದ್ದು ವಿಶ್ವದಲ್ಲೇ ಅತಿ ಹೆಚ್ಚು ಲಸಿಕೆ ನೀಡಿರೋ ಹೆಮ್ಮೆ ಭಾರತಕ್ಕೆ ಇದೆ ಎಂದರು.
from India & World News in Kannada | VK Polls https://ift.tt/3hpw3Y1