ಹೊಸದಿಲ್ಲಿ: ಸಾರ್ವತ್ರಿಕ ಕೋಟಾ ಅಡಿ ಮುಂಬರುವ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಮಹಿಳಾ ಈಜುಪಟು ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ ಎಂದು ಭಾರತೀಯ ಕ್ರೀಡಾ ಪ್ರಾಧಿಕಾರ(ಎಸ್‌ಎಐ) ಶುಕ್ರವಾರ ಸ್ಪಷ್ಟಪಡಿಸಿದೆ. ಸಾಜನ್ ಪ್ರಕಾಶ್ ಹಾಗೂ ಶ್ರೀಹರಿ ನಟರಾಜ್ ಬಳಿಕ 2020ರ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ ಮೂರನೇ ಈಜುಪಟು ಮಾನ ಪಟೇಲ್. ಕರ್ನಾಟಕದ ಶ್ರೀಹರಿ ಹಾಗೂ ಸಾಜನ್ ಪ್ರಕಾಶ್ ಅವರು ಇತ್ತೀಚೆಗೆ ಸ್ವಯಂಚಾಲಿತ ಅರ್ಹತೆಯನ್ನು ಪಡೆದುಕೊಂಡಿದ್ದರು. ಮಾನ ಪಟೇಲ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಬಗ್ಗೆ ಎಸ್‌ಎಐ ಟ್ವಿಟರ್‌ನಲ್ಲಿ ಸ್ಪಷ್ಟಪಡಿಸಿದೆ. "ಸಾರ್ವತ್ರಿಕ ಕೋಟಾ ಅಡಿ ಮುಂಬರುವ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಭಾರತೀಯ ಮಹಿಳಾ ಈಜುಪಟು ಮಾನ ಪಟೇಲ್ ಅವರಿಗೆ ಅಭಿನಂದನೆಗಳು," ಎಂದು ಭಾರತೀಯ ಕ್ರೀಡಾ ಪ್ರಾಧಿಕಾರ(ಎಸ್‌ಎಐ) ಟ್ವೀಟ್ ಮಾಡಿದೆ. ಕಳೆದ ವಾರ ನಡೆದಿದ್ದ ಸೆಟ್ಟೆ ಕಾಲ್ಲಿ ಟ್ರೋಫಿಯ ಪುರುಷರ 200 ಮೀ. ಬಟರ್‌ಫ್ಲೈನಲ್ಲಿ 1:56:38 ಸಮಯದಲ್ಲಿ ಮುಗಿಸುವ ಮೂಲಕ ಮುಂಬರುವ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಈಜುಪಟು ಎಂಬ ಕೀರ್ತಿಗೆ ಸಾಜನ್ ಪ್ರಕಾಶ್ ಭಾಜನರಾಗಿದ್ದರು. ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು 1:56:48 ಸಮಯ ನಿಗದಿಪಡಿಸಲಾಗಿತ್ತು. ಅದೇ ಟೂರ್ನಿಯಲ್ಲಿ ಕರ್ನಾಟಕದ ಶ್ರೀಹರಿ ನಟರಾಜ್ ಅವರು 100 ಮೀಟರ್ ಬ್ಯಾಕ್‌ಸ್ಟ್ರೋಕ್‌ನಲ್ಲಿ 53.77 ಸೆಕೆಂಡ್‌ಗಳಲ್ಲಿ ಮುಗಿಸುವ ಮೂಲಕ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಎರಡನೇ ಭಾರತೀಯ ಎರಡನೇ ಈಜುಪಟುವಾಗಿದ್ದರು. ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು 100 ಮೀಟರ್ ಬ್ಯಾಕ್‌ಸ್ಟ್ರೋಕ್‌ನಲ್ಲಿ 53.85 ಸೆಕೆಂಟ್‌ಗಳನ್ನು ನಿಗದಿಪಡಿಸಲಾಗಿತ್ತು. ಈ ಇಬ್ಬರೂ ಕೂಡ ಟೋಕಿಯೋ ಒಲಿಂಪಿಕ್ಸ್‌ಗೆ 'ಎ' ಸ್ಟ್ಯಾಂಡರ್ಡ್ ಅರ್ಹತೆ ಪಡೆದುಕೊಂಡಿದ್ದಾರೆ. ಸಾರ್ವತ್ರಿಕ ಕೋಟಾದಡಿ 2020ರ ಟೋಕಿಯೋ ಒಲಿಂಪಿಕ್ಸ್‌ಗೆ ನಾಮ ನಿರ್ದೇಶನಗೊಂಡಿದ್ದ ಈಜುಪಟುಗಳಲ್ಲಿ ಮಾನ ಪಟೇಲ್ ಕೂಡ ಒಬ್ಬರು ಎಂದು ಕಳೆದ ಜೂನ್‌ನಲ್ಲಿ ಭಾರತೀಯ ಈಜು ಪ್ರಾಧಿಕಾರ ಪ್ರಕಟಿಸಿತ್ತು. ನಾಮ ನಿರ್ದೇಶನಗೊಂಡಿದ್ದ ಎಲ್ಲಾ ಈಜು ಪಟುಗಳು ಜೂನ್ 20 ರಂದು ಇಂಡಿಯನ್ ಒಲಿಂಪಿಕ್ ಅಸೋಸಿಯೇಷನ್ ಮೂಲಕ ಎಫ್‌ಐಎನ್‌ಎ ಜೊತೆಗೆ ಸಂವಹನ ನಡೆಸಿದ್ದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3xc4t7j