ತಮ್ಮ ಪ್ರಸ್ತಾವ ಕಡೆಗಣಿಸಿದ ಕೇಂದ್ರ: ಪ್ರಧಾನಿ ಮೋದಿಗೆ ಅಸಮಾಧಾನ ತಿಳಿಸಿದ ಮಲ್ಲಿಕಾರ್ಜುನ ಖರ್ಗೆ

ಹೊಸದಿಲ್ಲಿ: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಅಧ್ಯಕ್ಷ ಅಥವಾ ಸದಸ್ಯರನ್ನಾಗಿ ಅಲ್ಪಸಂಖ್ಯಾತ ಅಥವಾ ಬುಡಕಟ್ಟು ಜಾತಿಗಳಿಂದ ಕನಿಷ್ಠ ಒಬ್ಬರನ್ನಾದರೂ ನೇಮಿಸಬೇಕೆಂಬ ತಮ್ಮ ಪ್ರಸ್ತಾವವನ್ನು ತಿರಸ್ಕರಿಸುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಪ್ರಧಾನಿ ಅವರಿಗೆ ರಾಜ್ಯಸಭೆಯ ವಿರೋಧಪಕ್ಷದ ನಾಯಕ ಪತ್ರ ಬರೆದಿದ್ದಾರೆ. ಆಯೋಗಕ್ಕೆ ಬರುವ ಬಹುತೇಕ ದೂರುಗಳು ಈ ಸಮುದಾಯಗಳಿಗೇ ಸಂಬಂಧಿಸಿರುವುದರಿಂದ ಅಲ್ಪಸಂಖ್ಯಾತ ಅಥವಾ ಬುಡಕಟ್ಟು ಸಮುದಾಯದ ಜಾತಿಗಳ ಒಬ್ಬ ಪ್ರತಿನಿಧಿಯಾದರೂ ಸಮಿತಿಯಲ್ಲಿ ಇರಬೇಕು ಎಂದು ಖರ್ಗೆ ವಾದಿಸಿದ್ದಾರೆ. 'ನನ್ನ ಪ್ರಸ್ತಾವಗಳನ್ನು ಸಮಿತಿ ಸ್ವೀಕರಿಸದ ಕಾರಣ, ಅಧ್ಯಕ್ಷರು ಹಾಗೂ ಸದಸ್ಯರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸಮಿತಿ ನೀಡಿರುವ ಶಿಫಾರಸುಗಳಿಗೆ ನಾನು ಅಸಮ್ಮತಿ ಸೂಚಿಸಿದ್ದೇನೆ' ಎಂದು ಖರ್ಗೆ ಸೋಮವಾರ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಎನ್‌ಎಚ್‌ಆರ್‌ಸಿಯ ಹುದ್ದೆಗಳಿಗಾಗಿ ನೇಮಕಾತಿ ಸಮಿತಿಯ ಸಭೆ ನಡೆದಿತ್ತು. ಅಧ್ಯಕ್ಷ ಅಥವಾ ಸದಸ್ಯರ ಸ್ಥಾನಗಳಿಗೆ ಯಾವುದೇ ಹೊಸ ಹೆಸರುಗಳನ್ನು ಪರಿಗಣಿಸಿಲ್ಲ. ತಾನು ಈಗಾಗಲೇ ಕೆಲವು ಹೆಸರುಗಳನ್ನು ಅಂತಿಮಗೊಳಿಸಿದ್ದಾಗಿ ಸಮಿತಿ ಹೇಳಿತು. ಮೋದಿ ಅವರನ್ನು ಹೊಗಳುವ ಮೂಲಕ ಸುದ್ದಿಯಾಗಿದ್ದ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರುಣ್ ಕುಮಾರ್ ಮಿಶ್ರಾ ಅವರ ಹೆಸರನ್ನು ಈ ಪಟ್ಟಿ ಒಳಗೊಂಡಿದೆ ಎಂದು ಖರ್ಗೆ ಹೇಳಿದ್ದಾರೆ. ಅಲ್ಪಸಂಖ್ಯಾತ ಜಾತಿ ಹಾಗೂ ಬುಡಕಟ್ಟಿನ ಕೆಲವು ಅಭ್ಯರ್ಥಿಗಳ ಹೆಸರನ್ನು ಆಯ್ಕೆ ಸಮಿತಿ ಮುಂದೆ ತರಲು ಅನುಕೂಲವಾಗುವಂತೆ ಕನಿಷ್ಠ ಒಂದು ವಾರದವರೆಗೆ ಸಭೆಯನ್ನು ಮುಂದೂಡಬೇಕೆಂದು ಸಭೆಯಲ್ಲಿ ಪ್ರಸ್ತಾಪಿಸಿದ್ದಾಗಿ ಖರ್ಗೆ ತಿಳಿಸಿದ್ದಾರೆ.


from India & World News in Kannada | VK Polls https://ift.tt/3fJLQRy

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...