ಒಲಿಂಪಿಕ್ಸ್‌ ಟಿಟಿ: ಆರಂಭಿಕ ಹಿನ್ನಡೆ ಬದಿಗೊತ್ತಿ 3ನೇ ಸುತ್ತು ಗೆದ್ದ ಮನಿಕಾ!

ಟೋಕಿಯೋ: ಭಾರತದ ಸ್ಟಾರ್‌ ಆಟಗಾರ್ತಿ , ಟೂರ್ನಿಯ ಮೂರನೇ ಸುತ್ತಿನ ಪಂದ್ಯದಲ್ಲಿ ಸೋಲಿನ ಸುಳಿಯಿಂದ ಪಾರಾಗುವ ಮೂಲಕ ಅದ್ಭುತ ಜಯ ದಾಖಲಿಸಿದ್ದಾರೆ. ಭಾನುವಾರ ನಡೆದ ಮಹಿಳಾ ಸಿಂಗಲ್ಸ್‌ ವಿಭಾಗದ ಮೂರನೇ ಸುತ್ತಿನ ಪಂದ್ಯದಲ್ಲಿ ಮಿಂಚಿದ ಮನಿಕಾ ಬಾತ್ರ, ಆರಂಭಿಕ ಎರಡು ಗೇಮ್‌ಗಳಲ್ಲಿ ಹೀನಾಯವಾಗಿ ಸೋತರೂ ಅದ್ಭುತ ಕಮ್‌ಬ್ಯಾಕ್‌ ಮಾಡಿದರು. ವಿಶ್ವದ 32ನೇ ಶ್ರೇಯಾಂಕ ಹೊಂದಿರುವ ಯುಕ್ರೇನ್‌ನ ಆಟಗಾರ್ತಿ ಮಾರ್ಗರಿಟಾ ಪೊಸೋಟ್‌ಸ್ಕಾ ಎದುರು 4-11, 4-11, 11-7, 12-10, 8-11, 11-5, 11-7 ಗೇಮ್‌ಗಳ ಜಯ ತಮ್ಮದಾಗಿಸಿಕೊಂಡರು. ಏಷ್ಯನ್‌ ಗೇಮ್ಸ್‌ ಮತ್ತು ಕಾಮನ್‌ವೆಲ್ತ್‌ ಗೇಮ್ಸ್‌ ಪದಕ ವಿಜೇತೆ ಹಾಗೂ ರಾಜೀವ್‌ ಗಾಂಧಿ ಖೇಲ್‌ ರತ್ನ ಪ್ರಶಸ್ತಿ ಪುರಸ್ಕೃತ ಆಟಗಾರ್ತಿ ಮನಿಕಾ ಬರೋಬ್ಬರಿ 57 ನಿಮಿಷಗಳ ಕಾಲ ಹೋರಾಟ ನಡೆಸಿ 3ನೇ ಸುತ್ತಿನಲ್ಲಿ ಜಯ ದಕ್ಕಿಸಿಕೊಂಡರು. ವಿಶ್ವದ 57ನೇ ಶ್ರೇಯಾಂಕ ಹೊಂದಿರುವ ಮನಿಕಾ ಈ ಜಯದೊಂದಿಗೆ ನಾಲ್ಕನೇ ಸುತ್ತಿಗೆ ಕಾಲಿಟ್ಟಿದ್ದಾರೆ. ಆರಂಭದಲ್ಲಿ ಸ್ವಯಂಕೃತ ತಪ್ಪುಗಳಿಂದಾಗಿ ಎದುರಾಳಿಗೆ ಅಂಕಬಿಟ್ಟುಕೊಟ್ಟು ಹಿನ್ನಡೆ ಅನುಭವಿಸಿದ್ದ ಮನಿಕಾ, ಕೂಡಲೇ ತಮ್ಮ ತಪ್ಪುಗಳನ್ನು ತಿದ್ದುಕೊಂಡರು. ಜೊತೆಗೆ ಬಾಡಿ ಲೈನ್‌ ಸ್ಮ್ಯಾಷ್‌ಗಳನ್ನು ಬಳಕೆಗೆ ತಂದು ಎದುರಾಳಿಯ ಏಕಾಗ್ರತೆಗೆ ಭಂಗ ತಂದು ಪಂದ್ಯ ಗೆಲ್ಲುವಲ್ಲಿ ಸಫಲರಾದರು. ಪುರುಷರ ಸಿಂಗಲ್ಸ್‌ನಲ್ಲಿ ನಿರಾಶೆಭಾರತದ ಭರವಸೆಯ ಆಟಗಾರ ಜಿ ಸತಿಯನ್‌ ಪುರುಷರ ಸಿಂಗಲ್ಸ್‌ ವಿಭಾಗದ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ. ನಿರೀಕ್ಷಿತ ಆಟ ತರಲು ವಿಫಲರಾದ ಸತಿಯನ್‌ ತಮಗಿಂತಲೂ ಕಡಿಮೆ ಶ್ರೇಯಾಂಕ ಹೊಂದಿದ್ದ ಹಾಂಕಾಂಗ್‌ನ ಸುಯ್‌ ಹಾಂಗ್‌ ಲಾಮ್‌ ಎದುದು 3-4 ಅಂತರದ ಗೇಮ್‌ಗಳಿಂದ ಸೋಲೊಪ್ಪಿಕೊಂಡರು. ವಿಶ್ವದ 38ನೇ ಶ್ರೇಯಾಂಕ ಹೊಂದಿರುವ ಸತಿಯನ್‌ 3-1 ಅಂತರದ ಗೇಮ್‌ಗಳ ಅಮೋಘ ಮುನ್ನಡೆಯಲ್ಲಿದ್ದರು. ಆದರೂ 95ನೇ ಶ್ರೇಯಾಂಕಿತ ಆಟಗಾರನ ಎದುರು ಅಂತಿಮ 3 ಗೇಮ್‌ಗಳಲ್ಲಿ ಸತತ ಸೋಲುಂಡು ಸ್ಪರ್ಧೆಯಿಂದ ಹೊರಬಿದ್ದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2UMlczR

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...