ಮೋದಿ ವಿರುದ್ಧ ಮೆತ್ತಗಾದ ಶಿವಸೇನೆ, ಮರು ಮೈತ್ರಿಯ ಹೊಸ ಸಾಧ್ಯತೆ

ಮುಂಬಯಿ: ಮಹಾರಾಷ್ಟ್ರ ಸಿಎಂ ಅವರು ದಿಲ್ಲಿಗೆ ತೆರಳಿ ಪ್ರಧಾನಿ ಅವರನ್ನು ಭೇಟಿಯಾಗಿ ಬಂದ ಎರಡು ವಾರಗಳ ನಂತರ, ಬಿಜೆಪಿ ವಿರುದ್ಧ ಗುಡುಗುತ್ತಿದ್ದ ತಣ್ಣಗಾಗಿ ಬಾಂಧವ್ಯದ ಮಾತುಗಳನ್ನು ಆಡಿರುವುದು 'ಹೊಸ ಮೈತ್ರಿ' ಸಾಧ್ಯತೆಯ ಸುಳಿವು ನೀಡಿದೆ. ಈ ವಾರದ 'ಸಾಮ್ನಾ' ಪತ್ರಿಕೆಯಲ್ಲಿ ಪ್ರಕಟವಾಗಿರುವ ಸಂಪಾದಕೀಯದಲ್ಲಿ, ''ಪ್ರಧಾನಿ ಮೋದಿ ಅವರೊಂದಿಗೆ ಮುಂಚಿನಿಂದಲೂ ಯಾವುದೇ ಕಹಿಯಾದ ಸ್ನೇಹವಿರಲಿಲ್ಲ. ಹಾಗಾಗಿ ಸೌಹಾರ್ದಯುತ ಬಾಂಧವ್ಯ ಮಾಡಿಕೊಳ್ಳುವ ಪ್ರಶ್ನೆ ಉದ್ಭವಿಸಲ್ಲ. ಬಾಂಧವ್ಯ ಮುಂದುವರಿಯಲಿದೆ. ಮಹಾರಾಷ್ಟ್ರ ಸರಕಾರಕ್ಕೂ ಪ್ರಧಾನಿ ಜತೆಗೆ ಉತ್ತಮ ಸ್ನೇಹವಿದೆ. ಮೋದಿ ಒಳ್ಳೆಯ ನಾಯಕ,'' ಎಂದು ಬಣ್ಣಿಸಲಾಗಿದೆ. ಈ ಮೂಲಕ ಹಳೆಯ ಮೈತ್ರಿಗೆ ಮರಳುವ ಇಚ್ಛೆಯನ್ನು ಶಿವಸೇನೆ ಪರೋಕ್ಷವಾಗಿ ವ್ಯಕ್ತಪಡಿಸಿದೆ. ಶೀಘ್ರವೇ ಬಿಜೆಪಿ-ಶಿವಸೇನೆ ಮೈತ್ರಿ ಮುಂಚಿನಂತೆ ಆದರೂ ಅಚ್ಚರಿಯಿಲ್ಲ ಎಂಬ ನಿರೀಕ್ಷೆಯನ್ನು ರಾಜಕೀಯ ವಿಶ್ಲೇಷಕರು ವ್ಯಕ್ತಪಡಿಸಿದ್ದಾರೆ. ಬಾಳಾ ಸಾಹೇಬರಿಂದ ಅಸ್ತಿತ್ವ ತುರ್ತು ಸಂದರ್ಭವೊಂದರಲ್ಲಿ ಕಾಂಗ್ರೆಸ್‌ ಜತೆಗೆ ಶಿವಸೇನೆ ವಿಲೀನದ ಪ್ರಸ್ತಾವನೆ ಇತ್ತು. ಆದರೆ, ಅಸ್ತಿತ್ವ ಕಾಪಾಡಿಕೊಳ್ಳುವ ಉದ್ದೇಶದಿಂದ ಬಾಳಾ ಸಾಹೇಬ ಠಾಕ್ರೆ ಅವರು ಇದಕ್ಕೆ ಒಪ್ಪಲಿಲ್ಲ. ಹಾಗಾಗಿ ಪಕ್ಷದ ಶಕ್ತಿಯಾದ ಶಿವಸೈನಿಕರು , ಈಗ ಶಾಸಕ, ಸಂಸದರಾಗಿ ಅಧಿಕಾರ ಹಿಡಿಯಲು ಸಾಧ್ಯವಾಗಿದೆ. ಅನ್ಯಾಯದ ವಿರುದ್ಧ ಸ್ವತಂತ್ರ ಧ್ವನಿ ಎತ್ತಲು ಸಾಮರ್ಥ್ಯ ಸಿಕ್ಕಿದೆ ಎಂದು ಶಿವಸೇನೆ ಮುಖಂಡರು ನೆನಪಿಸಿಕೊಂಡಿದ್ದಾರೆ. ಬಿಜೆಪಿ ಜತೆಗಿನ ಮರು ಮೈತ್ರಿಗಾಗಿ ಒತ್ತಾಯಿಸಿ ಉದ್ಧವ್‌ ಠಾಕ್ರೆಗೆ ಇತ್ತೀಚೆಗೆ ಪತ್ರ ಬರೆದಿದ್ದ ಶಿವಸೇನೆ ಶಾಸಕ ಪ್ರತಾಪ್‌ ಸರ್ನಾಯಕ್‌ ಅವರ ಕುರಿತು ಸಾಮ್ನಾದಲ್ಲಿ ಉಲ್ಲೇಖಿಸಲಾಗಿದ್ದು, ಅವರು ಪಕ್ಷಕ್ಕಿಂತ ದೊಡ್ಡವರಲ್ಲ ಎಂದು ಎಚ್ಚರಿಸಲಾಗಿದೆ. ಮಹಾರಾಷ್ಟ್ರದ ಆಡಳಿತಾರೂಢ ಮಹಾವಿಕಾಸ್‌ ಅಘಾಡಿಯ ಭಾಗವಾದ ಎನ್‌ಸಿಪಿಯ ವರಿಷ್ಠ ಶರದ್‌ ಪವಾರ್‌ ಅವರು ಕಾಂಗ್ರೆಸ್‌ ಹಾಗೂ ಇತರ ಪ್ರತಿಪಕ್ಷಗಳ ನಾಯಕರೊಂದಿಗೆ ಬಿಜೆಪಿ ವಿರುದ್ಧ ಪ್ರಬಲ ಒಕ್ಕೂಟ ರಚನೆಗೆ ಸಿದ್ಧತೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸಾಮ್ನಾ ಸಂಪಾದಕೀಯ ಮಹತ್ವ ಪಡೆದಿದೆ.


from India & World News in Kannada | VK Polls https://ift.tt/3d9ij25

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...