ಬೆಂಗಳೂರು: ರಾಜ್ಯದ ಮಕ್ಕಳಲ್ಲಿ ಕಾಣಿಸಿಕೊಂಡ ಕವಾಸಕಿ ರೋಗದ ಮುಖ್ಯ ಲಕ್ಷಣ ಬಹು ಅಂಗಾಂಗ ಉರಿ, ಊತದ ರೋಗ ಎಂದು ಗುರುತಿಸಲಾಗಿದ್ದು, ಆರಂಭಿಕ ಲಕ್ಷಣ ನಿರ್ಲಕ್ಷ್ಯ ಮಾಡಿದರೆ ಹೃದಯಾಘಾತ, ಬಹು ಅಂಗಾಂಗ ವೈಫಲ್ಯ ಸಾಧ್ಯತೆ ಇದೆ ಎಂದು ಸರಕಾರಕ್ಕೆ ವೈದ್ಯರು ಎಚ್ಚರಿಸಿದ್ದಾರೆ. ಕೊರೊನಾ ಗುಣಮುಖರಾದ 1ರಿಂದ 16 ವರ್ಷದೊಳಗಿನ ಮಕ್ಕಳಲ್ಲಿ ಈ ರೋಗ ಕಾಣಿಸಿಕೊಳ್ಳುತ್ತಿದ್ದ 8 ದಿನದೊಳಗೆ ಚಿಕಿತ್ಸೆ ಪಡೆದರೆ ತಡೆಗಟ್ಟಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಬೆಂಗಳೂರಿನ ಕೆಲ ಸರಕಾರಿ ಆಸ್ಪತ್ರೆಗಳಲ್ಲಿ ನಾಲ್ಕೈದು ಪ್ರಕರಣ, 2 ಪ್ರಮುಖ ಖಾಸಗಿ ಆಸ್ಪತ್ರೆಗಳಲ್ಲಿ 13 ಮಕ್ಕಳಲ್ಲಿ ಈಗಾಗಲೇ ರೋಗ ಕಾಣಿಸಿಕೊಂಡಿದ್ದು, 1 ಮಗು ತಡವಾಗಿ ಚಿಕಿತ್ಸೆಗೆ ಒಳಗಾದ ಹಿನ್ನೆಲೆ ವೆಂಟಿಲೇಟರ್ ಅವಲಂಬಿಸಿದೆ. ಸರಕಾರ ಶೀಘ್ರ ಜಿಲ್ಲಾಸ್ಪತ್ರೆಗಳಿಗೆ ಔಷಧ ಸಿದ್ಧಪಡಿಸಿಕೊಳ್ಳಬೇಕಾದ ಅನಿವಾರ್ಯವಿದೆ. ಮೊದಲ ಅಲೆಯಲ್ಲಿ ಪತ್ತೆ! ಬಹು ಅಂಗಾಂಗ ಉರಿ, ಊತದ ರೋಗ (ಮಲ್ಟಿ ಇನ್‌ಫ್ಲಮೇಟರೀ ಸಿಂಡ್ರೋಂ)ದಲ್ಲಿ ಎಂಐಎಸ್-ಸಿ ಮತ್ತು ಎಂಐಎಸ್-ಎನ್ ಪ್ರತ್ಯೇಕಿಸಲಾಗಿದೆ. ಎಂಐಎಸ್-ಸಿ ಎನ್ನುವುದು 1 ವರ್ಷದಿಂದ 17ರ ಮಗುವಿಗ ತಾಗುವ ರೋಗ. ಎಂಐಎಸ್-ಎನ್ 30 ದಿನಗಳ ಶಿಶುವಿನಲ್ಲಿ ಪತ್ತೆಯಾಗುವ ರೋಗ. ಕಳೆದ ವರ್ಷದ ಏಪ್ರಿಲ್‌ನಲ್ಲಿ ಮೊದಲ ಬಾರಿಗೆ ಇಂಗ್ಲೆಂಡ್‌ನಲ್ಲಿ ಪತ್ತೆ ಮಾಡಲಾಯಿತು. ಅದಾಗಿ ಒಂದು ವಾರಕ್ಕೆ ಭಾರತದಲ್ಲೂ ಪತ್ತೆ ಮಾಡಲಾಯಿತು. ಕಳೆದ ಬಾರಿ ಪ್ರತಿ 1 ಲಕ್ಷ ಮಕ್ಕಳಲ್ಲಿ 1 ಮಗು ಈ ರೋಗಕ್ಕೀಡಾಗುವ ಸಾಧ್ಯತೆಯಿದ್ದು, 2ನೇ ಅಲೆಯಲ್ಲಿ ಹೆಚ್ಚಾಗಿದೆ ಎಂದು ಬೆಂಗಳೂರು ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯ ಡಾ.ಬಸವರಾಜ ತಿಳಿಸಿದ್ದಾರೆ.
from India & World News in Kannada | VK Polls https://ift.tt/3fZwKqd