ಮೈಸೂರು: ಜಿಲ್ಲಾಧಿಕಾರಿ ಅಧಿಕೃತ ನಿವಾಸದಲ್ಲಿನ ವಿವಾದಿತ ಈಜುಕೊಳ ಕೋವಿಡ್ ಕಾಲದಲ್ಲಿ ನಿರ್ಮಾಣವಾಗಲಿಲ್ಲ ಎಂದು ಐಎಎಸ್ ಅಧಿಕಾರಿ ಸ್ಪಷ್ಟನೆ ನೀಡಿದ್ದಾರೆ. ಅವರು ಮೈಸೂರಿನಲ್ಲಿ ಜಿಲ್ಲಾಧಿಕಾರಿಯಾಗಿದ್ದಾಗ ಸರಕಾರಿ ನಿವಾಸದ ಬಳಿ 28 ಲಕ್ಷ ರೂ. ವೆಚ್ಚದಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಈಜುಕೊಳ ನಿರ್ಮಿಸಿರುವ ಕುರಿತು ಪ್ರಾದೇಶಿಕ ಆಯುಕ್ತರು ಸರಕಾರಕ್ಕೆ ವರದಿ ಸಲ್ಲಿಸಿರುವ ಹಿನ್ನೆಲೆಯಲ್ಲಿಈ ಸ್ಪಷ್ಟನೆ ನೀಡಿದ್ದಾರೆ. ಕೋವಿಡ್ ಸಮಯದಲ್ಲಿ ನಿರ್ಮಾಣವಾಗಿದೆ ಎನ್ನುವ ಆರೋಪ ಸುಳ್ಳು ಎನ್ನುವುದು ಇದೀಗ ಸಾಬೀತಾಗಿದೆ. ಡಿಸೆಂಬರ್ ತಿಂಗಳಿನಲ್ಲಿ ಕೆಲಸ ಆರಂಭಿಸಲಾಗಿತ್ತು. ಆ ವೇಳೆ ಕೋವಿಡ್ ಹರಡುತ್ತಿರಲಿಲ್ಲ ಹಾಗೂ ಎರಡನೇ ಅಲೆಯ ಯಾವುದೇ ಸೂಚನೆ ಇರಲಿಲ್ಲ. ಅಲ್ಲದೆ, ಕೋವಿಡ್ ನಿಧಿ ದುರ್ಬಳಕೆಯಾಗಲಿಲ್ಲ ಎನ್ನುವುದು ಕಂಡು ಬಂದಿದೆ. ನಿರ್ಮಿತಿ ಕೇಂದ್ರದ ಹಣ ಬಳಕೆಯಾಗಿದೆ. ಇದಕ್ಕೆ ನಿರ್ಮಿತಿ ಕೇಂದ್ರದ ತಾಂತ್ರಿಕ ಸಮಿತಿ ಹಾಗೂ ಎಕ್ಸಿಕ್ಯೂಟಿವ್ ಕಮಿಟಿ ಈ ಯೋಜನೆಗೆ ಆಡಳಿತಾತ್ಮಕ ಒಪ್ಪಿಗೆ ನೀಡಿತ್ತು ಎಂದು ಹೇಳಿದ್ದಾರೆ. ಜಿಲ್ಲಾಧಿಕಾರಿ ನಿವಾಸ ‘ಜಲಸನ್ನಿಧಿ’ಯಲ್ಲಿ ಈಜುಕೊಳ ನಿರ್ಮಾಣ ಮಾಡಲು ಪಾರಂಪರಿಕ ಸಂರಕ್ಷಣಾ ಸಮಿತಿಯ ಅನುಮತಿಯನ್ನೇ ಪಡೆದಿಲ್ಲ ಎಂದು ಪ್ರಾದೇಶಿಕ ಆಯುಕ್ತರ ತನಿಖಾ ವರದಿ ಹೇಳಿದೆ.ಸ್ವಿಮ್ಮಿಂಗ್ ಪೂಲ್ ನಿರ್ಮಾಣ ಸಂಬಂಧ ಪ್ರಾದೇಶಿಕ ಆಯುಕ್ತರು ರಾಜ್ಯ ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಸಿದ್ದಾರೆ. ಈಜುಕೊಳ ನಿರ್ಮಾಣಕ್ಕೆ 32 ಲಕ್ಷ ರೂಪಾಯಿ ವೆಚ್ಚವಾಗಿದೆ. ಇದಕ್ಕೆ ತಾಂತ್ರಿಕ ವರ್ಗದಿಂದ ,ಲೋಕೋಪಯೋಗಿ ಇಲಾಖೆಯಿಂದ ಅನುಮತಿಯನ್ನೇ ಪಡೆದಿಲ್ಲ ಎಂದು ತಿಳಿದುಬಂದಿತ್ತು.ಇಂತಹ ಕಷ್ಟ ಕಾಲದಲ್ಲಿ ಈಜುಕೊಳ ನಿರ್ಮಾಣದ ಅವಶ್ಯಕತೆ ಇತ್ತಾ ಎಂದು ಜನರು ಪ್ರಶ್ನಿಸಿದ್ದಾರೆ. ಕುತೂಹಲ ಮೂಡಿಸಿದ ರೋಹಿಣಿ ಭೇಟಿ ಬೆಂಗಳೂರು: ಮುಜರಾಯಿ ಇಲಾಖೆ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿರುವ ರೋಹಿಣಿ ಸಿಂಧೂರಿ ಅವರು ಬುಧವಾರ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಹಿರಿಯ ಅಧಿಕಾರಿಯನ್ನು ಭೇಟಿಯಾಗಿ ಚರ್ಚಿಸಿರುವುದು ಕುತೂಹಲ ಮೂಡಿಸಿದೆ. ಮೈಸೂರಿಯಲ್ಲಿಐಎಎಸ್ ಅಧಿಕಾರಿ ಶಿಲ್ಪಾ ನಾಗ್ ಅವರೊಂದಿಗಿನ ಜಟಾಪಟಿ ಬಳಿಕ ವಗಾವಣೆಗೊಂಡು ಮುಜರಾಯಿ ಇಲಾಖೆಗೆ ರೋಹಿಣಿ ಬಂದಿದ್ದಾರೆ. ಏತನ್ಮಧ್ಯೆ, ಬುಧವಾರ ಸಂಜೆ ಹೊತ್ತಿಗೆ ವಿಧಾನಸೌಧಕ್ಕೆ ಭೇಟಿ ನೀಡಿದ ರೋಹಿಣಿ ಸಿಂಧೂರಿ ಅವರು ಡಿಪಿಎಆರ್ ಇಲಾಖೆ ಅಧಿಕಾರಿಯೊಂದಿಗೆ ಕೆಲ ನಿಮಿಷ ಮಾತುಕತೆ ನಡೆಸಿದರು. ನಂತರ ಕೆಲ ಅಧಿಕಾರಿಗಳ ಭೇಟಿಗೆಂದು ಬಹುಮಹಡಿ ಕಟ್ಟಡದ ಕಡೆಗೆ ತೆರಳಿದರು ಎನ್ನಲಾಗಿದೆ.
from India & World News in Kannada | VK Polls https://ift.tt/3qndhVl