ಮಂಡ್ಯದ ಕಾವೇರಿ ತೀರದಲ್ಲಿ 'ಅನಾಥ ಅಸ್ಥಿ'ಗಳ ಅಪರ ಕರ್ಮಕ್ಕೆ ಸರ್ಕಾರವೇ ಸಾರಥಿ..!

: ಮನುಷ್ಯನೊಬ್ಬ 'ಅಳಿದ ಮೇಲೆ' ಏನಾಗುತ್ತದೆ..? ಇನ್ನೇನು..? ಆತ 'ಮರಳಿ ಮಣ್ಣಿಗೆ' ಸೇರುತ್ತಾನೆ..! ಆದ್ರೆ, ಕೊರೊನಾ ಕಾಲದಲ್ಲಿ ಅಳಿಯೋದು ಹಾಗೂ ಮರಳಿ ಮಣ್ಣಿಗೆ ಸೇರೋದೂ ಕೂಡಾ ಅಷ್ಟು ಸಿಂಪಲ್ ಅಲ್ಲವೇ ಅಲ್ಲ..! ಬದುಕಿದ್ದಾಗ ಕೋಟಿ ಕೋಟಿಗಳ ಲೆಕ್ಕದಲ್ಲಿ ಮಾತನಾಡಿದ್ದ ಮನುಷ್ಯ, ಕೊರೊನಾ ಎಂಬ ಕಣ್ಣಿಗೆ ಕಾಣದ ವೈರಾಣುವಿನ ಹಿಡಿತಕ್ಕೆ ಸಿಕ್ಕು ಉಸಿರು ಚೆಲ್ಲಿದಾಗ, ಆತನಿಗೆ ಏನೂ ಇರಲಿಲ್ಲ.. ಆತನ ಆಸ್ತಿ-ಅಂತಸ್ತುಗಳಿರಲಿ, ಕುಟುಂಬಸ್ಥರೇ ಜೊತೆಗಿರಲಿಲ್ಲ..! ಕೊರೊನಾ ಪೀಡಿತನ ಮೃತದೇಹ ಅನ್ನೋ ಕಾರಣಕ್ಕೆ ಅವರ ಅಂತ್ಯಸಂಸ್ಕಾರ ನೆರವೇರಿಸೋದಕ್ಕೂ ಕುಟುಂಬಸ್ಥರು ಮುಂದೆ ಬಂದಿರಲಿಲ್ಲ. ಹೋದವರೇನೋ ಹೋದರು, ಅವರ ಅಂತ್ಯಸಂಸ್ಕಾರ ಮಾಡಲು ಹೋಗಿ ನಮಗೆ ಕೊರೊನಾ ಬಂದರೆ ಏನು ಮಡೋದು ಎಂಬ ಭಯದಲ್ಲಿ ತಮ್ಮ ಅತ್ಯಾಪ್ತರನ್ನೇ ಅನಾಥ ಶವ ಮಾಡಿಬಿಟ್ಟರು. ಅನಾಥೋ ದೈವ ರಕ್ಷಕಃ ಎಂಬಂತೆ ಅನಾಥ ಶವಗಳಿಗೆ ಸರ್ಕಾರಿ ಸಿಬ್ಬಂದಿಯೇ ಬಂಧುಮಿತ್ರರಾದರು. ಅಂತ್ಯಸಂಸ್ಕಾರ ನೆರವೇರಿಸಿದರು. ಇಷ್ಟೆಲ್ಲಾ ಆದ ಮೇಲೆ ಮೃತರ ವಿಸರ್ಜಿಸಿ ಅವರ ಅಪರ ಕರ್ಮ ಮಾಡಿ ಕುಟುಂಬಸ್ಥರನ್ನು ಕೇಳಲು ಸಾಧ್ಯವೇ..? ಹೀಗಾಗಿ, ಅಧಿಕಾರಿಗಳು, ಜನಪ್ರತಿನಿಧಿಗಳೇ ಅಸ್ಥಿ ವಿಸರ್ಜಿಸಬೇಕಾಯ್ತು..! ಬೆಂಗಳೂರಿನಲ್ಲಿ ಬಾಳಿ, ಬದುಕಿ, ಹಾರಾಡಿ, ಹೋರಾಡಿ ಮಡಿದವರೆಲ್ಲರೂ ಮಡಿಕೆಯಲ್ಲಿನ ಬೂದಿಯಾಗಿ ನದಿ ತಟದಲ್ಲಿ ಸಾಲಾಗಿ, ಸೈಲೆಂಟಾಗಿ ಕುಳಿತಿದ್ದರು. ಹರಿವ ನದಿ, ದೂರದಲ್ಲಿ ಕಾಣುವ ದಟ್ಟ ಹಸಿರು ಕಾನನದ ನಿಸರ್ಗ ಸೊಬಗು ಸವಿಯುವ ಸಹೃದಯತೆ ಯಾರಿಗೂ ಇರಲಿಲ್ಲ. ಏಕೆಂದರೆ, ಅಸ್ಥಿಗಳ ಜೊತೆ ಬಂದವರೆಲ್ಲರಿಗೂ ಸ್ಮಶಾನ ವೈರಾಗ್ಯ ಕಾಡುತ್ತಿತ್ತು.. ಕೊನೆಗೂ ಸಾಮೂಹಿಕ ಅಸ್ಥಿ ವಿಸರ್ಜನಾ ಕಾರ್ಯ ಆರಂಭವಾಗೇಬಿಟ್ಟಿತು. ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಬೆಳಕವಾಡಿ ಗ್ರಾಮದ ತೀರದ ಸ್ನಾನಘಟ್ಟದ ಕಾಶಿ ವಿಶ್ವನಾಥ ದೇಗುಲದ ಬಳಿ ಸುಮಾರು 1,000ಕ್ಕೂ ಹೆಚ್ಚು ಮಂದಿಯ ಅಸ್ಥಿಗಳನ್ನು ಸಾಲಾಗಿ ಜೋಡಿಸಿ ಇಡಲಾಯ್ತು. ಹೂಗಳಿಂದ ಸಿಂಗರಿಸಲಾಯ್ತು. ಹಿಂದೂ ಧರ್ಮದ ವಿಧಿ ವಿಧಾನದಂತೆ ಋತ್ವಿಕರ ಸಾರಥ್ಯದಲ್ಲಿ ನಡೆದ ಅಪರ ಕರ್ಮದಲ್ಲಿ ಸರ್ಕಾರದ ಪರವಾಗಿ ಸಚಿವ ಆರ್‌ ಅಶೋಕ್ ಹಾಗೂ ಕೆಸಿ. ನಾರಾಯಣ ಗೌಡ ಭಾಗಿಯಾದರು. ಜೊತೆಗೆ ಜಿಲ್ಲೆಯ ಅಧಿಕಾರಿಗಳೂ ಇದ್ದರು. ಮಂಡ್ಯ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತದ ಸಿಬ್ಬಂದಿ, ಎಲ್ಲರ ಅಸ್ಥಿಗಳನ್ನು ಕಾವೇರಿಗೆ ಅರ್ಪಿಸಿ ಕೈತೊಳೆದುಕೊಂಡರು.


from India & World News in Kannada | VK Polls https://ift.tt/3vKWflR

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...