ಅಂದು ರಿವಾಲ್ವರ್ ಜತೆಯಲ್ಲಿ ಇದ್ದಿದ್ದರೆ ರೇಖಾ ಜೀವ ಉಳಿಯುವ ಸಾಧ್ಯತೆ ಇತ್ತು!

ಬೆಂಗಳೂರು: ತಮ್ಮವರಿಂದಲೇ ಜೀವ ಕಳೆದುಕೊಂಡ ಬಿಬಿಎಂಪಿ ಮಾಜಿ ಕಾರ್ಪೊರೇಟರ್‌ ರೇಖಾ ಕದಿರೇಶ್‌ ಅವರ ಬಳಿ ರಿವಾಲ್ವರ್‌ ಇದ್ದಿದ್ದರೆ ಅವರು ಸಾವಿನಿಂದ ಪಾರಾಗುವ ಸಾಧ್ಯತೆಗಳಿತ್ತು ಎಂದು ಪೊಲೀಸರು ಹೇಳಿದ್ದಾರೆ. ರೇಖಾ ಕದಿರೇಶ್‌ ಕೆಲ ವರ್ಷಗಳ ಹಿಂದೆಯೇ ಸುರಕ್ಷತೆಗೆಂದು ಪರವಾನಗಿ ಪಡೆದಿದ್ದ ಪಿಸ್ತೂಲ್‌ ಅನ್ನು ತಮ್ಮ ಜೊತೆಯಲ್ಲೇ ಇಟ್ಟುಕೊಳ್ಳುತ್ತಿದ್ದರು. ಆದರೆ ಹತ್ಯೆಯಾದ ದಿನ ಅವರು ರಿವಾಲ್ವರ್‌ ಇಟ್ಟಿಕೊಂಡಿರಲಿಲ್ಲ. ಹೀಗಾಗಿ, ಆರೋಪಿಗಳಿಗೆ ರೇಖಾ ಮಾಡುವುದು ಸುಲಭವಾಯಿತು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ ಎನ್ನಲಾಗಿದೆ. ರಕ್ಷಣೆ ದೃಷ್ಟಿಯಿಂದ ಪತಿ ಕದಿರೇಶ್‌ ಪೊಲೀಸರ ಅನುಮತಿ ಪಡೆದು ಪರವಾನಗಿ ಹೊಂದಿರುವ ಪಿಸ್ತೂಲ್‌ ಖರೀದಿಸಿದ್ದರು. ಪತ್ನಿಗೆ ಪಿಸ್ತೂಲ್‌ ಬಳಕೆಯ ಟ್ರೈನಿಂಗ್‌ ಕೂಡ ಕೊಡಿಸಿದ್ದರು. ಹತ್ಯೆಯ ದಿನದಂದು ಸಹ ಮನೆಯಲ್ಲೇ ಪಿಸ್ತೂಲ್‌ ಇತ್ತು. ಒಂದು ವೇಳೆ ರಿವಾಲ್ವರ್‌ ತಂದಿದ್ದರೆ ಆ ದಿನದ ಚಿತ್ರಣವೇ ಬೇರೆಯಾಗಿರುತ್ತಿತ್ತು ಎನ್ನಲಾಗಿದೆ. ತಮಗೆ ಯಾವ ರೀತಿಯಲ್ಲೂ ಸ್ಪಂದಿಸದೆ ನಿರ್ಲಕ್ಷ್ಯವಹಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ರೇಖಾಳನ್ನು ಮಾಲಾ ಹಾಗೂ ಪೀಟರ್‌ ಗ್ಯಾಂಗ್‌ ಕೊಲೆ ಮಾಡಲು ಸ್ಕೆಚ್‌ ಹಾಕಿತ್ತು. ಛಲವಾದಿಪಾಳ್ಯ ವಾರ್ಡ್‌ನ ಬಿಜೆಪಿ ಕಚೇರಿ ಬಳಿ ಊಟ ನೀಡಿ ಬರುವಾಗ ಆರೋಪಿಗಳು ಏಕಾಏಕಿ ದಾಳಿ ಮಾಡಿ ಮಾರಕಾಸ್ತ್ರಗಳಿಂದ ಮಾಜಿ ಕಾರ್ಪೊರೇಟರ್‌ ರೇಖಾ ಕದಿರೇಶ್‌ ಹತ್ಯೆ ಮಾಡಿದ್ದರು. ಈ ಸಂಬಂಧ ಕಾಟನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಏಳು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು, ಹತ್ಯೆ ಪ್ರಕರಣದ ಆರೋಪಿಗಳಿಗೆ ಆಶ್ರಯ ನೀಡಿದ್ದ ಸೆಂದಿಲ್‌ ಆಲಿಯಾಸ್‌ ಕ್ಯಾಪ್ಟನ್‌ ಸೆಂದಿಲ್‌ ತಲೆಮರೆಸಿಕೊಂಡಿದ್ದು, ಆತನನ್ನು ಶೀಘ್ರದಲ್ಲೇ ಬಂಧಿಸುವುದಾಗಿ ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರೇಖಾ ಅವರ ಹತ್ಯೆಯ ಸಂಚಿನ ಪ್ರಮುಖ ರೂವಾರಿ ಅವರ ನಾದಿನಿ ಮಾಲಾ ಎನ್ನುವುದು ಪೊಲೀಸರ ತನಿಖೆಯಿಂದ ಬಹಿರಂಗವಾಗಿತ್ತು. ಒಂದು ಕಾಲದಲ್ಲಿ ರೇಖಾ ಅವರ ಪತಿ ಕದಿರೇಶ್ ಅವರ ಜತೆಗಿದ್ದ ಪೀಟರ್ ಕೂಡ ರೇಖಾ ಅವರ ವಿರುದ್ಧ ಕತ್ತಿ ಮಸೆಯುತ್ತಿದ್ದ. ಇವರ ಜತೆ ಇನ್ನಷ್ಟು ಮಂದಿ ಸೇರಿಕೊಂಡು ರೇಖಾ ಅವರ ಸ್ಕೆಚ್ ಹಾಕಿದ್ದರು ಎನ್ನುವುದು ಬಯಲಾಗಿದೆ.


from India & World News in Kannada | VK Polls https://ift.tt/2TxPlCo

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...