ಮಳೆಗಾಲ ಬಂತೆಂದರೆ ಶುರುವಾಗುತ್ತಿದ್ದ ಆತಂಕ ದೂರ; ಡೆಂಗೆ, ಚಿಕೂನ್‌ ಗುನ್ಯಾ, ಮಲೇರಿಯಾ ಕ್ಷೀಣ!

ಗಿರೀಶ ಎಸ್‌.ಕಲ್ಗುಡಿ ತುಮಕೂರು: ಐದು ವರ್ಷಗಳ ಹಿಂದೆ ಶತಕದ ಗಡಿ ದಾಟುತ್ತಿದ್ದ , ಮತ್ತು ರೋಗಗಳ ಸಂಖ್ಯೆ ಕಡಿಮೆಯಾಗಿದೆ. 2015ರಲ್ಲಿ160 ಡೆಂಗೆ, 229 ಚಿಕೂನ್‌ ಗುನ್ಯಾ ಮತ್ತು 68 ಮಲೇರಿಯಾ ಪ್ರಕರಣಗಳು ದಾಖಲಾಗಿದ್ದವು. ಆದರೆ, ಕಳೆದ 2020ನೇ ಸಾಲಿನಲ್ಲಿ30 ಡೆಂಗೆ, 78 ಚಿಕೂನ್‌ ಗುನ್ಯಾ ಹಾಗೂ 6 ಮಲೇರಿಯಾ ಪ್ರಕರಣಗಳು ಮಾತ್ರ ಜಿಲ್ಲೆಯಲ್ಲಿ ದಾಖಲಾಗಿವೆ. ಇರಲಿ ಎಚ್ಚರಕೊರೊನಾ ಮಹಾಮಾರಿ ಅಟ್ಟಹಾಸದ ಜತೆಗೆ ಮಳೆಗಾಲದಲ್ಲಿ ಉಲ್ಬಣಿಸುವ ಡೆಂಗೆ, ಚಿಕೂನ್‌ ಗುನ್ಯಾ, ಮಲೇರಿಯಾದಂತಹ ರೋಗಳ ಬಗ್ಗೆ ಎಚ್ಚರಿಕೆಯಿಂದ ಇರುವುದು ಅತ್ಯಗತ್ಯ. ಸ್ವಚ್ಛತೆ ಕಾಪಾಡಿಕೊಳ್ಳುವುದರ ಜತೆಗೆ ನಿಯಂತ್ರಣಾ ಕ್ರಮಗಳನ್ನು ಅನುಸರಿಸುವುದರಿಂದ ರೋಗಗಳು ಹರಡದಂತೆ ಆರೋಗ್ಯ ಕಾಪಾಡಿಕೊಳ್ಳಬಹುದು. ರಕ್ಷಣಾ ಕ್ರಮ ಅನುಸರಿಸಿಸ್ವಚ್ಛತೆಗೆ ಆದ್ಯತೆ ನೀಡಬೇಕು. ನೀರು ಸಂಗ್ರಹವಾಗುವ ಗುಂಡಿಗಳನ್ನು ಮುಚ್ಚಬೇಕು. ಕಸವನ್ನು ಎಲ್ಲೆಂದರಲ್ಲಿ ಎಸೆಯುವುದಕ್ಕೆ ಕಡಿವಾಣ ಹಾಕಬೇಕು. ಖಾಲಿ ನಿವೇಶನಗಳಲ್ಲಿಯೂ ಸ್ವಚ್ಛತೆ ಕಾಪಾಡಬೇಕು. ಸೊಳ್ಳೆಗಳು ಉತ್ಪತ್ತಿಯಾಗದಂತೆ ಕ್ರಮ ವಹಿಸಬೇಕು. ವಾರಕೊಮ್ಮೆ ಒಣ ದಿನಾಚರಣೆ ಮಾಡಬೇಕು. ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ನಾಶ ಮಾಡಬೇಕು. ಸೊಳ್ಳೆ ಕಚ್ಚುವಿಕೆಯಿಂದ ರಕ್ಷಣೆ ಮಾಡಿಕೊಳ್ಳಬೇಕು. ರೋಗಗಳ ಲಕ್ಷಣಗಳು ಜ್ವರ ಬರುವುದು, ಕಣ್ಣಿನ ಹಿಂಭಾಗ ನೋವು, ತಲೆನೋವು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡರೆ, ಮೈಕೈ ನೋವು, ಕೀಲು ನೋವು, ವಾಕರಿಕೆ ಡೆಂಗೆ ಜ್ವರದ ಲಕ್ಷಣ. ಇದ್ದಕ್ಕಿದ್ದಂತೆ ಸಾಧಾರಣದಿಂದ ತೀವ್ರ ಜ್ವರ, ಕಣ್ಣುಗಳು ಕೆಂಪಾಗುವುದು, ಸ್ನಾಯುಗಳ ನೋವು, ಕೀಲುಗಳಲ್ಲಿ ಬಾವು ಅಥವಾ ನೋವು, ಇದರಿಂದ ಓಡಾಡಲು ಸಾಧ್ಯವಾಗದೇ ಇರುವುದು ಚಿಕೂನ್‌ ಗುನ್ಯಾ ಲಕ್ಷಣವಾಗಿದೆ. ನಡುಕದಿಂದ ಕೂಡಿದ ಜ್ವರ, ತಲೆನೋವು, ಜ್ವರದ ಏರಿಳಿತ, ವಾಂತಿ ಮೊದಲಾದವು ಮಲೇರಿಯಾದ ಪ್ರಮುಖ ಲಕ್ಷಣಗಳಾಗಿವೆ. ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಹರಡಬಹುದಾದ ರೋಗಗಳ ನಿಯಂತ್ರಣಕ್ಕೆ ಕ್ರಮ ವಹಿಸಲಾಗಿದೆ. ಹಾಗಾಗಿ ಆತಂಕ ಪಡುವ ಅಗತ್ಯವಿಲ್ಲ. ಸಾರ್ವಜನಿಕರಿಗೂ ಈ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ವೈ.ಎಸ್‌.ಪಾಟೀಲ, ಜಿಲ್ಲಾಧಿಕಾರಿ ಕಳೆದ ಐದು ವರ್ಷದ ಅಂಕಿ ಅಂಶ ವರ್ಷ- ಡೆಂಗೆ -ಚಿಕೂನ್‌ ಗುನ್ಯಾ -ಮಲೇರಿಯಾ 2015 -160 - 229- 68 2016 -96- 209- 57 2017- 406- 305 - 114 2018 -30 -55- 103 2019 -180 -179- 27 2020 -30- 78 -6 2021(ಮೇ) 4 -16 -0


from India & World News in Kannada | VK Polls https://ift.tt/3zSeisR

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...