'ಯಾವ ಸೀಮೆ ಬೌಲಿಂಗ್‌ ರೀ...ಇದು?' ಭಾರತ ತಂಡದ ವೇಗಿಗಳ ವಿರುದ್ಧ ಬಿನ್ನಿ ಕಿಡಿ!

ಹೊಸದಿಲ್ಲಿ: ಇತ್ತೀಚೆಗೆ ಮುಕ್ತಾಯವಾಗಿದ್ದ ನ್ಯೂಜಿಲೆಂಡ್‌ ವಿರುದ್ಧದ ಉದ್ಘಾಟನಾ ಆವೃತ್ತಿಯ ವಿಶ್ವ ಟೆಸ್ಟ್ ಚಾಪಿಯನ್‌ಷಿಪ್‌ ಫೈನಲ್‌ ಹಣಾಹಣಿಯಲ್ಲಿ ಭಾರತ ತಂಡದ ಕಳಪೆ ಬೌಲಿಂಗ್‌ ಪ್ರದರ್ಶನವನ್ನು 1983ರ ವಿಶ್ವಕಪ್‌ ವಿಜೇತ ಮಾಜಿ ಆಲ್‌ರೌಂಡರ್ ರೋಜರ್‌ ಬಿನ್ನಿ ಕಟುವಾಗಿ ಟೀಕಿಸಿದ್ದಾರೆ. ಮಹತ್ವದ ಪಂದ್ಯದ ಮೂರನೇ ದಿನ ನ್ಯೂಜಿಲೆಂಡ್ ತಂಡ ಪ್ರಥಮ ಇನಿಂಗ್ಸ್‌ನಲ್ಲಿ ಎರಡು ವಿಕೆಟ್‌ ನಷ್ಟಕ್ಕೆ 102 ರನ್‌ ಗಳಿಸಲು ಅವಕಾಶ ಮಾಡಿಕೊಟ್ಟ ಭಾರತ ತಂಡದ ಬೌಲಿಂಗ್‌ ಪ್ರದರ್ಶನವನ್ನು ವಿಶೇಷವಾಗಿ ಅವರು ಟೀಕೆ ಮಾಡಿದರು. ಭಾರತದ ಬೌಲರ್‌ಗಳು ಸಾಕಷ್ಟು ಕಠಿಣ ಪರಿಶ್ರಮ ಪಟ್ಟರೂ ಆ ದಿನ ಕೇವಲ ಎರಡು ವಿಕೆಟ್‌ ಪಡೆಯಲು ಮಾತ್ರ ಶಕ್ತವಾಗಿತ್ತು. ನ್ಯೂಸ್‌ 18 ಜೊತೆ ಮಾತನಾಡಿದ ಕರ್ನಾಟಕ ಮೂಲದ ಬಿನ್ನಿ, "ಡಬ್ಲ್ಯುಟಿಸಿ ಪಂದ್ಯದ ಮೂರನೇ ದಿನ ಭಾರತ ತಂಡದ ಬೌಲಿಂಗ್‌ ಪ್ರದರ್ಶನವನ್ನು ವೀಕ್ಷಿಸಿದ್ದು, ಇಂಗ್ಲೆಂಡ್‌ ಟೆಸ್ಟ್‌ ಪಂದ್ಯದಲ್ಲಿ ಬೌಲ್‌ ಮಾಡುವ ಹಾದಿ ಇದು ಅಲ್ಲವೇ ಅಲ್ಲ. ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಎದುರಾಳಿ ತಂಡದ ಬೌಲರ್‌ಗಳು ನಿಮಗೆ ಹೇಗೆ ಬೌಲ್ ಮಾಡಿದ್ರು? ಅದು ಯಾವ ರೀತಿಯ ಪ್ರದರ್ಶನವಾಗಿತ್ತು? ನೀವು ಏಕೆ ಅದೇ ರೀತಿ ಹಾಕಲಿಲ್ಲ?" ಎಂದು ಕಿಡಿಕಾರಿದರು. "ನೀವು ಬೌಲ್‌ ಮಾಡುವಾಗ ಅರ್ಧ ಬ್ಯಾಟ್ಸ್‌ಮನ್‌ಗೆ ನೀವು ಚೆಂಡು ಎಸೆಯಬೇಕು. ಅದು ಬಿಟ್ಟು ನಿಮ್ಮ ಅರ್ಧಕ್ಕೆ ಎಸೆಯುವುದಲ್ಲ. ಎದುರಾಳಿ ಬ್ಯಾಟ್ಸ್‌ಮನ್‌ಗಳು ಉತ್ತಮವಾಗಿ ಬ್ಯಾಟ್‌ ಮಾಡಿದರೆ, ನೀವು ಸೀಮ್‌ ಇಟ್ಟುಕೊಂಡು ಹೆಚ್ಚಿನ ಶಾರ್ಟ್‌ ಎಸೆತಗಳನ್ನು ಹಾಕಬೇಕು. ಅದು ಬಿಟ್ಟು ರಕ್ಷಣಾತ್ಮಕವಾಗಿ ಬ್ಯಾಟ್ಸ್‌ಮನ್‌ ಆಡುವಂತೆ ಬೌಲ್‌ ಮಾಡುವುದಲ್ಲ, ವಿಕೆಟ್‌ ಪಡೆಯುವ ಉದ್ದೇಶದೊಂದಿಗೆ ಆಕ್ರಮಣಕಾರಿಯಾಗಿ ಬೌಲ್‌ ಮಾಡಬೇಕು," ಎಂದು ಹೇಳಿದರು. ನಾಲ್ಕನೇ ದಿನವಾದ ಸೋಮವಾರ ಭಾರತ ತಂಡದ ಬೌಲಿಂಗ್‌ ಪ್ರದರ್ಶನ ಕೊಂಚ ಸಮಾಧಾನ ತರಿಸಿತ್ತು. ಮೊಹಮ್ಮದ್‌ ಶಮಿ 4 ವಿಕೆಟ್‌ಗಳನ್ನು ಪಡೆಯುವ ಮೂಲಕ ನ್ಯೂಜಿಲೆಂಡ್‌ ಪ್ರಥಮ ಇನಿಂಗ್ಸ್‌ನಲ್ಲಿ 249ಕ್ಕೆ ಆಲೌಟ್‌ ಮಾಡಲು ಭಾರತ ತಂಡಕ್ಕೆ ನೆರವಾಗಿದ್ದರು. ಇದರ ಹೊರತಾಗಿಯೂ ಕಿವೀಸ್‌ ಭಾರತದ ವಿರುದ್ಧ 32 ರನ್‌ ಮುನ್ನಡೆ ಸಾಧಿಸಿತ್ತು. "ಇಂಗ್ಲೆಂಡ್‌ ಟೆಸ್ಟ್ ಪಂದ್ಯದಲ್ಲಿ ಭಾರತದ ಬೌಲರ್‌ಗಳ ಬೌಲಿಂಗ್‌ ಪ್ರದರ್ಶನದ ಹಾದಿ ನನಗೆ ಅಚ್ಚರಿ ಮೂಡಿಸಿತ್ತು. ನೀವು ಎಸೆಯುತ್ತಿದ್ದ ಸೀಮಿಂಗ್‌ ಬಾಲ್‌ಗಳನ್ನು ಅವರು ಅತ್ಯುತ್ತಮವಾಗಿ ಆಡುತ್ತಿದ್ದರೆ, ನೀವು ಅದೇ ರೀತಿಯ ಎಸೆತಗಳನ್ನೇ ಮುಂದುವರಿಸುತ್ತಿದ್ದೀರಿ. ಈ ವೇಳೆ ನೀವು ಜೋರಾಗಿ ಚೆಂಡನ್ನು ಪಿಚ್‌ ಮಾಡಬೇಕಾಗಿತ್ತು. ಅಂದಹಾಗೆ ನೀವೇನು ಹೊಸ ಬೌಲರ್‌ಗಳೇನಲ್ಲ. ನಿಮ್ಮ ಬ್ಯಾಟ್ಸ್‌ಮನ್‌ಗಳಿಗೆ ಕಿವೀಸ್‌ ಬೌಲರ್‌ಗಳು ಹೇಗೆ ಬೌಲ್‌ ಮಾಡಿದ್ದರು ಎಂಬುದನ್ನು ನೀವು ಕುಳಿತು ನೋಡಿದ್ದೀರಿ. ಕನಿಷ್ಠ ಅದರಿಂದಾದರೂ ನೀವು ಕಲಿಯಬೇಕಾಗಿತ್ತು," ಎಂದು ವೇಗಿಗಳ ವಿರುದ್ಧ ರೋಜರ್‌ ಬಿನ್ನಿ ಕಿಡಿ ಕಾರಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3jbF0qg

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...