ತುಮಕೂರು: ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿ ಮದುವೆಯಾದ ಯುವಕ ಜೈಲುಪಾಲು

ಮಧುಗಿರಿ : ಪ್ರೀತಿಸಿ ಅಪ್ರಾಪ್ತೆಯನ್ನು ಮದುವೆಯಾಗಿದ್ದ ಯುವಕನೊಬ್ಬ ಮತ್ತು ಮಕ್ಕಳ ಲೈಂಗಿಕ ದೌರ್ಜನ್ಯ ಆರೋಪದಡಿ ಜೈಲುಪಾಲಾಗಿದ್ದಾನೆ. ಪಕ್ಕದ ಗೌರಿಬಿದನೂರು ತಾಲೂಕಿನ ರವಿಕುಮಾರ್‌ ಎಂಬಾತ ಅದೇ ತಾಲೂಕಿನ ಜಂತಗಾನಹಳ್ಳಿ ಅಪ್ರಾಪ್ತೆಯೊಂದಿಗೆ ಪ್ರೀತಿಸಿ ಮೇ 28ರಂದು ವಿಧುರಾಶ್ವತ್ಥದ ದೇವಸ್ಥಾನದ ಬಳಿ ಮದುವೆಯಾಗಿದ್ದಾನೆ ಎನ್ನಲಾಗಿದೆ. ಪ್ರೀತಿಸಿ ಮದುವೆಯಾಗಿರುವ ಕಾರಣ ಸ್ವಗ್ರಾಮದಲ್ಲಿ ಇರಲು ಸೂಕ್ತವಲ್ಲವೆಂದು ಕೊಡಿಗೇನಹಳ್ಳಿ ಹೋಬಳಿ ಬೊಮ್ಮೇನಹಳ್ಳಿಯ ವಡ್ಡರಹಟ್ಟಿ ಗ್ರಾಮದಲ್ಲಿ ವಾಸವಿರುವ ರವಿಕುಮಾರ, ಅವರ ಅಕ್ಕ ನಾಗಮಣಿ ಸಹಕಾರದಿಂದ ನವ ಜೋಡಿ ದಾಂಪತ್ಯ ಜೀವನ ನಡೆಸಲು ಮುಂದಾಗಿದ್ದರು. ಅಪ್ರಾಪ್ತೆಯನ್ನು ಗೌರಿಬಿದನೂರು ತಾಲೂಕಿನ ವಿಧುರಾಶ್ವತ್ಥದಲ್ಲಿ ಮದುವೆಯಾಗಿ ಮಧುಗಿರಿ ತಾಲೂಕಿನ ಬೊಮ್ಮೇನಹಳ್ಳಿ ದಾಂಪತ್ಯ ಜೀವನ ನಡೆಸುತ್ತಿರುವ ಕುರಿತು ಮಕ್ಕಳ ಸಹಾಯವಾಣಿಯಲ್ಲಿ ದೂರು ದಾಖಲಾಗಿದೆ. ದೂರಿನ ಮೇರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಡಿಪಿಒ ಅನಿತಾ ಮತ್ತು ಪಿಎಸ್‌ಐ ನಾಗರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಅಪ್ರಾಪ್ತ ಬಾಲಕಿಯನ್ನು (16) ವಿವಾಹವಾದ ರವಿಕುಮಾರ್‌ (28) ಎಂಬಾತನನ್ನು ಬಂಧಿಸಿ ಫೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಾಗಿದೆ. ಮದುವೆಗೆ ಸಹಕರಿಸಿದ ಕೊಡಿಗೇನಹಳ್ಳಿ ಹೋಬಳಿ ಬೊಮ್ಮೇನಹಳ್ಳಿಯ ವಡ್ಡರಹಟ್ಟಿ ಗ್ರಾಮದ ನಾಗಮಣಿ ಮತ್ತು ವೆಂಕಟರಮಣಪ್ಪ ವಿರುದ್ಧ ಪ್ರಕರಣ ದಾಖಲಾಗಿದೆ.


from India & World News in Kannada | VK Polls https://ift.tt/3fHDk5Q

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...