ಫೈಜರ್, ಮಾಡೆರ್ನಾದಂತಹ ವಿದೇಶಿ ಲಸಿಕೆ ಕಂಪೆನಿಗಳಿಗೆ ಭಾರತದಲ್ಲಿ ಮಹತ್ವದ ವಿನಾಯಿತಿ ಸಾಧ್ಯತೆ

ಹೊಸದಿಲ್ಲಿ: ವಿವಿಧ ದೇಶಗಳಲ್ಲಿ ಹಾಗೂ ಡಬ್ಲ್ಯೂಎಚ್‌ಒ ತುರ್ತು ಬಳಕೆಗೆ ಅನುಮೋದನೆ ನೀಡಿರುವ ವಿದೇಶಿ ಲಸಿಕೆಗಳನ್ನು ಭಾರತದಲ್ಲಿ ಪ್ರಯೋಗಕ್ಕೆ ಒಳಪಡಿಸುವ ಅಗತ್ಯವಿಲ್ಲ ಎಂದು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ () ಹೇಳಿದೆ. ದೇಶದಲ್ಲಿ ಅನುಮೋದನೆಗೊಂಡಿರುವ ಮೂರು ಲಸಿಕೆಗಳ ನಡುವೆಯೂ ತೀವ್ರ ಕೊರತೆಯುಂಟಾಗಿರುವ ಹಿನ್ನೆಲೆಯಲ್ಲಿ ಅಭಿಯಾನವನ್ನು ಚುರುಕುಗೊಳಿಸುವ ಪ್ರಯತ್ನವಾಗಿ ಅದು ಈ ಕ್ರಮಕ್ಕೆ ಮುಂದಾಗಿದೆ. ಭಾರತದಲ್ಲಿ ಸ್ಥಳೀಯ ಪ್ರಯೋಗಳನ್ನು ನಡೆಸದೆಯೇ ಹಾಗೂ ಇಲ್ಲಿನ ಕಾನೂನುಗಳಡಿಯಲ್ಲಿ ಪರಿಹಾರಾತ್ಮಕ ಹೊಣೆಗಳಿಂದ ರಕ್ಷಣೆ ಒದಗಿಸುವಂತಹ ವಿನಾಯಿತಿಗಳನ್ನು ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿರುವ ಫೈಜರ್ ಮತ್ತು ಮಾಡೆರ್ನಾದಂತಹ ಲಸಿಕೆಗಳು ಭಾರತಕ್ಕೆ ಪ್ರವೇಶಿಸಲು ಈ ನಿರ್ಧಾರ ಅನುವು ಮಾಡಿಕೊಡಲಿದೆ. ಈಗಾಗಲೇ ಕೆಲವು ನಿರ್ದಿಷ್ಟ ದೇಶಗಳು ಅಥವಾ ಆರೋಗ್ಯ ಸಂಸ್ಥೆಗಳಿಂದ ಅನುಮೋದನೆ ಪಡೆದಿರುವ ವಿದೇಶಿ ಕಂಪೆನಿಗಳ ಲಸಿಕೆ ಬಳಕೆಗೆ ಅನುಮೋದನೆಗೂ ಮುನ್ನ ಅವುಗಳ ಪ್ರಯೋಗ ನಡೆಸುವುದು, ಭಾರತದಲ್ಲಿ ಆ ಲಸಿಕೆಗಳ ಗುಣಮಟ್ಟ ಮತ್ತು ಸ್ಥಿರತೆಗಳ ಪರೀಕ್ಷೆಗಳನ್ನು ನಡೆಸುವ ನಿಯಮಗಳಿಂದ ವಿನಾಯಿತಿಗಳನ್ನು ನೀಡಿರುವುದಾಗಿ ಡಿಸಿಜಿಐ ತಿಳಿಸಿದೆ. 'ಭಾರತದಲ್ಲಿ ಇತ್ತೀಚಿನ ಕೋವಿಡ್ 19 ಪ್ರಕರಣಗಳಲ್ಲಿನ ತೀವ್ರ ಹೆಚ್ಚಳದ ಕಾರಣದಿಂದ ಭಾರಿ ಲಸಿಕೆ ಕಾರ್ಯಕ್ರಮ ನಡೆಯುವ ಅಗತ್ಯವಿರುವ ಹಿನ್ನೆಲೆಯಲ್ಲಿ ಮತ್ತು ಆಮದು ಲಸಿಕೆಗಳ ಲಭ್ಯತೆಯನ್ನು ಹೆಚ್ಚಿಸುವ ಅವಶ್ಯಕತೆ ಇರುವುದರಿಂದ ಕೆಲವು ವಿನಾಯಿತಿಗಳನ್ನು ನೀಡಲಾಗಿದೆ' ಎಂದು ಡಿಸಿಜಿಐ ಮುಖ್ಯಸ್ಥ ವಿಜಿ ಸೋಮಾನಿ ತಿಳಿಸಿದ್ದಾರೆ. ಅಮೆರಿಕದ ಎಫ್‌ಡಿಎ, ಇಎಂಎ, ಬ್ರಿಟನ್‌ನ ಎಂಎಚ್‌ಆರ್‌ಎ, ಜಪಾನ್‌ನ ಪಿಎಂಡಿಎ ಅಥವಾ ಡಬ್ಲ್ಯೂಎಚ್‌ಒ ಪಟ್ಟಿ ಮಾಡಿರುವ ತುರ್ತು ಬಳಕೆ ಪಟ್ಟಿಯಲ್ಲಿ (ಇಯುಎಲ್) ಈಗಾಗಲೇ ಅನುಮೋದನೆ ಪಡೆದುಕೊಂಡಿರುವ ಲಸಿಕೆಗಳನ್ನು ಭಾರತದಲ್ಲಿ ಪ್ರಯೋಗಾತ್ಮಕ ಪರೀಕ್ಷೆಗಳಿಗೆ ಒಳಪಡಿಸದೆ ನೇರ ತುರ್ತು ಬಳಕೆಗೆ ಅವಕಾಶ ನೀಡಬಹುದು ಎಂದು ಪತ್ರದಲ್ಲಿ ಅವರು ತಿಳಿಸಿದ್ದಾರೆ. ಕೋವಿಡ್ 19 ಲಸಿಕೆ ನಿರ್ವಹಣೆಯ ರಾಷ್ಟ್ರೀಯ ಪರಿಣತರ ಗುಂಪು ಈ ಕ್ರಮಕ್ಕೆ ಶಿಫಾರಸು ಮಾಡಿತ್ತು.


from India & World News in Kannada | VK Polls https://ift.tt/3paEKZu

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...