ಪೂಜಾರ ಎಲ್ಲಿ? ಪೃಥ್ವಿ ಶಾ ಎಲ್ಲಿ? ಹಾಗ್‌ ಅಭಿಪ್ರಾಯವನ್ನು ತಳ್ಳಿಹಾಕಿದ ಬಟ್‌!

ಹೊಸದಿಲ್ಲಿ: ಭಾರತ ಟೆಸ್ಟ್ ತಂಡದ ಮೂರನೇ ಕ್ರಮಾಂಕದಲ್ಲಿ ಅವರ ಸ್ಥಾನ ತುಂಬಲು ಸೂಕ್ತ ಎಂದಿರುವ ಆಸ್ಟ್ರೇಲಿಯಾ ಮಾಜಿ ಸ್ಪಿನ್ನರ್‌ ಅಭಿಪ್ರಾಯವನ್ನು ತಿರಸ್ಕರಿಸಿದ ಪಾಕಿಸ್ತಾನ ಮಾಜಿ ಆಟಗಾರ , ಇವರಿಬ್ಬರ ಬ್ಯಾಟಿಂಗ್‌ ಶೈಲಿ ವಿಭಿನ್ನವಾಗಿದೆ ಎಂದು ಹೇಳಿದ್ದಾರೆ. ಪ್ರಸಕ್ತ ವರ್ಷ ಚೇತೇಶ್ವರ್ ಪೂಜಾರ ಅವರು ತಮ್ಮ ಸ್ಟ್ರೈಕ್‌ ರೇಟ್‌ನಿಂದಾಗಿ ಸಿಕ್ಕಾಪಟ್ಟೆ ಟೀಕೆಗೆ ಗುರಿಯಾಗಿದ್ದಾರೆ. ಇತ್ತೀಚೆಗೆ ಮುಕ್ತಾಯವಾಗಿದ್ದ ನ್ಯೂಜಿಲೆಂಡ್‌ ವಿರುದ್ಧದ ಉದ್ಘಾಟನಾ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್ ಹಣಾಹಣಿಯಲ್ಲಿ ಎರಡೂ ಇನಿಂಗ್ಸ್‌ಗಳಲ್ಲಿಯೂ ಅವರು ಕ್ರಮವಾಗಿ 8 ಮತ್ತು 12 ರನ್‌ ಗಳಿಸಿದ್ದರು. ಸದ್ಯ ಇಂಗ್ಲೆಂಡ್‌ ಪ್ರವಾಸದಲ್ಲಿರುವ ಚೇತೇಶ್ವರ್‌ ಪೂಜಾರ ಆಗಸ್ಟ್‌ 4 ರಿಂದ ಆರಂಭವಾಗಲಿರುವ ಐದು ಪಂದ್ಯಗಳ ಟೆಸ್ಟ್ ಸರಣಿ ಆಡಲು ಸಜ್ಜಾಗುತ್ತಿದ್ದಾರೆ. ಈ ಸರಣಿಯಲ್ಲಿ ಪೂಜಾರ ಕಮ್‌ಬ್ಯಾಕ್‌ ಮಾಡುವ ಸಾಧ್ಯತೆ ಇದೆ ಎಂದು ಮಾಜಿ ಆಟಗಾರ ಆಕಾಶ್‌ ಚೋಪ್ರಾ ಸೇರಿದಂತೆ ಹಲವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಚೇತೇಶ್ವರ್ ಪೂಜಾರ ಹಾಗೂ ಪೃಥ್ವಿ ಶಾ ಇಬ್ಬರೂ ಕೂಡ ವಿಭಿನ್ನ ಬ್ಯಾಟಿಂಗ್‌ ಶೈಲಿಯನ್ನು ಹೊಂದಿದ್ದಾರೆ. ಹಾಗಾಗಿ, ಇವರಿಬ್ಬರನ್ನು ಹೋಲಿಕೆ ಮಾಡಿದ್ದ ಬ್ರಾಡ್‌ ಹಾಗ್‌ ಇತ್ತೀಚೆಗೆ ಟ್ರೋಲ್‌ಗೆ ಗುರಿಯಾಗಿದ್ದರು. ಇದೀಗ ಪಾಕಿಸ್ತಾನ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಸಲ್ಮಾನ್‌ ಬಟ್‌ ಕೂಡ ಆಸ್ಟ್ರೇಲಿಯಾ ಮಾಜಿ ಸ್ಪಿನ್ನರ್‌ರ ಅಭಿಪ್ರಾಯವನ್ನು ಅಲ್ಲಗೆಳೆದಿದ್ದಾರೆ. "ಚೇತೇಶ್ವರ್‌ ಪೂಜಾರ ಅವರು ರಾತ್ರಿ ಯಾವ ಸಮಯದಲ್ಲಿ ಈ ರೀತಿ ಹೇಳಿದ್ದಾರೆ ನನಗೆ ಗೊತ್ತಿಲ್ಲ. ಚೇತೇಶ್ವರ್‌ ಪೂಜಾರ ಹಾಗೂ ಪೃಥ್ವಿ ಶಾ ಅವರ ಬ್ಯಾಟಿಂಗ್‌ ಶೈಲಿ ಪರಸ್ಪರ ವಿರುದ್ಧವಾಗಿದೆ," ಎಂದು ಬಟ್‌ ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಿರುವ ವಿಡಿಯೋದಲ್ಲಿ ಹೇಳಿದ್ದಾರೆ. "ಸ್ಪೋಟಕವಾಗಿ ಬ್ಯಾಟಿಂಗ್‌ ಮಾಡುವುದು ಪೃಥ್ವಿ ಶಾ ಅವರ ಬ್ಯಾಟಿಂಗ್‌ ಶೈಲಿಯಾಗಿದೆ. ಮತ್ತೊಂದೆಡೆ ಚೇತೇಶ್ವರ್‌ ಪೂಜಾರ ರಕ್ಷಣಾತ್ಮಕ ಬ್ಯಾಟಿಂಗ್‌ ಶೈಲಿಯನ್ನು ಹೊಂದಿದ್ದು, ವಿಶೇಷವಾಗಿ ಹೊಸ ಚೆಂಡಿನಲ್ಲಿ ಅಸಾಧಾರಣ ಡಿಫೆಂಡರ್ ಆಗಿದ್ದಾರೆ. ಪೃಥ್ವಿ ಶಾ ಅವರು ಲೀಲಾ-ಜಾಲವಾಗಿ ಬ್ಯಾಟ್‌ ಬೀಸುವ ಹಾಗೂ ಎಲ್ಲಾ ತರಹದ ಶಾಟ್‌ಗಳನ್ನು ಹೊಂದಿದ್ದಾರೆ," ಎಂದರು. ಪೃಥ್ವಿ ಶಾ ಅಸಾಧಾರಣ ಪ್ರತಿಭೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಚೇತೇಶ್ವರ್ ಪೂಜಾರ ಅವರ ಮೂರನೇ ಕ್ರಮಾಂಕ ತುಂಬಲು ಟೀಮ್‌ ಇಂಡಿಯಾದಲ್ಲಿ ಈಗಾಗಲೇ ಪ್ರತಿಭೆಗಳಿದ್ದಾರೆಂದು ಇದೇ ವೇಳೆ ಸಲ್ಮಾನ್‌ ಬಟ್‌ ಹೇಳಿದ್ದಾರೆ. "ಟೆಸ್ಟ್ ಕ್ರಿಕೆಟ್‌ನಲ್ಲಿ ಆರಂಭದಲ್ಲಿಯೇ ಹೆಚ್ಚಿನ ಹೊಡೆತಗಳಿಗೆ ನೀವು ಕೈ ಹಾಕಿದರೆ ಅಪಾಯ ಜಾಸ್ತಿ. ಪೃಥ್ವಿ ಶಾ ಅಪ್ರತಿಮ ಪ್ರತಿಭೆಯಾಗಿದ್ದಾರೆ. ಹಾಗಾಗಿ ಅವರು ಮುಂದೆ ಬಂದು ಇದನ್ನು ಸಾಬೀತುಪಡಿಸಬೇಕು ಹಾಗೂ ಎಲ್ಲರಿಗೂ ಅಚ್ಚರಿ ಮೂಡಿಸಬೇಕು," ಎಂದು ಹೇಳಿದ ಸಲ್ಮಾನ್‌ ಬಟ್‌, ಪೂಜಾರ ಸ್ಥಾನ ತುಂಬಲು ಅವರ ರೀತಿ ದೀರ್ಘ ಕಾಲ ಆಡಬಲ್ಲ ಸಾಮರ್ಥ್ಯವಿರುವ ಹಲವು ಪ್ರತಿಭೆಗಳು ತಂಡದಲ್ಲಿದ್ದಾರೆ," ಎಂದು ತಿಳಿಸಿದರು. 33ರ ಪ್ರಾಯದ ಚೇತೇಶ್ವರ್ ಪೂಜಾರ ಅವರು ಪ್ರಸಕ್ತ ವರ್ಷದಲ್ಲಿ ಹೇಳಿಕೊಳ್ಳುವಂತಹ ಫಾರ್ಮ್‌ನಲ್ಲಿ ಇಲ್ಲ. ಅವರು ಆಡಿದ 7 ಪಂದ್ಯಗಳಲ್ಲಿ 364 ರನ್‌ಗಳನ್ನು ಮಾತ್ರ ಗಳಿಸಿದ್ದಾರೆ. ಇತ್ತೀಚೆಗೆ ಮುಕ್ತಾಯವಾಗಿದ್ದ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿಯೂ ಅವರು ಹೀನಾಯ ಪ್ರದರ್ಶನ ತೋರಿದ್ದರು. ಪೃಥ್ವಿ ಶಾ ಸದ್ಯ ಶ್ರೀಲಂಕಾ ಪ್ರವಾಸದ ಇನ್ನೊಂದು ಭಾರತ ತಂಡದಲ್ಲಿದ್ದು, ಮೂರು ಪಂದ್ಯಗಳ ಓಡಿಐ ಹಾಗೂ ಮೂರು ಪಂದ್ಯಗಳ ಟಿ20 ಸರಣಿ ಆಡಲು ಸಜ್ಜಾಗುತ್ತಿದ್ದಾರೆ. ಆಗಸ್ಟ್‌ 13 ರಿಂದ ಭಾರತ ಹಾಗೂ ಶ್ರೀಲಂಕಾ ತಂಡಗಳು ಓಡಿಐ ಸರಣಿಯನ್ನು ಆರಂಭಿಸಲಿವೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/36csYVR

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...