ಪ್ರವಾಹದ ನೀರು ಹೊರ ಹಾಕಿದ್ದಕ್ಕೆ ಜಾತಿನಿಂದನೆ; ಸಿಎಂ ತವರೂರಲ್ಲಿ 23 ಜನರ ವಿರುದ್ಧ ಪ್ರಕರಣ ದಾಖಲು

ಶಿರಾಳಕೊಪ್ಪ: ಮುಖ್ಯಮಂತ್ರಿ ಬಿಎಸ್‌ವೈ ತವರು ಕ್ಷೇತ್ರ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪಟ್ಟಣದ ಪೊಲೀಸ್‌ ಠಾಣೆಯಲ್ಲಿ 23 ಜನರ ವಿರುದ್ಧ ದಾಖಲಾಗಿದೆ. ಶಿರಾಳಕೊಪ್ಪದ ಮಾಯತ್ತಮ್ಮನ ಮುಚಡಿ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ಕುಟುಂಬದ ಮೇಲೆ ಮುಂದುವರಿದ ಜನಾಂಗದ ಕೆಲವರು ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಸವರಾಜಪ್ಪ, ಮಲ್ಲೇಶಪ್ಪ ಹೊಟ್ಟೆಗೌಡ್ರು, ಮಾಲತೇಶ್‌ ಮುತ್ತಳಿ ಸೇರಿದಂತೆ 23 ಜನರ ವಿರುದ್ಧ ಶನಿವಾರ ದೂರು ನೀಡಲಾಗಿದೆ. ಗಲಾಟೆಗೆ ಕಾರಣ: ಶಿಕಾರಿಪುರದಲ್ಲಿ ವ್ಯಾಪಕ ಮಳೆಯಾಗಿದ್ದರಿಂದ ಮಾಯತಮ್ಮನ ಮುಚಡಿ ಗ್ರಾಮದ ಪರಿಶಿಷ್ಟ ಜಾತಿ ಸಮುದಾಯಗಳ ಕಾಲೊನಿ ಜಲಮಯವಾಗಿತ್ತು. ಮನೆಗಳಿಗೆ ನೀರು ನುಗ್ಗಿ ಜನ ಪರದಾಡುತಿದ್ದರು. ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಸದಸ್ಯರ ಅನುಮತಿ ಪಡೆದು ಜೆಸಿಬಿ ಸಹಾಯದಿಂದ ನೀರನ್ನು ಹೊರ ಹಾಕಲಾಗಿದೆ. ಇದೇ ಕಾರಣಕ್ಕೆ ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆಂದು ವೀರೇಶ್‌ ದೂರು ನೀಡಿದ್ದಾರೆ. ದೂರಿನನ್ವಯ ಠಾಣೆಯಲ್ಲಿ ಐಪಿಸಿ ಕಲಂ 143, 147, 504, 506 ಸಹಿತ 149 ಹಾಗೂ ಎಸ್‌ಸಿ, ಎಸ್‌ಟಿ ಕಾಯಿದೆ ಅಡಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.


from India & World News in Kannada | VK Polls https://ift.tt/3eXm4IR

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...