ನಾನು ಮುಖ್ಯಮಂತ್ರಿ ಆಗುವ ಆತುರದಲ್ಲಿಲ್ಲ, ನಾನು ಈ ಬಗ್ಗೆ ಯೋಚನೆಯೂ ಮಾಡಿಲ್ಲ: ಮಾರ್ಮಿಕವಾಗಿ ನುಡಿದ ಡಿಕೆಶಿ

ಬೆಂಗಳೂರು: ನಾನು ಸಿಎಂ ಆಗುವ ಆತುರದಲ್ಲಿಲ್ಲ. ನಾನು ಯಾವತ್ತಾದರೂ ಸಿಎಂ ಆಗಬೇಕು ಎಂದು ಯೋಚನೆ ಮಾಡಿಲ್ಲ. ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರುವುದಷ್ಟೇ ನನ್ನ ಗುರಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಶಿವಕುಮಾರ್‌ ಅವರಿಗೆ ಇನ್ನೂ ಅವಕಾಶವಿದ್ದು, 2023ಕ್ಕೆ ಸಿದ್ದರಾಮಯ್ಯನವರು ಸಿಎಂ ಆಗಲಿ ಎಂಬುದಾಗಿ ಕಾಂಗ್ರೆಸ್‌ ಶಾಸಕ ರಾಮಪ್ಪ ಸೇರಿದಂತೆ ಇತರರ ಹೇಳಿಕೆಗೆ ನಗರದಲ್ಲಿ ಬುಧವಾರ ಪ್ರತಿಕ್ರಿಯಿಸಿದರು. ''ಕಲ್ಲು ಪೃಕೃತಿ. ಕಲ್ಲುಒಡೆದು ವಿಧಾನಸೌಧಕ್ಕೆ ಚಪ್ಪಡಿ ಮಾಡಿಕೊಳ್ಳಿ ಎಂದು ಹೇಳಿದ್ದೇನೆ. ಯಾರೆಲ್ಲಾಏನೇನು ಸಲಹೆ ಕೊಡುತ್ತಾರೋ ಸ್ವೀಕರಿಸೋಣ,'' ಎಂದು ಮಾರ್ಮಿಕವಾಗಿ ನುಡಿದರು. ''ಬಿಜೆಪಿಯಲ್ಲಿನ ಸಮಸ್ಯೆಗೂ ಕಾಂಗ್ರೆಸ್‌ನಲ್ಲಿನ ವಿಚಾರಕ್ಕೂ ಬಹಳ ವ್ಯತ್ಯಾಸವಿದೆ. ಈಗ ನಮ್ಮಲ್ಲಿ ಯಾವ ಕುರ್ಚಿಯೂ ಖಾಲಿಯಿಲ್ಲ. ನಮ್ಮ ರೇಸ್‌ ಏನಿದ್ದರೂ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರುವುದು. ಈ ಕಾರ್ಯಕ್ಕೆ ಸಮಯ ವಿನಿಯೋಗಿಸದೆ ಬೇರೆ ಕಾರ್ಯಕ್ಕೆ ವಿನಿಯೋಗಿಸಿದರೆ ವ್ಯರ್ಥವಾಗಲಿದೆ,'' ಎಂದು ಹೇಳಿದರು. ''ಎಲ್ಲರೂ ಸೇರಿ ಮೊದಲು ಬಿಜೆಪಿ ಯನ್ನು ಸೋಲಿಸಿ ನಾವು ಅಧಿಕಾರಕ್ಕೆ ಬರಲು ಏನೆಲ್ಲಾ ಮಾಡಬೇಕು ಅದನ್ನು ಮಾಡಬೇಕು. ಜನ ರಾಜ್ಯದಲ್ಲಿ ಬದಲಾವಣೆ ನಿರೀಕ್ಷಿಸುತ್ತಿದ್ದಾರೆ. ಅದಕ್ಕಾಗಿ ನಾವೆಲ್ಲ ಕೆಲಸ ಮಾಡಬೇಕು,'' ಎಂದು ಹೇಳಿದರು. ಮುಂದಿನ ಚುನಾವಣೆಯ ನೇತೃತ್ವವನ್ನು ಸಿದ್ದರಾಮಯ್ಯನವರೇ ವಹಿಸಬೇಕು, ಆಗ 130ರಿಂದ 150 ಸ್ಥಾನ ಬರಲಿದೆ ಎಂಬುದಾಗಿ ಕೆಲ ಶಾಸಕರ ಹೇಳಿಕೆಗೆ ಡಿ.ಕೆ.ಶಿವಕುಮಾರ್‌, ಬಹಳ ಸಂತೋಷ ಎಂದಷ್ಟೇ ತಿಳಿಸಿದರು.


from India & World News in Kannada | VK Polls https://ift.tt/3qtaJ7Z

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...