ಸತ್ಯಸಾರಮಾನಿ ಕಾನದ-ಕಟದ ದೈವಗಳ ಮೂಲಕ್ಷೇತ್ರ ಅಭಿವೃದ್ಧಿಗೆ ಬಂಟ್ವಾಳದಲ್ಲಿ ಸಮಿತಿ ರಚನೆ

ಬಂಟ್ವಾಳ: ತುಳುನಾಡಿದ ದೈವಾರಾಧನೆಯಲ್ಲಿ ಪ್ರಾಮುಖ್ಯತೆಯನ್ನು ಪಡೆದಿರುವ ಕಾನದ ಕಟದ ದೈವಗಳ ಮೂಲಕ್ಷೇತ್ರ ಕಿಜನೊಟ್ಟುವಿನ ಕ್ಷೇತ್ರವನ್ನು ಅಭಿವೃದ್ಧಿ ಮಾಡುವ ಬಗ್ಗೆ ಬಂಟ್ವಾಳದಲ್ಲಿ ಜೀರ್ಣೋದ್ಧಾರ ಸಮಿತಿ ರಚನೆಯಾಗಿದೆ. ಬಂಟ್ವಾಳದ ನಾವೂರಿನಲ್ಲಿ ನಡೆದ ಸಭೆಯಲ್ಲಿ ಕಾನದ ಕಟದರ ಕುಲಬಾಂಧವರು ಅನೇಕರು ಭಾಗಿಯಾಗಿದ್ದರು. ಸಮುದಾಯದೊಳಗಿನ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಕುಲದೈವಗಳಾದ ಸತ್ಯ ಸಾರಮಾನಿ ಕಾನದ ಕಟದರ ಮೂಲ ಕ್ಷೇತ್ರವನ್ನು ಜೀರ್ಣೊದ್ಧಾರ ಮಾಡುವ ನಿಟ್ಟಿನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ ಸಮುದಾಯದ ಪ್ರಮುಖರು ಹತ್ತು ಹಲವು ಅಭಿಪ್ರಾಯಗಳನ್ನು ಮಂಡಿಸಿದರು. ಜಿಲ್ಲಾ ಮಟ್ಟದ ಸಮಿತಿಗೆ ಎಲ್ಲಾ ರೀತಿಯ ಸಹಾಯ ನೀಡುವ ಬಗ್ಗೆ ಬಂಟ್ವಾಳ ತಾಲೂಕು ಮಟ್ಟದ ಸಮಿತಿಯಲ್ಲಿ ಒಮ್ಮತದ ನಿರ್ಣಯ ಮಾಡಲಾಯಿತು. ಸತ್ಯ ಸಾರಮಾನಿ ದೈವಗಳ ಕ್ಷೇತ್ರದ ಖಾಸಗಿ ಜಮೀನನ್ನು ಖರೀದಿ ಮಾಡುವ ಬಗ್ಗೆ ತಾಲೂಕಿನ ಪ್ರತೀ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮ ಶಾಖೆ ರಚಿಸಿ ಸಮುದಾಯದ ಜನರಲ್ಲಿ ಈ ಕುರಿತು ಜಾಗೃತಿ ಮೂಡಿಸುವ ಬಗ್ಗೆಯೂ ನಿರ್ಣಯ ಮಾಡಲಾಯಿತು. ಅಲ್ಲದೇ ಸಮುದಾಯದೊಳಗಿನ ಭಿನ್ನಮನಸ್ಕರು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗೆ ಸರಿಸಿ ಸಮುದಾಯವನ್ನು ಒಟ್ಟುಗೂಡಿಸುವ ನಿಟ್ಟಿನಲ್ಲಿ ಯಾವುದೇ ವಿವಾದಗಳಿಗೆ ಸ್ಪಂದಿಸದೆ ಸಂಘಟಿತರಾಗುವಂತೆಯೂ ಒಕ್ಕೊರಲ ಆಗ್ರಹ ಕೇಳಿಬಂತು. ಸಭೆಯಲ್ಲಿ ಸಮುದಾಯದ ಪ್ರಮುಖರಾದ ಪುರಸಭೆ ಸದಸ್ಯ ಜನಾರ್ದನ ಚೆಂಡ್ತಿಮಾರ್, ಅನಿಲ್ ಕಂಕನಾಡಿ, ಡಾ.ಯಶು ಕುಮಾರ್, ಅಣ್ಣು ಖಂಡಿಗ, ಪರಮೇಶ್ವರ್ ಸಾಲಿಯಾನ್, ಅಣ್ಣು ವಾಮದಪದವು, ಚಂದಪ್ಪ ವಾಮದಪದವು, ದಿವಾಕರ ಚೆಂಡ್ತಿಮಾರ್, ಸದಾನಂದ ನಾವೂರು, ರಾಜ ಚೆಂಡ್ತಿಮಾರ್, ಶ್ರೀನಿವಾಸ್ ಅರ್ಬಿಗುಡ್ಡೆ, ರಾಜೀವ್ ಕಕ್ಕೆಪದವು, ಸತೀಶ್ ಅರಳ, ಮೋಹನ್ ಚೆಂಡ್ತಿಮಾರ್ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.


from India & World News in Kannada | VK Polls https://ift.tt/3dLA9bY

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...